AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಷೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್​ಗೆ ಹೋಯ್ತು ಕೇಸ್

Mismatch in declared income and actual income: ಮಹಿಳೆಯೊಬ್ಬರು ಒಂದು ಹಣಕಾಸು ವರ್ಷದಲ್ಲಿ 50 ಲಕ್ಷ ರೂ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿರುತ್ತಾರೆ. ಆದರೆ, ಆ ವರ್ಷದ ಐಟಿ ರಿಟರ್ನ್ಸ್​ನಲ್ಲಿ 4.81 ಲಕ್ಷ ರೂ ಆದಾಯ ಎಂದು ಡಿಕ್ಲೇರ್ ಮಾಡಿರುತ್ತಾರೆ. ಘೋಷಿತ ಆದಾಯಕ್ಕೂ, ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದದ್ದು ಐಟಿ ಇಲಾಖೆ ಗಮನಕ್ಕೆ ಬಂದಿದೆ. ಆ ಹಣ ಎಲ್ಲಿಂದ ಬಂತು ಎಂಬುದಕ್ಕೆ ಸೂಕ್ತ ದಾಖಲೆ ಕೊಡಲು ಮಹಿಳೆ ವಿಫಲರಾಗಿದ್ದಾರೆ.

ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಷೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್​ಗೆ ಹೋಯ್ತು ಕೇಸ್
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2026 | 7:13 PM

Share

ಆದಾಯ ತೆರಿಗೆ ಇಲಾಖೆ ಈಗೀಗ ಬಹಳ ಕ್ರಿಯಾಶೀಲವಾಗಿದ್ದು, ತೆರಿಗೆ ವಂಚಕರು, ಕಪ್ಪು ಹಣದ ಜಾಡನ್ನು ಪತ್ತೆ ಮಾಡಲು ಬಹಳ ಎಚ್ಚರ ವಹಿಸುತ್ತದೆ. ಅಸಹಜ ಆದಾಯ ಹೆಚ್ಚಳ, ವಹಿವಾಟುಗಳಾದಲ್ಲಿ ಅದರ ಗಮನಕ್ಕೆ ಬೇಗ ಬರುತ್ತದೆ. ಅವನ್ನು ಪತ್ತೆ ಮಾಡಲೆಂದೇ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಇಲಾಖೆ (Income Tax department) ಬಳಸುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಘೋಷಿತ ಆದಾಯಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತದಷ್ಟು ಹಣವನ್ನು ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಬಳಸಿ, ಐಟಿ ಕಣ್ಣಿಗೆ ಸಿಕ್ಕು, ಕೋರ್ಟ್ ಕಟಕಟೆ ಏರಬೇಕಾದ ಘಟನೆ ಬೆಳಕಿಗೆ ಬಂದಿದೆ. ಇದು ಪ್ರತಿಯೊಬ್ಬರೂ ಕಲಿಯಬೇಕಾದ ಪಾಠ ಎನಿಸಬಹುದು.

ಪ್ರತಿಭಾ ಎನ್ನುವ ಮಹಿಳೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತನ್ನ ವಾರ್ಷಿಕ ಆದಾಯ 4.81 ಲಕ್ಷ ರೂ ಎಂದು ಐಟಿಆರ್​ನಲ್ಲಿ ಘೋಷಿಸಿದ್ದರು. ಆದರೆ, ಆ ವರ್ಷ ಆಕೆ 50 ಲಕ್ಷ ರೂ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿದ್ದರು. ಇದು ಆದಾಯ ಇಲಾಖೆಯ ಗಮನಕ್ಕೆ ಬಂದಿದೆ.

ಘೋಷಿತ ಆದಾಯ 4.81 ಇರುವಾಗ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಪಾವತಿಸಲು 50 ಲಕ್ಷ ರೂ ಎಲ್ಲಿಂದ ಬಂತು ಎನ್ನುವುದು ಐಟಿ ಅನುಮಾನ. ಆ ಹಣದ ಮೂಲ ಯಾವುದೆಂದು ಸರಿಯಾಗಿ ವಿವರಿಸದಿದ್ದಾಗ ಅದನ್ನು ಅನ್​ಎಕ್ಸ್​ಪ್ಲೇನ್ಡ್ ಇನ್ವೆಸ್ಟ್​ಮೆಂಟ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಯಾವುದೇ ಪ್ರಾಪರ್ಟಿ ಖರೀದಿ ನಡೆದಾಗ, ದೊಡ್ಡ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಯಾದಾಗ, ದೊಡ್ಡ ಮೊತ್ತದ ಬ್ಯಾಂಕ್ ಠೇವಣಿ ಆದಾಗ, ಷೇರು ಅಥವಾ ಮ್ಯೂಚುವಲ್ ಫಂಡ್​ಗಳಲ್ಲಿ ದೊಡ್ಡ ಹೂಡಿಕೆಗಳಾದಾಗ, ಇತ್ಯಾದಿ ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಆ ವಹಿವಾಟು ನಡೆಸಿದ ವ್ಯಕ್ತಿಯ ಆದಾಯ ಹರಿವನ್ನು ಪರಿಶೀಲಿಸುತ್ತಾರೆ. ಐಟಿ ರಿಟರ್ನಸ್​ನಲ್ಲಿ ಫೈಲ್ ಮಾಡಲಾದ ವಿವರವನ್ನು ಪರಿಶೀಲಿಸುತ್ತಾರೆ. ಮಹಿಳೆಯ ಕೇಸ್​ನಲ್ಲೂ ಆಗಿದ್ದು ಇದೆಯೇ.

ಕೋರ್ಟ್​ನಲ್ಲಿ ಮಹಿಳೆಯ ವಿವರಣೆಗೆ ಸಿಗಲಿಲ್ಲ ಸಮಾಧಾನ

50 ಲಕ್ಷ ರೂ ಹಣ ಎಲ್ಲಿಂದ ಬಂತು ಎಂದು ಕೇಳಿದಾಗ ಮಹಿಳೆ, ಅದು ತನ್ನ ವೈಯಕ್ತಿಕ ಹಣವಲ್ಲ. ತನ್ನ ಕುಟುಂಬದ ಹಿಂದೂ ಅವಿಭಜಿತ ಕುಟುಂಬ ಅಥವಾ ಎಚ್​ಯುಎಫ್​ಗೆ ಸೇರಿದ ಹಣ. ತಮ್ಮ ಕುಟುಂಬ ಹೊಂದಿರುವ ಸೇಬಿನ ತೋಟದಿಂದ ಬಂದ ಕೃಷಿ ಆದಾಯದ ಹಣ ಎಂದು ಆಕೆ ವಿವರಣೆ ಕೊಟ್ಟರು.

ಇಂಥ ಸಂದರ್ಭದಲ್ಲಿ ನಿರ್ದಿಷ್ಟ ಆದಾಯ ಬರುವಂತಹ ಕ್ಯಾಷ್ ಫ್ಲೋ ದಾಖಲೆಗಳು, ಎಂಒಯು, ಅಥವಾ ಸೇಲ್ ಡೀಡ್ ಅಥವಾ ಇನ್ನೇನಾದರೂ ಮಾರಾಟ ದಾಖಲೆಗಳಿವೆಯಾ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಮಹಿಳೆಯ ಪ್ರಕರಣದಲ್ಲೂ ಇದನ್ನು ಪರಿಶೀಲಿಸಲಾಗಿದೆ. ಆದರೆ ಸೂಕ್ತ ದಾಖಲೆಗಳು ಸಿಗಲಿಲ್ಲ. ಅಂದರೆ, 50 ಲಕ್ಷ ರೂ ಪ್ರೀಮಿಯಮ್ ಪಾವತಿಗೆ ಬೇಕಾದಷ್ಟು ಹಣವು ಆಕೆಯ ಕುಟುಂಬದಲ್ಲಿ ಇತ್ತು ಎನ್ನುವುದಕ್ಕೆ ದಾಖಲೆಗಳು ಇರಲಿಲ್ಲ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಮಹಿಳೆಯ ವಿವರಣೆಯು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಸಮಾಧಾನ ಕೊಡಲಿಲ್ಲ. ಆಕೆಯ ವಿರುದ್ಧ ತೀರ್ಪು ಬಂದಿತು. ಆಕೆ ದಂಡ ಸಮೇತವಾಗಿ 50 ಲಕ್ಷ ರೂಗೆ ತೆರಿಗೆ ಇತ್ಯಾದಿಯನ್ನು ಪಾವತಿಸುವಂತಾಯಿತು.

ನೀವೂ ಕೂಡ ದೊಡ್ಡ ಮೊತ್ತದ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುತ್ತಿದ್ದಾಗ, ಆ ಹಣ ಎಲ್ಲಿಂದ ಬಂತು ಎನ್ನುವುದಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿರುವುದು ಬಹಳ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್