AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dental Health Tips: ಹಲ್ಲು ಮತ್ತು ವಸಡುಗಳ ಆರೋಗ್ಯ ಕಾಪಾಡಲು ಪ್ರತಿದಿನ ಈ 7 ಸರಳ ಅಭ್ಯಾಸಗಳನ್ನು ಪಾಲಿಸಿ

ಹಲ್ಲು ಮತ್ತು ವಸಡುಗಳ ಆರೋಗ್ಯ ಕಾಪಾಡಲು ಸರಿಯಾದ ಬ್ರಷ್, ಫ್ಲಾಸಿಂಗ್, ಕಡಿಮೆ ಸಕ್ಕರೆ ಸೇವನೆ, ತಂಬಾಕು-ಧೂಮಪಾನದಿಂದ ದೂರವಿರುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಡೆಂಟಲ್ ಚೆಕ್‌ಅಪ್ ಈ ಎಲ್ಲ ಅಭ್ಯಾಸಗಳೂ ಕೂಡ ಬಹಳ ಮುಖ್ಯವಾಗುತ್ತದೆ. ಒಂದು ದಿನ ಮಾತ್ರವಲ್ಲ ದಿನನಿತ್ಯವೂ ಓರಲ್ ಹೈಜಿನ್ (Oral Hygiene) ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು.

Dental Health Tips: ಹಲ್ಲು ಮತ್ತು ವಸಡುಗಳ ಆರೋಗ್ಯ ಕಾಪಾಡಲು ಪ್ರತಿದಿನ ಈ 7 ಸರಳ ಅಭ್ಯಾಸಗಳನ್ನು ಪಾಲಿಸಿ
Dental Health TipsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 17, 2026 | 10:12 PM

Share

ಹಲ್ಲುಗಳು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಕ್ಕಾಗ ಚಂದ ಕಾಣುವುದಕ್ಕೆ ಮಾತ್ರವಲ್ಲ, ಆಹಾರವನ್ನು ಸರಿಯಾಗಿ ಜಗಿಯುವುದಕ್ಕೆ, ಮಾತನಾಡುವುದಕ್ಕೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಾಗುತ್ತದೆ. ಆದರೆ ಸರಿಯಾಗಿ ಬ್ರಷ್ ಮಾಡದಿರುವುದು, ಫ್ಲಾಸಿಂಗ್ ಮಾಡದಿರುವುದು, ಹೆಚ್ಚು ಸಿಹಿ ಸೇವನೆ, ಧೂಮಪಾನ ಮತ್ತು ತಂಬಾಕು ಬಳಕೆಯಂತಹ ಅಭ್ಯಾಸಗಳು ಕ್ಯಾವಿಟಿ, ಹಲ್ಲು ನೋವು, ವಸಡುಗಳ ಊತ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆರಂಭದಲ್ಲಿ ಸಣ್ಣದಾಗಿ ಕಾಣಿಸುವ ಬಾಯಿಯ ಆರೋಗ್ಯ ಸಮಸ್ಯೆಗಳು ನಿರ್ಲಕ್ಷಿಸಿದರೆ ಗಂಭೀರವಾಗಬಹುದು. ಹಾಗಾಗಿ ಪ್ರತಿದಿನದ ಓರಲ್ ಹೈಜಿನ್ (Oral Hygiene) ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾದರೆ ಹಲ್ಲು ಮತ್ತು ವಸಡುಗಳನ್ನು ಆರೋಗ್ಯವಾಗಿಡಲು ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದರ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.

ಹಲ್ಲು ಮತ್ತು ವಸಡುಗಳ ಆರೋಗ್ಯಕ್ಕಾಗಿ ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ: ದಿನಕ್ಕೆ ಕನಿಷ್ಠ ಎರಡು ಬಾರಿ, ಪ್ರತಿ ಬಾರಿ ಸುಮಾರು ಎರಡು ನಿಮಿಷಗಳ ಕಾಲ ಹಲ್ಲುಗಳನ್ನು ಬ್ರಷ್ ಮಾಡುವುದು ಉತ್ತಮ. ಹಲ್ಲುಗಳ ಮೇಲಿನ ಪ್ಲಾಕ್ ಮತ್ತು ಆಹಾರದ ಕಣಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಬ್ರಷ್ ಮಾಡುವಾಗ ವಸಡುಗಳನ್ನೂ ನಿಧಾನವಾಗಿ ಸ್ವಚ್ಛಗೊಳಿಸಿ.

ಪ್ರತಿದಿನ ಫ್ಲಾಸಿಂಗ್ ಮಾಡಿ: ಬ್ರಷ್‌ನಿಂದ ಹಲ್ಲುಗಳ ನಡುವಿನ ಎಲ್ಲ ಭಾಗಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಲ್ಲುಗಳ ಮಧ್ಯೆ ಸಿಲುಕಿರುವ ಆಹಾರ ಕಣಗಳು ಮತ್ತು ಪ್ಲಾಕ್ ತೆಗೆದುಹಾಕಲು Dental Floss ಬಳಸುವುದು ಸಹಾಯಕ.

ಹೆಚ್ಚು ಸಿಹಿ ಸೇವನೆ ಮಾಡುವುದನ್ನು ಕಡಿಮೆ ಮಾಡಿ: ಸಿಹಿ ತಿಂಡಿ, ಚಾಕೊಲೇಟ್, ಸಿಹಿ ಪಾನೀಯಗಳು ಮತ್ತು ಇತರ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಕ್ಯಾವಿಟಿ ಮತ್ತು ದಂತಕ್ಷಯದ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಇವುಗಳ ಪ್ರಮಾಣವನ್ನು ನಿಯಂತ್ರಿಸುವುದು ಉತ್ತಮ.

ಹಲ್ಲುಗಳನ್ನು ತುಂಬಾ ಜೋರಾಗಿ ಉಜ್ಜಬೇಡಿ: ಹಲ್ಲು ಸ್ವಚ್ಛವಾಗಬೇಕು ಎಂಬ ಕಾರಣಕ್ಕೆ ತುಂಬಾ ಬಲವಾಗಿ ಬ್ರಷ್ ಮಾಡಬೇಡಿ. ಇದರಿಂದ ವಸಡುಗಳಿಗೆ ಹಾನಿಯಾಗಬಹುದು ಹಾಗೂ ಹಲ್ಲಿನ ಮೇಲ್ಮೈ ಕೂಡ ಹಾನಿಗೊಳಗಾಗುವ ಸಾಧ್ಯತೆಯಿದೆ. ಮೃದುವಾದ ಬ್ರಷ್ ಬಳಸಿ ನಿಧಾನವಾಗಿ ಸ್ವಚ್ಛಗೊಳಿಸುವುದು ಉತ್ತಮ.

ತಂಬಾಕು ಮತ್ತು ಧೂಮಪಾನದಿಂದ ದೂರವಿರಿ: ತಂಬಾಕು ಸೇವನೆ ಮತ್ತು ಧೂಮಪಾನವು ಬಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವಸಡುಗಳ ಸಮಸ್ಯೆ, ಹಲ್ಲುಗಳ ಹಾನಿ ಸೇರಿದಂತೆ ಹಲವು Oral Health ಸಮಸ್ಯೆಗಳ ಅಪಾಯವನ್ನು ಇವು ಹೆಚ್ಚಿಸಬಹುದು.

ಸಾಕಷ್ಟು ನೀರು ಕುಡಿಯಿರಿ: ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಬಾಯಿಯಲ್ಲಿ ಆಹಾರದ ಕಣಗಳು ಉಳಿಯುವುದನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಸಕ್ಕರೆ ಇರುವ ಪಾನೀಯಗಳ ಬದಲು ನೀರನ್ನು ಆಯ್ಕೆ ಮಾಡುವುದು ಹಲ್ಲಿನ ಆರೋಗ್ಯಕ್ಕೂ ಉತ್ತಮ.

ನಿಯಮಿತವಾಗಿ ಡೆಂಟಿಸ್ಟ್‌ ಬಳಿ ತಪಾಸಣೆ ಮಾಡಿಸಿ: ಹಲ್ಲುಗಳಲ್ಲಿ ಯಾವುದೇ ನೋವು ಇಲ್ಲದಿದ್ದರೂ ನಿಯಮಿತ ಡೆಂಟಲ್ ಚೆಕ್‌ಅಪ್ ಮಾಡಿಸಿಕೊಳ್ಳುವುದು ಉತ್ತಮ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

  • ನಿರಂತರ ಹಲ್ಲು ನೋವು
  • ತಣ್ಣಗಿನ ಅಥವಾ ಬಿಸಿಗೆ ತೀವ್ರ ಜುಮ್ಮೆನಿಸುವುದು
  • ವಸಡುಗಳಿಂದ ಪದೇಪದೇ ರಕ್ತಸ್ರಾವ
  • ವಸಡುಗಳಲ್ಲಿ ಊತ ಅಥವಾ ನೋವು
  • ಹಲ್ಲುಗಳಲ್ಲಿ ಕಪ್ಪು ಅಥವಾ ಕಂದು ಕಲೆಗಳು
  • ಹಲ್ಲುಗಳು ಸಡಿಲವಾಗುವುದು
  • ಚೂಯಿಂಗ್ ಮಾಡುವಾಗ ನೋವು
  • ಬಾಯಿಯಿಂದ ನಿರಂತರ ದುರ್ವಾಸನೆ
  • ಬಾಯಿಯಲ್ಲಿನ ಗಾಯ ದೀರ್ಘಕಾಲ ಗುಣವಾಗದಿರುವುದು

ಕೆಲವು ಬಾಯಿಯ ಸಮಸ್ಯೆಗಳು ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದಿರಬಹುದು. ಆದ್ದರಿಂದ ಸಮಸ್ಯೆ ತೀವ್ರವಾಗುವವರೆಗೆ ಕಾಯದೆ ದಂತ ವೈದ್ಯರ ಸಲಹೆ ಪಡೆಯುವುದು ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್