WPL 2027: ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ
ವುಮೆನ್ಸ್ ಪ್ರೀಮಿಯರ್ ಲೀಗ್ನ ಐದನೇ ಸೀಸನ್‌ನ ಮಿನಿ ಹರಾಜು ಪ್ರಕ್ರಿಯೆ ಅಕ್ಟೋಬರ್ 28, 2026 ರಂದು ಕೇರಳದ ಕೊಚ್ಚಿಯ ಗ್ರಾಂಡ್ ಹ್ಯಾಟ್ ಹೋಟೆಲ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 27 ಸ್ಲಾಟ್ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಅಂದರೆ ಐದು ಫ್ರಾಂಚೈಸಿಗಳಲ್ಲಿ ಕೇವಲ 27 ಸ್ಥಾನಗಳು ಮಾತ್ರ ಖಾಲಿ ಇದೆ.
Updated on: Sep 30, 2026 | 10:37 AM

ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಸೀಸನ್‌ಗಾಗಿ ಎಲ್ಲಾ 5 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರ್ತಿಯರ ಅಧಿಕೃತ ಪಟ್ಟಿಯನ್ನು ಪ್ರಕಟಿಸಿವೆ. ಐದೂ ತಂಡಗಳು ಒಟ್ಟಾಗಿ 23 ವಿದೇಶಿ ಪ್ಲೇಯರ್ಸ್ ಸೇರಿದಂತೆ ಒಟ್ಟು 63 ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಅದರಂತೆ ಮುಂಬರುವ ಮಿನಿ ಹರಾಜಿಗಾಗಿ ಒಟ್ಟು 27 ಸ್ಲಾಟ್‌ಗಳು ಲಭ್ಯವಿದೆ. ಈ ಲಭ್ಯವಿರುವ 27 ಸ್ಲಾಟ್‌ಗಳಲ್ಲಿ ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ... (PC: WPL)

ಯುಪಿ ವಾರಿಯರ್ಸ್ (UPW): ಈ ತಂಡವು ಹರಾಜಿನಲ್ಲಿ ಅತಿ ಹೆಚ್ಚು ಅಂದರೆ 3.65 ಕೋಟಿ ರೂ. ಗಳ ಪರ್ಸ್ ಮೊತ್ತ ಹೊಂದಿದ್ದು, ಒಟ್ಟು 7 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ಇದರಲ್ಲಿ ಗರಿಷ್ಠ 2 ವಿದೇಶಿ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. (PC: WPL)

ಡೆಲ್ಲಿ ಕ್ಯಾಪಿಟಲ್ಸ್ (DC): ಕಳೆದ ಸೀಸನ್‌ನ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಪರ್ಸ್‌ನಲ್ಲಿ 1.10 ಕೋಟಿ ರೂ. ಹಣವನ್ನು ಹೊಂದಿದ್ದು, ಮುಂಬರುವ ಹರಾಜಿನಲ್ಲಿ ಒಟ್ಟು 5 ಆಟಗಾರ್ತಿಯರನ್ನು ತನ್ನದಾಗಿಸಿಕೊಳ್ಳಬಹುದು. ಈ ಐದರಲ್ಲಿ 1 ವಿದೇಶಿ ಸ್ಲಾಟ್ ಸೇರಿದೆ. (PC: WPL)

ಗುಜರಾತ್ ಜೈಂಟ್ಸ್ (GG): ಹರಾಜಿಗೆ ಮುನ್ನ 1.25 ಕೋಟಿ ರೂ. ಹಣವನ್ನು ಉಳಿಸಿಕೊಂಡಿರುವ ಗುಜರಾತ್ ಜೈಂಟ್ಸ್ಗ ಫ್ರಾಂಚೈಸಿಯು ಅತ್ಯಂತ ಕಡಿಮೆ ಅಂದರೆ ಕೇವಲ 3 ಆಟಗಾರ್ತಿಯರನ್ನು ಮಾತ್ರ ಖರೀದಿಸಬೇಕಾಗಿದೆ. ಈ ಮೂವರಲ್ಲಿ 1 ವಿದೇಶಿ ಆಟಗಾರ್ತಿಯ ಸ್ಲಾಟ್ ಲಭ್ಯವಿದೆ. (PC: WPL)

ಮುಂಬೈ ಇಂಡಿಯನ್ಸ್ (MI): ಈ ಬಾರಿ ಎಲ್ಲಾ ತಂಡಗಳಿಗಿಂತ ಅತ್ಯಂತ ಕಡಿಮೆ ಅಂದರೆ ಕೇವಲ 1.00 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಮುಂಬೈ ಇಂಡಿಯನ್ಸ್, ಹರಾಜಿನಲ್ಲಿ ಗರಿಷ್ಠ 7 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ. ಈ ಏಳು ಸ್ಲಾಟ್‌ಗಳಲ್ಲಿ ಒಬ್ಬರು ವಿದೇಶಿ ಆಟಗಾರ್ತಿಯನ್ನೂ ಸಹ ಖರೀದಿಸಲು ಅವಕಾಶವಿದೆ. (PC: WPL)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಬಳಿ ಪ್ರಸ್ತುತ 1.15 ಕೋಟಿ ರೂ. ಬಾಕಿ ಉಳಿದಿದ್ದು, ಹರಾಜಿನಲ್ಲಿ ಒಟ್ಟು 5 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ. ಇದರಲ್ಲಿ 2 ವಿದೇಶಿ ಆಟಗಾರ್ತಿಯರ ಸ್ಲಾಟ್‌ಗಳು ಸೇರಿವೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



