ಖರ್ಜೂರದ ವಿಶೇಷತೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು. ಪ್ರತಿದಿನ ಇದನ್ನು ಸೇವನೆ ಮಾಡುವುದಕ್ಕೆ ಅನೇಕ ಜನರು ಇಷ್ಟಪಡುತ್ತಾರೆ. ಆದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡಬಹುದೇ? ಅಥವಾ ತಿನ್ನುವುದರಿಂದ ಅಪಾಯವಿದೆಯೇ ಎಂಬಿತ್ಯಾದಿ ಸಂದೇಹಗಳಿದ್ದರೆ, ತಜ್ಞರು ಇದನ್ನು ಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಖರ್ಜೂರದಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ವಿಟಮಿನ್ ಎ, ಕೆ ಮತ್ತು ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಸಮೃದ್ಧವಾಗಿವೆ. ಅಲ್ಲದೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಹೇರಳವಾಗಿದೆ, ಜೊತೆಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.