AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ, ಅನೇಕರು ಹೇರ್ ಡೈ ಬಳಸುತ್ತಾರೆ. ಆದರೆ ನಿಮಗೆ ತಿಳಿದಿರಲಿ, ಇದು ಚರ್ಮದ ಮೇಲೂ ಪರಿಣಾಮ ಬೀರಬಹುದು, ಹಲವಾರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲಿಯೂ ಕೂದಲಿಗೆ ಡೈ ಹಾಕುವಾಗ ಕೆಲವೊಮ್ಮೆ ನೆತ್ತಿ, ಕಿವಿಗಳ ಸುತ್ತ ಮತ್ತು ಕುತ್ತಿಗೆಯ ಚರ್ಮದ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರುತ್ತದೆ, ಚರ್ಮವನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ
Hair Dye Side Effects: How It Can Affect Your SkinImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 10, 2026 | 8:28 PM

Share

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ, ಆಹಾರ ಪದ್ಧತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಮತ್ತು ಮಾಲಿನ್ಯ (Pollution) ಈ ಸಮಸ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ಈ ರೀತಿ ಕಂಡುಬರುವ ಬಿಳಿ ಕೂದಲನ್ನು ಮರೆಮಾಡಲು ಹೇರ್ ಡೈ ಬಳಸುತ್ತಾರೆ. ಹಿಂದೆ ವಯಸ್ಸಾದವರು ಮಾತ್ರ ಹೇರ್ ಡೈ (Hair Dye) ಬಳಸುತ್ತಿದ್ದರು. ಆದರೆ ಈಗ ಹಾಗಲ್ಲ. ಯುವಕ, ಯುವತಿಯರೂ ಕೂಡ ನಿಯಮಿತವಾಗಿ ಬಳಸಲು ಆರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆಮಿಕಲ್ ಆಧಾರಿತ ಡೈ, ಹರ್ಬಲ್ ಡೈ ಹಾಗೂ ಇನ್‌ಸ್ಟಂಟ್ ಕಲರ್ ಸೇರಿದಂತೆ ಹಲವು ರೀತಿಯ ಹೇರ್ ಡೈಗಳು ಲಭ್ಯವಿದ್ದು, ಜನ ಇದರ ಬಳಕೆ ಮಾಡುವಾಗ ಸಾಮಾನ್ಯವಾಗಿ ಕೂದಲಿನ ಬಣ್ಣದ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಆದರೆ ಇದರಿಂದ ಚರ್ಮಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕೂದಲಿಗೆ ಡೈ ಹಾಕುವಾಗ ಕೆಲವೊಮ್ಮೆ ನೆತ್ತಿ, ಕಿವಿಗಳ ಸುತ್ತ ಮತ್ತು ಕುತ್ತಿಗೆಯ ಚರ್ಮದ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರುತ್ತದೆ, ಚರ್ಮವನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಹೇರ್ ಡೈ ಚರ್ಮಕ್ಕೆ ಮಾಡುವ ಹಾನಿಗಳು:

ಪಿಎಸ್‌ಆರ್‌ಐ ಆಸ್ಪತ್ರೆಯ ಡರ್ಮಟಾಲಜಿ ವಿಭಾಗದ ಡಾ. ಭಾವುಕ್ ಧೀರ್ ಅವರ ಪ್ರಕಾರ, ಹೇರ್ ಡೈಯಲ್ಲಿ ಇರುವ ಹಲವು ರಾಸಾಯನಿಕ ಪದಾರ್ಥಗಳು ಚರ್ಮಕ್ಕೆ ಹಾನಿಕಾರಕವಾಗಬಹುದು. ಕೆಲವರಿಗೆ ಇದರಿಂದ ಅಲರ್ಜಿ, ತುರಿಕೆ ಮತ್ತು ಉರಿ ಕಾಣಿಸಬಹುದು. ಡೈ ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮ ಹೆಚ್ಚು ಸಂವೇದನಶೀಲವಾಗಬಹುದು. ಕೆಲ ಸಂದರ್ಭಗಳಲ್ಲಿ ಚರ್ಮದಲ್ಲಿ ಕೆಂಪು ದದ್ದುಗಳು ಅಥವಾ ಊತ ಕೂಡ ಕಾಣಿಸಬಹುದು. ಹೆಚ್ಚು ಸಮಯ ಅಥವಾ ಪದೇ ಪದೇ ಹೇರ್ ಡೈ ಬಳಸುವುದರಿಂದ ಚರ್ಮದ ಸಹಜ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಕೆಲವರಿಗೆ ಡೈ ಬಳಸಿದ ಬಳಿಕ ತಲೆಯ ಚರ್ಮದಲ್ಲಿ ಉರಿ ಅಥವಾ ಚುಚ್ಚುವಿಕೆ ಅನುಭವವಾಗಬಹುದು. ಸಂವೇದನಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಬಹುದು. ಆದ್ದರಿಂದ ಹೇರ್ ಡೈ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ

ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬೇಕು?

ಹೇರ್ ಡೈ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಚರ್ಮದ ಹಾನಿಯನ್ನು ತಪ್ಪಿಸಬಹುದು. ಡೈ ಹಾಕುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ಇದರಿಂದ ಚರ್ಮಕ್ಕೆ ಅಲರ್ಜಿ ಆಗುತ್ತದೆಯೇ ಎಂಬುದು ತಿಳಿದುಬರುತ್ತದೆ. ಕೂದಲಿಗೆ ಡೈ ಹಾಕುವಾಗ ನೆತ್ತಿ, ಕಿವಿ ಮತ್ತು ಕುತ್ತಿಗೆಯ ಸುತ್ತ ವಾಸಲಿನ್ ಅಥವಾ ಕ್ರೀಮ್ ಹಚ್ಚಬಹುದು. ಇದರಿಂದ ಡೈ ನೇರವಾಗಿ ಚರ್ಮಕ್ಕೆ ತಗುಲುವುದನ್ನು ತಪ್ಪಿಸಬಹುದು. ಜೊತೆಗೆ ಉತ್ತಮ ಬ್ರ್ಯಾಂಡ್ ಮತ್ತು ಕಡಿಮೆ ರಾಸಾಯನಿಕಗಳಿರುವ ಉತ್ಪನ್ನಗಳನ್ನು ಬಳಸುವುದು ಉತ್ತಮ. ಡೈ ಬಳಸಿ ಮುಗಿದ ನಂತರ ಕೂದಲು ಮತ್ತು ಚರ್ಮವನ್ನು ಚೆನ್ನಾಗಿ ತೊಳೆಯುವುದು ಕೂಡ ಅಗತ್ಯ.

ಸಮಸ್ಯೆ ಕಂಡುಬಂದರೆ ಏನು ಮಾಡಬೇಕು?

ಹೇರ್ ಡೈ ಬಳಸಿದ ನಂತರ ಚರ್ಮದಲ್ಲಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಕೂದಲನ್ನು ಸ್ವಚ್ಛವಾದ ನೀರಿನಿಂದ ತೊಳೆಯುವುದು ಉತ್ತಮ. ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಾಧ್ಯವಾದಷ್ಟು ಕೂದಲಿನ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಕೂದಲು ಮತ್ತು ಚರ್ಮ ಎರಡೂ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ
ಬಲೆ ಭಾರವಾಗ್ತಿದೆ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು
ಬಲೆ ಭಾರವಾಗ್ತಿದೆ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು