AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baldness in Men vs. Women: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ

ಇಂದಿನ ಜೀವನಶೈಲಿ ಮತ್ತು ಒತ್ತಡದ ದಿನಚರಿಗಳಿಂದಾಗಿ ಬೊಕ್ಕ ತಲೆ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಕಂಡುಬರುತ್ತಿದ್ದರೂ ಕೂಡ ಪುರುಷರಲ್ಲಿ ಗಮನಾರ್ಹವಾಗಿ ಈ ರೀತಿ ಪ್ರಕರಣಗಳು ಹೆಚ್ಚಾಗಿ ಕಾಣಬಹುದಾಗಿದೆ. ಹಾಗಾದರೆ ಈ ಸಮಸ್ಯೆಯ ಹಿಂದಿರುವ ಕಾರಣವೇನು? ಈ ತರದ ಸಮಸ್ಯೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದೇಕೆ? ಅದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.

Baldness in Men vs. Women: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 15, 2025 | 4:48 PM

Share

ಇತ್ತೀಚಿನ ದಿನಗಳಲ್ಲಿ ಕೂದಲು (Hair) ಉದುರುವ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬೋಳು ತಲೆಯ (Baldness) ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರಿದ್ದರೂ ಕೂಡ ನಮ್ಮ ಬದಲಾದ ಜೀವನಶೈಲಿ (Lifestyle) ಮತ್ತು ಒತ್ತಡದ ದಿನಚರಿಗಳು ಈ ರೀತಿ ಸಮಸ್ಯೆಗೆ ಪ್ರಮುಖ ಕಾರಣ ಎನ್ನಬಹುದಾಗಿದೆ. ಇನ್ನು ಈ ಸಮಸ್ಯೆ ಪುರುಷ (Men) ಮತ್ತು ಮಹಿಳೆಯರಿಬ್ಬರಲ್ಲೂ ಕಂಡುಬರುತ್ತಿದ್ದರೂ ಕೂಡ ಪುರುಷರಲ್ಲಿ ಗಮನಾರ್ಹವಾಗಿ ಈ ರೀತಿ ಪ್ರಕರಣಗಳು ಹೆಚ್ಚಾಗಿ ಕಾಣಬಹುದಾಗಿದೆ. ಇದು ವ್ಯಕ್ತಿಗೆ ಮುಜುಗರವಾಗುವಂತೆ ಮಾಡುವುದು ಮಾತ್ರವಲ್ಲ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿ ತಲೆ ಬೋಳಾಗುವುದಕ್ಕೆ ಕಾರಣವೇನು? ಈ ತರದ ಸಮಸ್ಯೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದೇಕೆ? ಅದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.

ಬೋಳು ತಲೆ ಸಮಸ್ಯೆಗೆ ಕಾರಣವೇನು?

ಸಾಮಾನ್ಯವಾಗಿ ನಮ್ಮ ಕೂದಲಿನ ಬೇರುಗಳು ದುರ್ಬಲಗೊಂಡಾಗ ಕ್ರಮೇಣ ಕೂದಲು ಉದುರಲು ಆರಂಭವಾಗುತ್ತದೆ. ಇದು ಬೊಕ್ಕ ತಲೆಗೆ ಪ್ರಮುಖ ಕಾರಣವಾಗಿದೆ. ಅದಲ್ಲದೆ ಡೈಹೈಡ್ರೊಟೆಸ್ಟೊಸ್ಟೆರೋನ್ (DHT) ಎಂಬ ಹಾರ್ಮೋನ್ ಕೂದಲಿನ ಬೇರುಗಳಿಗೆ ಹಾನಿ ಮಾಡುತ್ತದೆ ಇದರಿಂದಾಗಿ ಕೂದಲು ತೆಳುವಾಗುವುದು ಮತ್ತು ಉದುರುವುದಕ್ಕೆ ಆರಂಭವಾಗುತ್ತದೆ. ಇದಲ್ಲದೆ ಒತ್ತಡ ಹೆಚ್ಚಾದಾಗಲೂ ಕೂಡ ಕೂದಲು ಉದುರುತ್ತದೆ. ಇನ್ನು ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಅಸಮತೋಲನವೂ ಕೂಡ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ವಿಟಮಿನ್ ಬಿ, ಡಿ, ಕಬ್ಬಿಣ, ಸತು ಮತ್ತು ಪ್ರೋಟೀನ್ ಕೊರತೆಯು ಕೂದಲನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು, ನೇರಗೊಳಿಸುವುದು ಇತ್ಯಾದಿ ಅಭ್ಯಾಸಗಳು ಕೂಡ ಕೂದಲನ್ನು ಹಾನಿಗೊಳಿಸುತ್ತವೆ. ಇದೆಲ್ಲದರ ಹೊರತಾಗಿ ಆನುವಂಶಿಕ ಅಂಶಗಳು ಸೇರಿದಂತೆ ಥೈರಾಯ್ಡ್ ಸಮಸ್ಯೆಗಳು, ಮಧುಮೇಹ, ಕ್ಯಾನ್ಸರ್ ಅಥವಾ ಕೆಲವು ಔಷಧಿಗಳ ಸೇವನೆಯೂ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಬೊಕ್ಕ ತಲೆ ಪುರುಷರಲ್ಲಿಯೇ ಹೆಚ್ಚಾಗಿ ಏಕೆ ಕಾಣಿಸಿಕೊಳ್ಳುತ್ತದೆ?

ಪುರುಷರಲ್ಲಿ ಟೆಸ್ಟೋಸ್ಟೆರಾನ್ ನಿಂದ ಉತ್ಪತ್ತಿಯಾಗುವ ಡಿಎಚ್‌ಟಿ ಹಾರ್ಮೋನ್ ಕೂದಲಿನ ಬೇರುಗಳಿಗೆ ಬೇಗನೆ ಹಾನಿ ಮಾಡುತ್ತದೆ. ಮಹಿಳೆಯರಲ್ಲಿ, ಈ ಹಾರ್ಮೋನ್ ಮಟ್ಟ ಕಡಿಮೆ ಇರುವುದರಿಂದ ಅವರ ಕೂದಲು ಅಷ್ಟು ಬೇಗ ಉದುರುವುದಿಲ್ಲ. ಹೆಚ್ಚುವರಿಯಾಗಿ, ಪುರುಷರಲ್ಲಿ ಬೋಳು ಸಾಮಾನ್ಯವಾಗಿ ಹಣೆಯಿಂದ ಪ್ರಾರಂಭವಾಗಿ ತಲೆಯ ಮಧ್ಯಭಾಗಕ್ಕೆ ಹೋಗುತ್ತದೆ ಇದಕ್ಕೆ ವ್ಯತಿರಿಕ್ತವಾಗಿ, ಮಹಿಳೆಯರಲ್ಲಿ ಕೂದಲು ಉದುರುವುದು ನೆತ್ತಿ ಪೂರ್ತಿ ಕೂದಲು ಉದುರುತ್ತದೆ. ಅದಕ್ಕಾಗಿಯೇ ಮಹಿಳೆಯರಲ್ಲಿ ಅಷ್ಟು ಬೇಗ ಗಮನಕ್ಕೆ ಬರುವುದಿಲ್ಲ. ಅದಲ್ಲದೆ ಈಸ್ಟ್ರೊಜೆನ್ ಹಾರ್ಮೋನ್ ಮಹಿಳೆಯರ ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ, ಆದರೆ ಪುರುಷರಲ್ಲಿ ಡೈಹೈಡ್ರೊಟೆಸ್ಟೊಸ್ಟೆರೋನ್ ಪರಿಣಾಮ ಕೂದಲಿಗೆ ಹಾನಿಯಾಗುತ್ತದೆ. ಸಾಮಾನ್ಯವಾಗಿ 20 ವರ್ಷದ ನಂತರ ಪುರುಷರಲ್ಲಿಈ ರೀತಿ ಸಮಸ್ಯೆ ಕಂಡುಬಂದರೆ ಮಹಿಳೆಯರಲ್ಲಿ ಇದು 40 ವರ್ಷದ ನಂತರ ಸಕ್ರಿಯವಾಗುತ್ತದೆ.

ಇದನ್ನೂ ಓದಿ
Image
Milk Rice: ಹಾಲು ಅನ್ನ ಆರೋಗ್ಯಕ್ಕೆ ಅಮೃತವಿದ್ದಂತೆ
Image
ಲಿಚಿ ಹಣ್ಣು ಚಿಕ್ಕದಾಗಿದ್ದರೂ ಪ್ರಯೋಜನ ಸಾಕಷ್ಟಿದೆ!
Image
5 ಗಿಡಗಳಲ್ಲಿ ಆರೋಗ್ಯದ ಪಂಚ ಸೂತ್ರ, ಇಲ್ಲಿದೆ ನೋಡಿ
Image
ತಮಿಳುನಾಡಿನಲ್ಲಿದೆ ಸಕ್ಕರೆ ಕಾಯಿಲೆ ವಾಸಿಮಾಡುವ ದೇವಸ್ಥಾನ!

ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ ?

ತಡೆಗಟ್ಟುವುದು ಹೇಗೆ?

ಪ್ರೋಟೀನ್, ಕಬ್ಬಿಣ, ಒಮೆಗಾ- 3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ12 ಮತ್ತು ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಧ್ಯಾನ, ಯೋಗ ಮತ್ತು ನಿದ್ರೆ ಸರಿಯಾಗಿ ಮಾಡಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹೇರ್ ಡೈ, ಜೆಲ್ ಮತ್ತು ಸ್ಪ್ರೇ ಬಳಸುವುದನ್ನು ತಪ್ಪಿಸಿ. ಕೂದಲು ಜಾಸ್ತಿ ಉದುರುತ್ತಿದ್ದರೆ, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ