AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಯೋಚಿಸುವವರಲ್ಲಿ ನೀವು ಒಬ್ಬರಾ? ಇದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತಾ?

ನೀವು ಗಮನಿಸಿರಬಹುದು, ಕೆಲವರು ಅಗತ್ಯಕ್ಕಿಂತ ಹೆಚ್ಚು ಅಂದರೆ ಅತಿಯಾಗಿ ಯೋಚಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಇದು ಅರಿವಿಲ್ಲದಂತೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಸಾಮಾನ್ಯವೆಂದು ಪರಿಗಣಿಸಿ ಹಗುರವಾಗಿ ತೆಗೆದುಕೊಳ್ಳಬಾರದು. ಹಾಗಾದರೆ ಅತಿಯಾಗಿ ಯೋಚನೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ, ಇದನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಅತಿಯಾಗಿ ಯೋಚಿಸುವವರಲ್ಲಿ ನೀವು ಒಬ್ಬರಾ? ಇದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತಾ?
Can Stress and Overthinking Cause Physical Illness?Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 12, 2026 | 5:15 PM

Share

ಇತ್ತೀಚಿನ ದಿನಗಳಲ್ಲಿ, ಅತಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ಕಂಡುಬರುತ್ತಿದೆ. ಕೆಲಸದ ಒತ್ತಡ (Stress), ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಮತ್ತು ದೈನಂದಿನ ಸಮಸ್ಯೆಗಳು ಜನರನ್ನು ಅಗತ್ಯಕ್ಕಿಂತ ಹೆಚ್ಚು ಯೋಚಿಸುವಂತೆ ಮಾಡುತ್ತಿದೆ. ಸಣ್ಣ ಪುಟ್ಟ ವಿಷಯಗಳನ್ನು ಕೂಡ ಬಹಳ ಸಮಯದ ವರೆಗೆ ಯೋಚಿಸುವುದರಿಂದ ಮೆದುಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ಸಿಗುವುದಿಲ್ಲ. ಕ್ರಮೇಣ, ಈ ಅಭ್ಯಾಸವು ವ್ಯಕ್ತಿಯ ದೈನಂದಿನ ದಿನಚರಿಯ ಭಾಗವಾಗಿ ಆರೋಗ್ಯವನ್ನು ಹಾಳು ಮಾಡಬಹುದು. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ನಿರಂತರವಾಗಿ ಯೋಚಿಸುವುದು ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ನೀವು ಅತಿಯಾಗಿ ಯೋಚನೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ, ಇದನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ದೆಹಲಿ ನಗರದ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, ಅತಿಯಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದು ನಿರಂತರವಾಗಿ ಮುಂದುವರೆದರೆ ದೇಹದಲ್ಲಿ ಹಾರ್ಮೋನ್ ಸಮತೋಲನದ ಮೇಲೂ ಪರಿಣಾಮ ಬೀಳಬಹುದು. ಪರಿಣಾಮವಾಗಿ ತಲೆನೋವು, ದಣಿವು ಮತ್ತು ದುರ್ಬಲತೆ ಕಾಣಿಸಬಹುದು. ಕೆಲವರಿಗೆ ನಿದ್ರೆಯ ಸಮಸ್ಯೆಗಳೂ ಕೂಡ ಉಂಟಾಗಬಹುದು. ಉದಾಹರಣೆಗೆ ತಡವಾಗಿ ನಿದ್ರೆ ಬರುವುದು ಅಥವಾ ಮಧ್ಯರಾತ್ರಿ ಹಲವು ಬಾರಿ ಎಚ್ಚರವಾಗುವುದು. ಅಷ್ಟೇ ಅಲ್ಲ, ಹೆಚ್ಚಾಗಿ ಯೋಚಿಸುವ ಅಭ್ಯಾಸದಿಂದ ವ್ಯಕ್ತಿಯ ಗಮನ ಕೆಲಸ ಅಥವಾ ಓದಿನ ಕಡೆಗೆ ಕಡಿಮೆಯಾಗಬಹುದು. ಜೊತೆಗೆ ಕೆಲವರಲ್ಲಿ ಅಶಾಂತಿ, ಆತಂಕ ಮತ್ತು ಚಿಡಿಚಿಡಿಯಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲದ ಒತ್ತಡದಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಮಾನಸಿಕವಾಗಿ ದಣಿಯಬಹುದು ಮತ್ತು ದೈನಂದಿನ ಕೆಲಸಗಳನ್ನೂ ಮಾಡಲು ಕಷ್ಟವಾಗಬಹುದು.

ಇದನ್ನೂ ಓದಿ: ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ!

ಲಕ್ಷಣಗಳು ಹೇಗಿರುತ್ತವೆ?

ಹೆಚ್ಚಾಗಿ ಯೋಚಿಸುವವರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಅವುಗಳಲ್ಲಿ ಸಣ್ಣ ವಿಷಯಗಳಿಗೂ ಹೆಚ್ಚು ಚಿಂತೆ ಮಾಡುವುದು, ಮನಸ್ಸನ್ನು ಶಾಂತವಾಗಿಡಲು ಕಷ್ಟವಾಗುವುದು, ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಅಥವಾ ನಿದ್ರೆ ಮಧ್ಯದಲ್ಲಿ ಪದೇ ಪದೇ ಎಚ್ಚರವಾಗುವುದು ಸೇರಿದಂತೆ ನಾನಾ ರೀತಿಯ ಲಕ್ಷಣಗಳು ಕಂಡುಬರಬಹುದು. ಜೊತೆಗೆ ದಣಿವು, ಕೆಲಸದ ಮೇಲೆ ಗಮನ ಕೊಡಲು ಸಾಧ್ಯವಾಗದಿರುವುದು ಮತ್ತು ನಿರಂತರ ಚಿಂತೆ ಕೂಡ ಅನುಭವಕ್ಕೆ ಬರಬಹುದು.

ಹೇಗೆ ನಿಯಂತ್ರಿಸಬಹುದು?

ಹೆಚ್ಚಾಗಿ ಯೋಚಿಸುವ ಅಭ್ಯಾಸವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಸಹಾಯಕ. ನಿಯಮಿತ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಮತ್ತು ಸಮತೋಲನಯುತ ದಿನಚರಿಯನ್ನು ಪಾಲಿಸುವುದು ಕೂಡ ಮುಖ್ಯ. ಒತ್ತಡ ಅಥವಾ ಆತಂಕ ದೀರ್ಘಕಾಲ ಮುಂದುವರೆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us