AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿ ಪದೇಪದೇ ದದ್ದುಗಳು ಕಂಡುಬರುತ್ತಿದ್ದರೆ ನಿರ್ಲಕ್ಷಿಸಬೇಡಿ! ಇದು ಈ ರೋಗ ಬರುವ ಮುನ್ಸೂಚನೆ

ಅನೇಕರಿಗೆ ದೇಹದ ಮೇಲೆ ಪದೇ ಪದೇ ದದ್ದುಗಳು ಕಾಣಿಸಿಕೊಳ್ಳುವ ಸಮಸ್ಯೆ ಇರುತ್ತದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸಬಾರದು, ಏಕೆಂದರೆ ಇದು ಅನೇಕ ರೋಗಗಳ ಸಂಕೇತವೂ ಆಗಿರಬಹುದು. ಈ ಬಗ್ಗೆ ಡಾ. ಸೌಮ್ಯ ಸಚ್‌ದೇವ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದು, ಯಾವ ಕಾರಣಕ್ಕೆ ದದ್ದುಗಳು ಕಂಡುಬರುತ್ತವೆ? ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಹೇಳಿದ್ದಾರೆ. ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ದೇಹದಲ್ಲಿ ಪದೇಪದೇ ದದ್ದುಗಳು ಕಂಡುಬರುತ್ತಿದ್ದರೆ ನಿರ್ಲಕ್ಷಿಸಬೇಡಿ! ಇದು ಈ ರೋಗ ಬರುವ ಮುನ್ಸೂಚನೆ
Recurring Body Rashes: Causes, Risk Factors, and TreatmentImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 14, 2026 | 6:13 PM

Share

ಅನೇಕರಿಗೆ ದೇಹದ ಮೇಲೆ ಪದೇಪದೇ ದದ್ದುಗಳು (Skin Rashes) ಅಥವಾ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸುವ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಅಲರ್ಜಿ ಅಥವಾ ಹವಾಮಾನ ಪರಿಣಾಮ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದಲ್ಲಿನ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ದದ್ದುಗಳು ಸಣ್ಣ ಕೆಂಪು ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರ ಜೊತೆಗೆ ಉರಿ, ಚರ್ಮದ ಊತ ಅಥವಾ ಸ್ವಲ್ಪ ನೋವು ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ದದ್ದುರಗಳು ದೇಹದ ಒಂದು ಭಾಗದಲ್ಲೇ ಸೀಮಿತವಾಗಿರಬಹುದು, ಮತ್ತೊಂದಿಷ್ಟು ಜನರಲ್ಲಿ ಇದು ದೇಹದ ಹಲವೆಡೆ ಕಾಣಿಸಬಹುದು. ಕೆಲವರಿಗೆ ಚರ್ಮ ಒಣಗುವಂತಹ ಸಮಸ್ಯೆಯೂ ಕಾಣಿಸಬಹುದು.

ಯಾವ ಕಾರಣಕ್ಕೆ ದದ್ದುಗಳು ಕಂಡುಬರುತ್ತವೆ?

ಚರ್ಮ ತಜ್ಞೆ ಡಾ. ಸೌಮ್ಯ ಸಚದೇವಾ ಅವರು ಹೇಳುವ ಪ್ರಕಾರ, ದೇಹದಲ್ಲಿ ಪದೇಪದೇ ದದ್ದುರಗಳು ಕಾಣಿಸಿಕೊಳ್ಳಲು ಹಲವು ಕಾರಣಗಳಿರಬಹುದು. ಅಲರ್ಜಿ ಪ್ರಮುಖ ಕಾರಣವಾಗಿದ್ದು, ಕೆಲವು ಆಹಾರ ಪದಾರ್ಥಗಳು, ಔಷಧಿ, ಧೂಳು, ಬೆವರು ಅಥವಾ ರಾಸಾಯನಿಕಗಳ ಸಂಪರ್ಕದಿಂದ ದದ್ದುಗಳು ಉಂಟಾಗಬಹುದು. ಎಕ್ಸಿಮಾ ಅಥವಾ ಡರ್ಮಟೈಟಿಸ್‌ ನಂತಹ ಚರ್ಮದ ಕಾಯಿಲೆಗಳೂ ಇದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಸಂವೇದನಶೀಲ ಚರ್ಮ ಹೊಂದಿರುವವರು, ಹೆಚ್ಚು ಬೆವರುವವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ಹೆಚ್ಚಾಗಿ ರಾಸಾಯನಿಕಗಳಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವವರಲ್ಲಿಯೂ ಸಮಸ್ಯೆ ಹೆಚ್ಚಾಗಬಹುದು.

ತಡೆಗಟ್ಟುವುದು ಹೇಗೆ?

ಚರ್ಮವನ್ನು ಸ್ವಚ್ಛವಾಗಿ ಮತ್ತು ಒಣಗಿಡುವುದು ಮುಖ್ಯ. ಹೆಚ್ಚು ಬೆವರು ಬಂದರೆ ನಿಯಮಿತವಾಗಿ ಸ್ನಾನ ಮಾಡುವುದು ಮತ್ತು ಸ್ವಚ್ಛ ಬಟ್ಟೆ ಧರಿಸುವುದು ಉತ್ತಮ. ಅಲರ್ಜಿ ಉಂಟುಮಾಡುವ ವಸ್ತುಗಳಿಂದ ದೂರವಿರುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಸಹ ಮುಖ್ಯ. ದದ್ದುರಗಳು ಮತ್ತೆ ಮತ್ತೆ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?