AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ನಂದಿನಿ ಬ್ರ್ಯಾಂಡ್​​​​ ಮೊಸರು ದರ ಲೀಟರ್​​ಗೆ 2 ರೂ. ಇಳಿಕೆ: ಜನತೆಗೆ ಕೊಂಚ ರಿಲೀಫ್​

ಸಾರ್ವಜನಿಕರ ಆಕ್ರೋಶ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆಯ ಬೆನ್ನಲ್ಲೇ ಇಂದಿನಿಂದ ನಂದಿನಿ ಬ್ರ್ಯಾಂಡ್ ಮೊಸರಿನ ದರ ಲೀಟರ್‌ಗೆ 2 ರೂ. ಇಳಿಕೆಯಾಗಿದ್ದು, 1 ಲೀಟರ್ ಮೊಸರಿನ ಬೆಲೆ 66 ರೂ.ಗೆ ತಲುಪಿದೆ. ಕರ್ನಾಟಕದಲ್ಲಿ ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೀಟರ್​​ ಮೊಸರಿನ ದರ 14 ರೂಪಾಯಿ ಹೆಚ್ಚಳ ತೀರಾ ಆಯಿತೆಂಬ ಅಸಮಾಧಾನಗಳು ಕೇಳಿಬಂದಿದ್ದವು.

ಇಂದಿನಿಂದ ನಂದಿನಿ ಬ್ರ್ಯಾಂಡ್​​​​ ಮೊಸರು ದರ ಲೀಟರ್​​ಗೆ 2 ರೂ. ಇಳಿಕೆ: ಜನತೆಗೆ ಕೊಂಚ ರಿಲೀಫ್​
ನಂದಿನಿ ಬ್ರ್ಯಾಂಡ್​​​​ ಮೊಸರು
ಪ್ರಸನ್ನ ಹೆಗಡೆ
|

Updated on:Nov 29, 2026 | 8:16 AM

Share

ಬೆಂಗಳೂರು, ನವೆಂಬರ್​​ 29: ಇಂದಿನಿಂದ (ನವೆಂಬರ್​​ 29) ನಂದಿನಿ ಬ್ರ್ಯಾಂಡ್​​​​ ಮೊಸರು ದರದಲ್ಲಿ ಇಳಿಕೆಯಾಗಿದ್ದು, ಲೀಟರ್​​ ಮೊಸರಿಗೆ 2 ರೂ. ಮತ್ತು ಅರ್ಧ ಲೀಟರ್​ ಮೊಸರಿಗೆ 1 ರೂ. ಇಳಿಕೆಯಾಗಿದೆ. ಆ ಮೂಲಕ 1 ಲೀಟರ್ ಮೊಸರಿನ ದರ 68 ರಿಂದ 66ಕ್ಕೆ ಬಂದಿದ್ದರೆ, ಅರ್ಧ ಲೀಟರ್​​ ಮೊಸರಿನ ದರ 34 ರಿಂದ 33ಕ್ಕೆ ಇಳಿಕೆಯಾಗಿದೆ. ನವೆಂಬರ್ 1, 2026ರಂದು ನಂದಿನಿ ಮೊಸರಿನ ದರವನ್ನು ಲೀಟರ್‌ಗೆ ₹14 ಮತ್ತು ಅರ್ಧ ಲೀಟರ್‌ಗೆ ₹6 ಹೆಚ್ಚಿಸಲಾಗಿತ್ತು. ಹೀಗಾಗಿ ಭಾರಿ ದರ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಈಗ ಕೊಂಚ ರಿಲೀಫ್​​ ಸಿಕ್ಕಿದೆ.

ದರ ಇಳಿಕೆಗೆ ಸೂಚಿಸಿದ್ದ ಸಿಎಂ

ಕರ್ನಾಟಕದಲ್ಲಿ ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೀಟರ್​​ ಮೊಸರಿನ ದರ 14 ರೂಪಾಯಿ ಹೆಚ್ಚಳ ತೀರಾ ಆಯಿತೆಂಬ ಅಸಮಾಧಾನಗಳು ಕೇಳಿಬಂದಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿದ್ದ ಮೊಸರಿಮ ಬೆಲೆಯಲ್ಲಿ ಎರಡು ರೂ. ಇಳಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಲೀಟರ್ ಮೊಸರಿಗೆ 14 ರೂ. ಬದಲು 12 ರೂ. ಮಾತ್ರ ಹೆಚ್ಚಳಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ಜನಾಕ್ರೋಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮೊಸರಿನ ದರ ಇಳಿಕೆಗೆ ಸಿಎಂ ಸೂಚನೆ

ಭರವಸೆ ನೀಡಿ ತಿಂಗಳು ಕಳೆಯುತ್ತ ಬಂದರೂ ಬೆಲೆ ಕಡಿತವಾಗದ ಬಗ್ಗೆ ಆಕ್ರೋಶ ಹೊರಹಾಕಿದ್ದ ಸಾರ್ವಜನಿಕರು, ಜನರು ಈ ಬೆಲೆ ಏರಿಕೆಗೆ ಒಗ್ಗಿಕೊಂಡು ಸುಮ್ಮನಾಗುತ್ತಾರೆ ಎಂಬ ಸರ್ಕಾರದ ಭಾವನೆಗೆ ಇದು ಸಾಕ್ಷಿಯಾಗಿದೆ. ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ ಎಂದು ದೂರಿದ್ದರು. ಆದರೀಗ ಸಿಎಂ ಸೂಚನೆಯಂತೆ ಮೊಸರಿನ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕೃತ ದರದಲ್ಲಿ ಇಂದಿನಿಂದಲೇ ನಂದಿನಿ ಮೊಸರು ಗ್ರಾಹಕರ ಕೈಸೇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:11 am, Sun, 29 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು