AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಾದಾ ಆನ್ ಹಾಲಿಡೇ’ ಟೈಟಲ್ ಲಾಂಚ್ ವೇಳೆ ಅಭಿಮಾನಿಗಳಿಗೆ ನಿರಾಸೆ; ಸುದೀಪ್ ಕ್ಷಮೆಯಾಚನೆ

‘ದಾದಾ ಆನ್ ಹಾಲಿಡೇ’ ಟೈಟಲ್ ಲಾಂಚ್ ವೇಳೆ ಓರಿಯನ್ ಮಾಲ್‌ನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕಿಚ್ಚ ಸುದೀಪ್ ಕ್ಷಮೆಯಾಚಿಸಿದ್ದಾರೆ. ಮುಖ್ಯಮಂತ್ರಿಗಳ ಆಗಮನದ ಭದ್ರತಾ ಶಿಷ್ಟಾಚಾರದಿಂದ ಪೊಲೀಸರು ಜನರನ್ನು ತೆರವುಗೊಳಿಸಿದ್ದೇ ಇದಕ್ಕೆ ಕಾರಣ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳ ಭಾವನಾತ್ಮಕ ಪತ್ರಕ್ಕೆ ಸುದೀಪ್ ಭಾವುಕ ಉತ್ತರ ನೀಡಿದ್ದಾರೆ.

‘ದಾದಾ ಆನ್ ಹಾಲಿಡೇ’ ಟೈಟಲ್ ಲಾಂಚ್ ವೇಳೆ ಅಭಿಮಾನಿಗಳಿಗೆ ನಿರಾಸೆ; ಸುದೀಪ್ ಕ್ಷಮೆಯಾಚನೆ
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Nov 29, 2026 | 7:54 AM

Share

ಮುಖ್ಯಾಂಶಗಳು

  • ದರ್ಶನ ಸಿಗದೆ ನಿರಾಸೆಯಿಂದ ಅಭಿಮಾನಿ ಬರೆದಿದ್ದ ಭಾವನಾತ್ಮಕ ಪತ್ರ
  • ಮುಖ್ಯಮಂತ್ರಿಗಳ ಆಗಮನದ ಭದ್ರತಾ ಶಿಷ್ಟಾಚಾರವೇ ಅಡ್ಡಿಯಾಯಿತು ಎಂದ ಸುದೀಪ್
  • ಪರಿಸ್ಥಿತಿ ಕೈಮೀರಿ ಹೋಗಿದ್ದಕ್ಕೆ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಕಿಚ್ಚ

‘ದಾದಾ ಆನ್ ಹಾಲಿಡೇ’ ಟೈಟಲ್ ಲಾಂಚ್ ವೇಳೆ ನಟ ಕಿಚ್ಚ ಸುದೀಪ್ ಅವರನ್ನು ನೋಡಲು ಬೆಂಗಳೂರಿನ ಓರಿಯನ್ ಮಾಲ್‌ನಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ ಸುದೀಪ್ ಅವರ ದರ್ಶನ ಸಿಗದೆ ಅಭಿಮಾನಿಗಳು ನಿರಾಸೆಯಿಂದ ಮರಳಿದ್ದರು. ಈ ಬಗ್ಗೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದರು. ಇದೀಗ ಸ್ವತಃ ಕಿಚ್ಚ ಸುದೀಪ್ ಅವರು ಈ ಪತ್ರಕ್ಕೆ ಪ್ರತಿಕ್ರಿಯಿಸಿ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಅಭಿಮಾನಿಯ ಪತ್ರದಲ್ಲಿ ಏನಿತ್ತು?

‘ಸುದೀಪ್ ಅವರನ್ನು ಒಂದು ಸೆಕೆಂಡ್ ನೋಡಲು ಸಂಜೆ 5 ಗಂಟೆಯಿಂದಲೇ ಅಭಿಮಾನಿಗಳು ಕಾಯುತ್ತಿದ್ದರು. ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳು ಗಂಟೆಗಟ್ಟಲೆ ಕಾದು ಕೊನೆಗೆ ನಿರಾಸೆಯಿಂದ ವಾಪಸ್ ಹೋಗಿದ್ದಾರೆ. ನಮಗೆ ನಿಮ್ಮ ಬಳಿ ಮಾತನಾಡಬೇಕು ಅಥವಾ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರಲಿಲ್ಲ. ಕೇವಲ ಒಂದು ಕ್ಷಣ ನಿಮ್ಮ ದರ್ಶನವಾದರೆ ಸಾಕಿತ್ತು. ಸಾವಿರಾರು ಅಭಿಮಾನಿಗಳ ಕಾಯುವಿಕೆಗೆ ಒಂದು ಸೆಕೆಂಡ್ ದರ್ಶನವೂ ಸಿಗಲಿಲ್ಲ ಎಂದರೆ ನೋವಾಗುವುದು ಸಹಜ ಸರ್’ ಎಂದು ಅಭಿಮಾನಿ ನೋವು ತೋಡಿಕೊಂಡಿದ್ದರು. ಪದೇ ಪದೇ ಹೀಗೆ ನಿರಾಸೆಯಾದರೆ ವರ್ಷಗಳಿಂದ ಕಟ್ಟಿಕೊಂಡ ಅಭಿಮಾನದ ಬಂಧ ಸಡಿಲವಾಗಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು.

ಸುದೀಪ್ ನೀಡಿದ ಸ್ಪಷ್ಟನೆ ಏನು?

ಅಭಿಮಾನಿಯ ಈ ಪತ್ರಕ್ಕೆ ಸುದೀಪ್ ಅವರು ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ‘ನಿಮ್ಮ ಭಾವನೆಗಳನ್ನು ಪದಗಳಲ್ಲಿ ಬರೆದಿರುವುದು ತುಂಬಾ ಚೆನ್ನಾಗಿದೆ. ಆದರೆ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ನನಗೂ ಮನಸ್ಸಿಗೆ ತುಂಬಾ ಬೇಸರವಾಗಿದೆ. ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಿ 7:30ಕ್ಕೆ ಮುಗಿಸಿ ಹೊರಬರುವ ಯೋಜನೆ ಇತ್ತು. ನಾನು ಕಾರ್ಯಕ್ರಮ ಮುಗಿದ ತಕ್ಷಣ ಅಭಿಮಾನಿಗಳು ಸೇರಿದ್ದ ಮುಖ್ಯ ಹಾಲ್‌ಗೆ ಬಂದೆ. ಆದರೆ ಅಲ್ಲಿ ಯಾರೂ ಇರಲಿಲ್ಲ’ ಎಂದು ಅವರು ವಿವರಿಸಿದ್ದಾರೆ.

ವಿಳಂಬವಾಯಿತು..

ಅಲ್ಲಿ ಸೇರಿದ್ದ ಅಭಿಮಾನಿಗಳನ್ನು ಏಕೆ ಕಳುಹಿಸಲಾಯಿತು ಎಂಬುದು ನನಗೆ ನಂತರ ತಿಳಿಯಿತು. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಶಿಷ್ಟಾಚಾರದ ಕಾರಣಕ್ಕೆ ಪೊಲೀಸರು ಎಲ್ಲರನ್ನೂ ಅಲ್ಲಿಂದ ತೆರವುಗೊಳಿಸಿದ್ದರು. ನಾನು ಥಿಯೇಟರ್ ಒಳಗಿದ್ದ ಕಾರಣ ನನಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ನನ್ನ ಹೃದಯಕ್ಕೆ ತುಂಬಾ ನೋವು ತಂದಿತು’ ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ 

ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಕಿಚ್ಚ

‘ನನ್ನ ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾಗದೆ ನಾನು ಓರಿಯನ್ ಮಾಲ್‌ನಿಂದ ಹೊರಹೋಗಲು ಸಾಧ್ಯವೇ ಇಲ್ಲ. ನಿಮ್ಮ ಘೋಷಣೆ ಮತ್ತು ಪ್ರೀತಿಗಿಂತ ದೊಡ್ಡ ಖುಷಿ ನನಗೆ ಬೇರೊಂದಿಲ್ಲ. ನನ್ನ ಸಲುವಾಗಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿದ್ದೀರಿ ಎಂದು ತಿಳಿದು ತುಂಬಾ ಸಂತೋಷವಾಯಿತು. ಆದರೆ ಪರಿಸ್ಥಿತಿ ನನ್ನ ಕೈಮೀರಿ ಹೋಗಿದ್ದರಿಂದ ನಿಮ್ಮನ್ನು ಭೇಟಿಯಾಗಲು ಆಗಲಿಲ್ಲ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಎಂದಿಗೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ’ ಎಂದು ಸುದೀಪ್ ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Sun, 29 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು