AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾವಣನ ವೈಭವೀಕರಿಸಿಲ್ಲ, ಯಶ್ ನಟನೆ ಹಾಗಿದೆ’: ಕೊಂಡಾಡಿದ ನಿರ್ಮಾಪಕ

‘ರಾಮಾಯಣ’ ಸಿನಿಮಾನಲ್ಲಿ ರಾವಣನ ಪಾತ್ರವನ್ನು ವೈಭವೀಕರಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ನಮಿತ್ ಮಲ್ಹೋತ್ರಾ, ‘ರಾವಣನನ್ನು ಖಳನನ್ನಾಗಿಯೇ ತೋರಿಸಲಾಗಿದೆ, ಆದರೆ ಯಶ್ ಅವರ ಸ್ಟಾರ್‌ಡಮ್ ಮತ್ತು ಅವರ ಪ್ರಬಲ ನಟನೆಯಿಂದಾಗಿ ಕೆಲವರು ಯಶ್ ಮೇಲಿನ ತಮ್ಮ ಮೆಚ್ಚುಗೆಯ ಕಾರಣಕ್ಕೆ ರಾವಣನ ಮೇಲಿನ ಅನುಕಂಪದೊಂದಿಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದಿದ್ದಾರೆ.

‘ರಾವಣನ ವೈಭವೀಕರಿಸಿಲ್ಲ, ಯಶ್ ನಟನೆ ಹಾಗಿದೆ’: ಕೊಂಡಾಡಿದ ನಿರ್ಮಾಪಕ
Yash Namit Malhotra
ಮಂಜುನಾಥ ಸಿ.
|

Updated on: Nov 28, 2026 | 9:04 PM

Share

‘ರಾಮಾಯಣ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ಹಲವು ವರ್ಷಗಳಿಂದ ಇದ್ದ ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಹಿಂದಿಕ್ಕಿ, ಭಾರತದ ಅತಿ ಹೆಚ್ಚು ಗಳಿಕೆಯ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಕೆಲವೇ ದಿನಗಳಲ್ಲಿ ‘ಧುರಂಧರ್ 2’ ದಾಖಲೆಯನ್ನೂ ಪುಡಿಗಟ್ಟಲಿದೆ ಸಿನಿಮಾ. ಇದೆಲ್ಲದರ ನಡುವೆ ಅಲ್ಲಲ್ಲಿ ಸಿನಿಮಾದ ಬಗ್ಗೆ ಟೀಕೆಗಳು ಸಹ ವ್ಯಕ್ತವಾಗುತ್ತಿದ್ದು, ಸಿನಿಮಾ ಬಗ್ಗೆ ಬರುತ್ತಿರುವ ಟೀಕೆಗಳಲ್ಲಿ ಮೊದಲನೇಯದ್ದು, ‘ರಾವಣ’ ಪಾತ್ರವನ್ನು ವೈಭವೀಕರಿಸಲಾಗಿದೆ ಎಂಬುದು. ಈ ಬಗ್ಗೆ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಖುದ್ದು ಉತ್ತರ ನೀಡಿದ್ದು, ‘ರಾವಣ’ನ ಪಾತ್ರದ ಬಗ್ಗೆ ಜನರಿಗೆ ಹಾಗೆ ಅನಿಸಲು ಯಶ್ ಅವರ ಅದ್ಭುತ ನಟನೆ ಕಾರಣ ಎಂದಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ರಾವಣನ ಪಾತ್ರವನ್ನು ವೈಭವೀಕರಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ನಮಿತ್ ಮಲ್ಹೋತ್ರಾ, ‘ರಾವಣನನ್ನು ಖಳನನ್ನಾಗಿಯೇ ತೋರಿಸಲಾಗಿದೆ, ಆದರೆ ಯಶ್ ಅವರ ಸ್ಟಾರ್‌ಡಮ್ ಮತ್ತು ಅವರ ಪ್ರಬಲ ನಟನೆಯಿಂದಾಗಿ ಕೆಲವರು ಯಶ್ ಮೇಲಿನ ತಮ್ಮ ಮೆಚ್ಚುಗೆಯ ಕಾರಣಕ್ಕೆ ರಾವಣನ ಮೇಲಿನ ಅನುಕಂಪದೊಂದಿಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದಿದ್ದಾರೆ.

‘ನಾವು ರಾವಣನನ್ನು ಒಳ್ಳೆಯ ವ್ಯಕ್ತಿಯಾಗಿ ತೋರಿಸಿಲ್ಲ. ಆದರೆ ಜನರು ರಾವಣನ ಪಾತ್ರದಲ್ಲಿ ನೋಡಿದ್ದು ಸೂಪರ್‌ಸ್ಟಾರ್ ಆಗಿರುವ ಯಶ್ ಅವರನ್ನು ಮತ್ತು ಜನರಿಗೆ ಯಶ್ ಅವರ ನಟನೆ ಇಷ್ಟವಾಗಿದೆ. ಇಡೀ ಸಿನಿಮಾದಲ್ಲಿ ರಾವಣ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತ ವಿನಾಶವನ್ನುಂಟುಮಾಡಿದ ಮತ್ತು ಎಷ್ಟು ಭಯವನ್ನು ಹರಡಿದನೆಂದರೆ, ಅದನ್ನು ಕೊನೆಗೊಳಿಸಲು ಶ್ರೀರಾಮನೇ ಬರಬೇಕಾಯಿತು’ ಎಂದು ಅವರು ಹೇಳಿದರು.

ಇದನ್ನೂ ಓದಿ:ಮೂರು ವಾರಗಳಲ್ಲಿ ‘ರಾಮಾಯಣ’ ಸಿನಿಮಾ ಗಳಿಸಿದ್ದೆಷ್ಟು? ‘ಬಾಹುಬಲಿ 2’ ದಾಖಲೆ ಮೇಲೆ ಕಣ್ಣು

‘ಈ ಸಿನಿಮಾವು ಪುರಾಣದ ಪ್ರಬಲ ದೊರೆಯಾಗಿ ಮಾತ್ರ ರಾವಣನನ್ನು ತೋರಿಸುವುದಿಲ್ಲ ಬದಲಾಗಿ, ಬಾಲ್ಯದಲ್ಲಿ ದಶಾನಂದ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ರಾವಣ ಆ ಬಳಿಕ ಭಯಾನಕ ರಾಜನಾಗಿ ಬದಲಾದ ಹಾದಿಯನ್ನು ತೋರಿಸುತ್ತದೆ. ಎದುರಾಳಿ ಬಲಿಷ್ಠವಾಗಿದ್ದಾಗ ಮಾತ್ರ ರಾಮನ ಗೆಲುವಿಗೆ ಹೆಚ್ಚಿನ ಅರ್ಥ ಬರುತ್ತದೆ. ಹಾಗಾಗಿ ನಾವು ರಾವಣನ ಶಕ್ತಿಯನ್ನು ಪರದೆಯ ಮೇಲೆ ತೋರಿಸಿ, ಪ್ರೇಕ್ಷಕರನ್ನು ಸಜ್ಜುಗೊಳಿಸಬೇಕಿತ್ತು, ಅದನ್ನೇ ನಿರ್ದೇಶಕರು ಮಾಡಿದ್ದಾರೆ’ ಎಂದಿದ್ದಾರೆ ನಮಿತ್ ಮಲ್ಹೋತ್ರಾ.

ರಾವಣ ರಾಜ ಅಥವಾ ರಾಕ್ಷಸ ಎಂಬ ಬಗ್ಗೆ ಅದೇ ಸಂದರ್ಶನದಲ್ಲಿ ನಡೆದ ಚರ್ಚೆಯ ವೇಳೆ ಅಗತ್ಯ ಪ್ರಶ್ನೆ ಕೇಳಿದ ನಮಿತ್ ಮಲ್ಹೋತ್ರಾ, ರಾವಣ ಅಷ್ಟು ಕೆಟ್ಟವನಾಗಿದ್ದರೆ, ಬ್ರಹ್ಮ ಮತ್ತು ಶಿವ ಆತನಿಗೆ ವರಗಳನ್ನು ನೀಡಿದ್ದೇಕೆ? ಸ್ವತಃ ದೇವರೇ ಆ ವರಗಳನ್ನು ನೀಡಿದ್ದರೆ, ಅವುಗಳನ್ನು ಪಡೆಯಲು ಆತ ಏನೋ ಸಾಧನೆ ಮಾಡಿರಲೇಬೇಕು ಅಲ್ಲವೇ’ ಎಂದು ಅವರು ಕೇಳಿದ್ದಾರೆ.

‘ರಾಮಾಯಣ’ ಸಿನಿಮಾದ ಎರಡೂ ಭಾಗಗಳಿಗಾಗಿ ನಮಿತ್ ಮಲ್ಹೋತ್ರಾ ಸುಮಾರು 2000 ಕೋಟಿಗೂ ಹೆಚ್ಚು ಮೊತ್ತದ ಬಂಡವಾಳ ಹೂಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾಕ್ಕೆ ನಟ ಯಶ್ ಅವರು ಸಹ ನಿರ್ಮಾಪಕರೂ ಹೌದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್