AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಪ್ರತಿ ವಾರದಂತೆ ಈ ವಾರವೂ ಸಹ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಈ ವಾರದ ವಿಶೇಷವೆಂದರೆ, ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದ ಕೆಲ ಸಿನಿಮಾಗಳು ಈ ವಾರ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಸ್ಟ್ರೀಮಿಂಗ್ ಆರಂಭಿಸಿರುವ ಸಿನಿಮಾಗಳನ್ನು ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ನೋಡಿ ಮಾಹಿತಿ...

ಮಂಜುನಾಥ ಸಿ.
|

Updated on: Nov 28, 2026 | 3:26 PM

Share
ಮಲಯಾಳಂ ‘ದೃಶ್ಯಂ 3’ ಸಿನಿಮಾದ ರೀಮೇಕ್ ಆದರೂ ಬೇರೆಯದ್ದೇ ಮಾದರಿಯ ಕಥೆ ಹೊಂದಿರುವ ಹಿಂದಿ ‘ದೃಶ್ಯಂ 3’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಅಜಯ್ ದೇವಗನ್ ನಟಿಸಿರುವ ಈ ಸಿನಿಮಾ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

1 / 10
‘ಸೂಪರ್ ಮ್ಯಾನ್’ ಸಹೋದರಿ ‘ಸೂಪರ್ ಗರ್ಲ್’ ಕುರಿತಾದ ಮಹಿಳಾ ಪ್ರಧಾನ ಸೂಪರ್ ಹೀರೋ ಸಿನಿಮಾ ‘ಸೂಪರ್ ಗರ್ಲ್’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಅಷ್ಟೇನೂ ಹಿಟ್ ಆಗಿರದಿದ್ದ ಈ ಸಿನಿಮಾ ಇದೀಗ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 10
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ವಿಶ್ವದಾಖಲೆ ಬರೆದ ಸಿನಿಮಾ. ಈ ಸಿನಿಮಾ ಈ ಹಿಂದೆ ಬೇರೆ ಕೆಲ ಒಟಿಟಿಗಳಲ್ಲಿ ರೆಂಟ್​​ಗೆ ಲಭ್ಯವಿತ್ತು. ಆದರೆ ಈ ವಾರ ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಿದ್ದು, ನೆಟ್​ಫ್ಲಿಕ್ಸ್​ಗೆ ಚಂದಾದಾರರಾಗಿದ್ದವರು ಹೆಚ್ಚುವರಿ ಹಣ ನೀಡದೆ ಸಿನಿಮಾ ನೋಡಬಹುದು.

3 / 10
ಮದುವೆಯಾದ ನವಜೋಡಿ ಹೊಸ ಮನೆಗೆ ಹೋದ ಬಳಿಕ ಒಂದು ದಿನ ಅಚಾನಕ್ಕಾಗಿ ಪತ್ನಿ ಕಾಣೆ ಆಗುತ್ತಾಳೆ. ಎಲ್ಲರೂ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಆ ನವ ವಧುವಿಗೆ ಏನಾಗಿದೆ? ಯಾಕೆ ನಾಪತ್ತೆ ಆದಳು ಎಂಬುದೇ ವೆಬ್ ಸರಣಿಯ ಕಥೆ. ಈ ತಮಿಳು ವೆಬ್ ಸರಣಿ ಜೀ5ನಲ್ಲಿ ಬಿಡುಗಡೆ ಆಗಿದೆ.

4 / 10
ಕನ್ನಡದ ಹೊಸ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’ ಈ ವಾರ ಸ್ಟ್ರೀಮಿಂಗ್ ಆರಂಭಿಸಿದೆ. ಹಾಸ್ಯ ಪ್ರಧಾನ ಪ್ರೇಮಕಥೆ ಹೊಂದಿರುವ ಈ ವೆಬ್ ಸರಣಿಯ ವಿಶೇಷ ಪಾತ್ರಗಳಲ್ಲಿ ಪ್ರಿಯಾಂಕಾ ಉಪೇಂದ್ರ, ದಿಗಂತ್ ಸಹ ಇದ್ದಾರೆ. ಜೀ5 ನಲ್ಲಿ ವೆಬ್ ಸರಣಿ ವೀಕ್ಷಣೆ ಮಾಡಬಹುದಾಗಿದೆ.

5 / 10
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೆಹಲಿಯ ಒಂದು ಮನೆಯಲ್ಲಿ ಒಂದಾಗುವ ಅಪರಿಚಿತರ ನಡುವೆ ನಡೆಯುವ ಕಥೆಯನ್ನು ‘ಡೆಲ್ಲಿ 2021’ ಒಳಗೊಂಡಿದೆ. ಆಮ್ಲಜನಕದ ಕೊರತೆ, ಆಸ್ಪತ್ರೆ ಬೆಡ್ ಕೊರತೆ ಹೀಗೆ ಆ ವಿಷಮ ಸಮಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 10
‘ಬುರ್ರ ಕಥ’ ಪ್ರಸಂಗಗಳ ಗಾಯಕಿ ಗರಿವೀಡಿ ಲಕ್ಷ್ಮಿ ಜೀವನ ಆಧರಿಸಿದ ‘ಗರಿವೀಡಿ ಲಕ್ಷ್ಮಿ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಬಯೋಗ್ರಫಿ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಪ್ರೈಂ ವಿಡಿಯೋನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

7 / 10
ಎಐ ಬಳಸಿ ನಿರ್ಮಾಣ ಮಾಡಲಾಗಿರುವ ‘ಮಹಾಭಾರತ’ ಕಥೆ ಆಧರಿಸಿ ವೆಬ್ ಸರಣಿಯ ಎರಡನೇ ಸೀಸನ್ ಈ ವಾರ ಬಿಡುಗಡೆ ಆಗುತ್ತಿದೆ. ‘ಮಹಾಭಾರತ ಸೀಸನ್ 2’ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ.

8 / 10
ಜನಪ್ರಿಯ ‘ಬ್ಲೇಡ್ ರನ್ನರ್’ ಸರಣಿಯ ಹೊಸ ಸಿನಿಮಾ ‘ಬ್ಲೇಡ್ ರನ್ನರ್ 2099’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳುಳ್ಳ ಈ ಸಿನಿಮಾ ಅನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

9 / 10
ತೆಲುಗಿನ ಸ್ಟಾರ್ ನಟ ವೆಂಕಟೇಶ್, ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಒಟ್ಟಿಗೆ ನಟಿಸಿ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿರುವ ‘ಆದರ್ಶ ಕುಟುಂಬಂ ಹೌಸ್ ನಂಬರ್ 47’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಈ ಸಿನಿಮಾ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

10 / 10
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us