‘ಅಧಿಕಾರ ಉಳಿಸಿಕೊಳ್ಳುವ ಹುನ್ನಾರ’; ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ನವೆಂಬರ್ 30ರಂದು ಲೋಕಸಭಾ ಅಧಿವೇಶನದಲ್ಲಿ ಮತ್ತೆ ಚರ್ಚೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಸಭೆಯ ಬೃಹತ್ ವಿಸ್ತರಣೆಯ ಮೂಲಕ ರಾಜಕೀಯ ಅಧಿಕಾರವನ್ನು ಕೇಂದ್ರೀಕರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಗೆ ಬೆಂಬಲ ಘೋಷಿಸಿದ ಡಿಎಂಕೆ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

ನವದೆಹಲಿ, ನವೆಂಬರ್ 28: ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವನ್ನು ವಿರೋಧಿಸುವುದಾಗಿ ಒಡಕು ಮೂಡಿರುವ ಇಂಡಿಯ ಮೈತ್ರಿಕೂಟ ಘೋಷಿಸಿದೆ. ಬಿಜೆಪಿಯು ಶಾಶ್ವತವಾಗಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಈ ಮಸೂದೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಶರದ್ ಪವಾರ್ ಅವರ ಎನ್‌ಸಿಪಿ ಬಣವು ಗೈರಾಗಿದ್ದ ಇಂಡಿಯ ಬಣದ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಸಂವಿಧಾನದ (132ನೇ ತಿದ್ದುಪಡಿ) ವಿಧೇಯಕವು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಒತ್ತಿಹೇಳಿದರು.
“ಮೋದಿ ಸರ್ಕಾರ ತರುತ್ತಿರುವ ಸಂವಿಧಾನ ತಿದ್ದುಪಡಿ ವಿಧೇಯಕವು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯನ್ನು ಒಡ್ಡಿದೆ ಎಂದು ಎಲ್ಲಾ ನಾಯಕರು ಸಾಮೂಹಿಕವಾಗಿ ನಿರ್ಧರಿಸಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು ಅಧಿಕಾರದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ” ಎಂದು ಆರ್‌ಜೆಡಿ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಇತರ ಪಕ್ಷಗಳ ಸಂಸದರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ ಹೇಳಿದರು.
ಲೋಕಸಭೆಯ ಬಲವನ್ನು 850 ಸ್ಥಾನಗಳಿಗೆ ಹೆಚ್ಚಿಸುವ ಎನ್ಡಿಎ ಸರ್ಕಾರದ ಯೋಜನೆಯು ನ್ಯಾಯಯುತ ಪ್ರಾತಿನಿಧ್ಯದ ಅಗತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಮಹತ್ವಾಕಾಂಕ್ಷೆಗಳಿಂದ ಪ್ರೇರಿತವಾಗಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಬಿಜೆಪಿಯ ಈ ಹಿಂದಿನ ‘400 ಪಾರ್’ ಚುನಾವಣಾ ಘೋಷಣೆಯನ್ನು ಟೀಕಿಸಿದ ಖರ್ಗೆ, ಆಡಳಿತ ಪಕ್ಷವು ದೀರ್ಘಕಾಲದವರೆಗೆ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಈಗ ‘800 ಪಾರ್’ ಗುರಿಯನ್ನು ಹೊಂದಿದೆ. ನರೇಂದ್ರ ಮೋದಿ ಅಧಿಕಾರದ ಸಂಪೂರ್ಣ ನಿಯಂತ್ರಣವನ್ನು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.
आज INDIA bloc के Floor Leaders के साथ बैठक हुई।
इस बैठक में हमने मिलकर तय किया कि मोदी सरकार जो Delimitation बिल लेकर आ रही है, वह लोकतंत्र के लिए बहुत बड़ा खतरा है।
यह खतरा इसलिए है, क्योंकि BJP लोकतंत्र को ख़त्म कर, पूरी सत्ता हमेशा के लिए अपने हाथ में लेना चाहती है। https://t.co/hmCGnDGHtg
— Mallikarjun Kharge (@kharge) November 28, 2026
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಒಂದು ದಿನದ ನಂತರ ಇಂಡಿಯಾ ಬಣದ ಈ ಸಭೆ ನಡೆದಿದೆ. ಈ ವಿಧೇಯಕವು ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಈ ಕ್ರಮವು ದಕ್ಷಿಣ ಭಾರತದ ರಾಜ್ಯಗಳ ಪ್ರಮುಖ ಬೇಡಿಕೆಗೆ ಪೂರಕವಾಗಿದೆ.
#WATCH | Delhi: On the Delimitation Bill, Congress National President Mallikarjun Kharge says, “They don’t know. They aren’t even aware that this affects the SC and ST communities in proportion to their populations. According to the census schedule, the next census is due in 2026. Where is it? Let them study the facts first, and then speak…”
— ANI (@ANI) November 28, 2026
ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದಲ್ಲಿ ಎಸ್‌ಸಿ-ಎಸ್‌ಟಿ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಖರ್ಗೆ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಸಂಬಂಧಿಸಿದ ನಿಬಂಧನೆಗಳ ಕುರಿತಾಗಿಯೂ ಕಾಂಗ್ರೆಸ್ ಮುಖ್ಯಸ್ಥರು ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯ ಚೌಕಟ್ಟನ್ನು ಪ್ರಶ್ನಿಸಿದ್ದಾರೆ. ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳವನ್ನು ಖಚಿತಪಡಿಸುವಲ್ಲಿ ಸಂವಿಧಾನ ತಿದ್ದುಪಡಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ: ಮೋದಿ ಸರ್ಕಾರದ ಬಲ ಹೆಚ್ಚಿಸಿದ ಸ್ಟಾಲಿನ್ ಪಕ್ಷದ ನಿರ್ಧಾರ
ಪ್ರತಿ ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆಯು ಆಯಾ ಜನಸಂಖ್ಯೆಯ ಪಾಲನ್ನು ಪ್ರತಿಬಿಂಬಿಸಬೇಕು ಎಂದು ಖರ್ಗೆ ವಾದಿಸಿದರು. ಲೋಕಸಭೆಯ ವಿಸ್ತರಣೆಯು ಮೀಸಲು ಕ್ಷೇತ್ರಗಳ ಹೆಚ್ಚಳಕ್ಕೂ ಕಾರಣವಾಗಬೇಕು ಎಂದು ಪ್ರತಿಪಾದಿಸಿದ ಅವರು, ಸರ್ಕಾರದ ಪ್ರಸ್ತಾವನೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ ಎಂದು ದೂರಿದರು.
आज INDIA Alliance के सभी दलों के नेताओं ने मिलकर तय किया है कि मोदी सरकार द्वारा लाया जा रहा संविधान संशोधन Bill लोकतंत्र के लिए बहुत बड़ा खतरा है। हम इसका विरोध करेंगे।
इसके पीछे कई महत्वपूर्ण कारण हैं।
1. पहले इनका नारा ‘400 पार’ था। देश की जनता ने उसे विफल कर दिया। अब 850 सीटों तक लोकसभा का विस्तार करके ये हमेशा के लिए सत्ता अपने हाथों में रखना चाहते हैं।
इनका उद्देश्य लोकतंत्र को मजबूत करना नहीं, बल्कि पूरी सत्ता अपने हाथों में केंद्रित करना है।
2. इस Bill में SC/ST यानी अनुसूचित जाति और अनुसूचित जनजाति के हितों का ध्यान नहीं रखा गया है।
संविधान का Article 330 कहता है कि SC/ST के लिए उनकी जनसंख्या के अनुपात में सीटें आरक्षित होनी चाहिए।
जब नया Census होने वाला है, तो उसके आंकड़ों का इंतज़ार क्यों नहीं किया जा रहा है? Latest Census के अनुसार SC/ST की जनसंख्या के अनुपात में उनकी सीटें निर्धारित होनी चाहिए।
हमारा सवाल है कि सरकार अनुसूचित जाति और अनुसूचित जनजाति को उनकी आबादी के अनुसार उनका उचित Share देने से क्यों बच रही है?
3. जिस चुनाव आयोग पर 10 करोड़ से ज्यादा लोगों के नाम मतदाता सूची से हटाने को लेकर गंभीर सवाल उठ रहे हैं, उसी चुनाव आयोग को परिसीमन की जिम्मेदारी सौंपी जा रही है। यह हमें स्वीकार नहीं है।
Chief Election Commissioner ज्ञानेश कुमार की निष्पक्षता पर पहले से ही गंभीर सवाल हैं। अगर उन्हीं की देखरेख में Delimitation होगा, तो उसकी निष्पक्षता की क्या Guarantee है?
किस सीट को General बनाना है, किस सीट को Reserved बनाना है, कहां महिलाओं के लिए सीट आरक्षित करनी है, इन सभी महत्वपूर्ण फैसलों में चुनाव आयोग की भूमिका होगी।
जब ‘Vote Chori’ को लेकर ही इतने गंभीर आरोप हैं, तो ऐसे में Delimitation की निष्पक्षता पर सवाल उठना स्वाभाविक है।
4. असम और जम्मू-कश्मीर में किस ढंग से Delimitation किया गया, इसके उदाहरण हमारे सामने हैं।
Geography और Population के आधार पर निर्वाचन क्षेत्रों की सीमाओं में किस तरह बदलाव किया गया, General और Reserved सीटों का स्वरूप कैसे बदला गया, इसके राजनीतिक परिणाम भी हमने देखे हैं।
हमें आशंका है कि पूरे देश में इसी तरह का परिसीमन करके BJP अपने राजनीतिक हितों को साधना चाहती है।
5. अप्रैल में जब सरकार यह Bill लेकर आई थी, तब उसे Two-third Majority नहीं मिली और Bill विफल हो गया।
अब TMC, NCP, शिवसेना और अन्य राजनीतिक दलों को तोड़कर अपने Numbers जुटाने की कोशिश की जा रही है। जब सरकार को लग रहा है कि शायद उसके पास पर्याप्त संख्या हो सकती है, तब वह दोबारा यह Bill लेकर आ रही है।
6. एक बार पूरी सत्ता इनके हाथों में चली गई, तो ये संविधान में अपनी इच्छानुसार बदलाव करने के लिए इस बहुमत का इस्तेमाल कर सकते हैं।
हम नहीं चाहते कि भारत की संसद भी चीन की तरह ऐसी संस्था बन जाए, जहां सरकार के इशारे पर सभी हाथ उठाकर हर प्रस्ताव को मंजूरी दे दें।
हमें आशंका है कि इसके जरिए RSS-BJP हमेशा के लिए सत्ता अपने हाथों में रखना चाहती है और संविधान की जगह मनुस्मृति की विचारधारा लागू करना चाहती है।
इसीलिए हम सभी ने मिलकर इस संविधान संशोधन Bill का विरोध करने का निर्णय लिया है।
यह न SC/ST के हित में है, न देश के हित में और न ही लोकतंत्र के हित में है।
यह Amendment लोकतंत्र को जिंदा रखने के लिए नहीं, बल्कि लोकतंत्र को खत्म करने के लिए लाया जा रहा है।
— Mallikarjun Kharge (@kharge) November 28, 2026
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಚುನಾವಣಾ ಆಯೋಗಕ್ಕೆ ವಹಿಸುತ್ತಿರುವುದಕ್ಕೂ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ 10 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಿದ ವಿಚಾರದಲ್ಲಿ ಚುನಾವಣಾ ಆಯೋಗ ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು. ಈ ವ್ಯವಸ್ಥೆಯು ಸ್ವೀಕಾರಾರ್ಹವಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷರು, ಪ್ರಸ್ತುತ ಚುನಾವಣಾ ಆಯೋಗದ ನಾಯಕತ್ವದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸುವುದರಿಂದ ಕ್ಷೇತ್ರಗಳ ಗಡಿಗಳು ಮತ್ತು ಮೀಸಲಾತಿ ವರ್ಗಗಳ ತಿರುಚುವಿಕೆಗೆ ಕಾರಣವಾಗಬಹುದು ಎಂದು ಆರೋಪಿಸಿದರು.
ಚುನಾವಣಾ ಅಕ್ರಮಗಳ ಕುರಿತ ಕಾಂಗ್ರೆಸ್ ಆರೋಪಗಳನ್ನು ಪುನರುಚ್ಚರಿಸಿದ ಖರ್ಗೆ, ಮತ ಕಳ್ಳತನಕ್ಕೆ ಅನುವು ಮಾಡಿಕೊಡಲು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಿಂದಲೇ ಸೂಚನೆಗಳನ್ನು ನೀಡಲು ಸಾಧ್ಯವಾದರೆ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನೂ ದುರುಪಯೋಗಪಡಿಸಿಕೊಳ್ಳಬಹುದು ಎಂದು ಆರೋಪಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sat, 28 November 26




