Elections
ಚುನಾವಣೆ ಎನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ. ಇದರಲ್ಲಿ, ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ, ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಚುನಾವಣೆ ಅಂದರೆ ಕೇವಲ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆ ಮಾತ್ರ ಅಲ್ಲ. ಖಾಸಗಿ ಮತ್ತು ವ್ಯಾಪಾರದ ಸಂಘಟನೆಗಳಲ್ಲಿ, ಕ್ಲಬ್‌ಗಳಿಂದ ಹಿಡಿದು ಸ್ವಯಂ ಸೇವಾ ಸಂಘಟನೆ ಮತ್ತು ಪಾಲಿಕೆಗಳಲ್ಲೂ ಸಹ ಈ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ.
ಪ್ರಾಚೀನ ರೋಮ್‌ನಲ್ಲಿ ಮತ್ತು ಮಧ್ಯಕಾಲೀನ ಯುಗದ ಪೂರ್ತಿ ಹೋಲಿ ರೋಮನ್ ಎಂಪರರ್ ಹಾಗು ದಿ ಪೋಪ್ ಅವರಂಥ ಆಳುವವರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ಬಳಸಲಾಗುತ್ತಿತ್ತು. 17ನೇ ಶತಮಾನದ ಆರಂಭದವರೆಗೂ, ಉತ್ತರ ಅಮೇರಿಕಾದಲ್ಲಿ ಮತ್ತು ಯುರೋಪಿ ನಲ್ಲಿ ಪ್ರತಿನಿಧಿ ಸರ್ಕಾರದ ಆಲೋಚನೆ ಆಗುವವರೆಗೂ ಸರಕಾರಿ ಅಧಿಕಾರಿಗಳನ್ನೊಳಗೊಂಡ ಇಂದಿನಂತಹ ಆಧುನಿಕ ಸಾರ್ವಜನಿಕ ಚುನಾವಣೆಗಳ ಆಲೋಚನೆ ಮೂಡಿರಲಿಲ್ಲ. ಅನೇಕ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗಳಲ್ಲಿ,ಸಾರ್ವಜನಿಕ ಆಡಳಿತದ ಹಲವು ಹಂತಗಳಿಗೆ ಅಥವಾ ಭೌಗೋಳಿಕ ವ್ಯಾಪ್ತಿಗೆ ತಾಳೆಯಾಗುವಂತೆ ವಿವಿಧ ಶೈಲಿಯ ಚುನಾವಣೆಗಳಿವೆ. ಕೆಲವು ಸಾಮಾನ್ಯ ಶೈಲಿಯ ಚುನಾವಣೆ ಎಂದರೆ ಅಧ್ಯಕ್ಷೀಯ ಚುನಾವಣೆ, ಸಾರ್ವತ್ರಿಕ ಚುನಾವಣೆ, ಪ್ರಾಥಮಿಕ ಚುನಾವಣೆ, ಮರು ಚುನಾವಣೆ, ಸ್ಥಳೀಯ ಚುನಾವಣೆ.