AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ 2’ ದಾಖಲೆಯನ್ನೇ ಮುರಿದ ‘ರಾಮಾಯಣ’, ಉಳಿದಿರುವುದು ಎರಡೇ ಹೆಜ್ಜೆ

Ramayana Movie Collection: ‘ರಾಮಾಯಣ’ ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ವಾರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಹಲವು ವರ್ಷಗಳಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದು ತೋರಿಸಿದೆ. ‘ಬಾಹುಬಲಿ 2’ ಸಿನಿಮಾದ ಬಾಕ್ಸ್ ಆಫೀಸ್ ದಾಖಲೆಯನ್ನು ‘ರಾಮಾಯಣ’ ಸಿನಿಮಾ ಪುಡಿಗಟ್ಟಿದೆ. ಇನ್ನು ಉಳಿದಿರುವುದು ಎರಡು ಹೆಜ್ಜೆಯಷ್ಟೆ?

‘ಬಾಹುಬಲಿ 2’ ದಾಖಲೆಯನ್ನೇ ಮುರಿದ ‘ರಾಮಾಯಣ’, ಉಳಿದಿರುವುದು ಎರಡೇ ಹೆಜ್ಜೆ
Ramayana Poster
ಮಂಜುನಾಥ ಸಿ.
|

Updated on:Nov 28, 2026 | 7:10 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ನಿರ್ಮಿಸಿತು ಹೊಸ ದಾಖಲೆ
  • ‘ಬಾಹುಬಲಿ 2’ ದಾಖಲೆ ಮುರಿದ ‘ರಾಮಾಯಣ’
  • ‘ರಾಮಾಯಣ‘ ಸಿನಿಮಾ ಗಳಿಸಿರುವುದೆಷ್ಟು?

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಹಾಗೂ ಇನ್ನೂ ಕೆಲವು ಪ್ರಮುಖ ನಟ-ನಟಿಯರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಲು ಜೋರಾಗಿದೆ. ಮೊದಲ ದಿನ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಿರಲಿಲ್ಲವಾದರೂ ಆ ನಂತರದ ದಿನಗಳಲ್ಲಿ ಸಿನಿಮಾದ ಗಳಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಯಿತು. ಇದೀಗ ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ವಾರದಲ್ಲಿ ಹೊಸ ಮೈಲಿಗಲ್ಲನ್ನು ‘ರಾಮಾಯಣ’ ಸ್ಥಾಪಿಸಿದ್ದು, ಹಲವು ವರ್ಷಗಳಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದು ತೋರಿಸಿದೆ. ‘ಬಾಹುಬಲಿ 2’ ಸಿನಿಮಾದ ಬಾಕ್ಸ್ ಆಫೀಸ್ ದಾಖಲೆಯನ್ನು ‘ರಾಮಾಯಣ’ ಸಿನಿಮಾ ಪುಡಿಗಟ್ಟಿದೆ.

ಶನಿವಾರದ ಕಲೆಕ್ಷನ್ ಲೆಕ್ಕಾಚಾರದ ಪ್ರಕಾರ, ‘ರಾಮಾಯಣ’ ಸಿನಿಮಾ ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಸಿನಿಮಾ ‘ಬಾಹುಬಲಿ 2’ರ ಜೀವಮಾನದ ಗಳಿಕೆಯನ್ನು ಹಿಂದಿಕ್ಕಿದ್ದು, ಅದನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಇದೀಗ ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಯಶ್, ರಣಬೀರ್ ಅವರ ಅಭಿಮಾನಿಗಳ ಆಸೆಯಾಗಿರುವ 2000 ಕೋಟಿ ಗಳಿಕೆಗೆ ಸಿನಿಮಾ ಇನ್ನಷ್ಟು ಹತ್ತಿರವಾಗಿದೆ.

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಈ ಚಿತ್ರವು ಸತತ ಏಳು ದಿನಗಳ ಕಾಲ ಪ್ರತಿದಿನವೂ ವಿಶ್ವಾದ್ಯಂತ 100 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಆದರೆ ಎರಡನೇ ವಾರದಲ್ಲಿ ಚಿತ್ರದ ಗಳಿಕೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿತ್ತು. ದಿನವಹಿ ಕಲೆಕ್ಷನ್ 30 ಕೋಟಿಗಿಂತ ಕಡಿಮೆಯಾಗಿತ್ತು. ಆದರೂ ಮೂರನೇ ವಾರದಲ್ಲಿ ಚಿತ್ರವು ಭರ್ಜರಿ ಏರಿಕೆ ಕಂಡಿದ್ದು, ಮತ್ತೆ ಲಯಕ್ಕೆ ಮರಳಿದೆ. ಅಲ್ಲದೆ ‘ಬಾಹುಬಲಿ 2’ ಸಿನಿಮಾದ ಬಾಕ್ಸ್ ಆಫೀಸ್ ರೆಕಾರ್ಡ್ ಅನ್ನು ಸಹ ಮುರಿದಿದೆ.

2017ರಲ್ಲಿ ರಿಲೀಸ್ ಆಗಿದ್ದ ‘ಬಾಹುಬಲಿ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1788 ಕೋಟಿಗೂ ಅಧಿಕ ಮೊತ್ತ ಕಲೆಹಾಕಿತ್ತು. ಇದೀಗ ಆ ದಾಖಲೆಯನ್ನು ಮುರಿದಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ 23ನೇ ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1790.10 ಕೋಟಿ ರೂಪಾಯಿ ಕಲೆಹಾಕಿದೆ. ಮಾತ್ರವಲ್ಲದೆ ಭಾರತದಲ್ಲಿ ‘ಧುರಂಧರ್ 2’ ಸಿನಿಮಾದ ಬಳಿಕ 1000 ಕೋಟಿ ದಾಟಿದ ಎರಡನೇ ಹಿಂದಿ ಚಿತ್ರವಾಗಿದೆ. ಅದೂ ಸಹ ಅಪರೂಪದ ದಾಖಲೆಯೇ ಆಗಿದೆ.

ಇದನ್ನೂ ಓದಿ:ಮೂರು ವಾರಗಳಲ್ಲಿ ‘ರಾಮಾಯಣ’ ಸಿನಿಮಾ ಗಳಿಸಿದ್ದೆಷ್ಟು? ‘ಬಾಹುಬಲಿ 2’ ದಾಖಲೆ ಮೇಲೆ ಕಣ್ಣು

‘ರಾಮಾಯಣ’ ಸಿನಿಮಾ ಈಗಾಗಲೇ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (₹1742 ಕೋಟಿ) ಸಿನಿಮಾದ ದಾಖಲೆಯನ್ನು ಮುರಿದಿದೆ. ಇದೀಗ ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಮುರಿದಿದ್ದು, ಮುಂದಿರುವುದು ‘ಧುರಂಧರ್ 2’ ಸಿನಿಮಾದ ದಾಖಲೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1850 ಕೋಟಿ ಗಳಿಕೆ ಮಾಡಿದೆ. ‘ರಾಮಾಯಣ’ ಸಿನಿಮಾದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಇನ್ನೊಂದು ವಾರದಲ್ಲಿ ಆ ದಾಖಲೆಯೂ ಸಹ ಮುರಿದು ಬೀಳಲಿದೆ. ಅಲ್ಲಿಗೆ ‘ದಂಗಲ್’ ಸಿನಿಮಾ ಮಾತ್ರವೇ ಉಳಿಯಲಿದೆ. 2016ರಲ್ಲಿ ರಿಲೀಸ್ ಆಗಿದ್ದ ‘ದಂಗಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 2070 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ದಾಖಲೆಯನ್ನು ಹಿಂದಿಕ್ಕಿ ನಂಬರ್ 1 ಆಗುವ ಗುರಿ ‘ರಾಮಾಯಣ’ ಚಿತ್ರತಂಡದ್ದು.

ವಿದೇಶಗಳಲ್ಲಿ, ಅಮೆರಿಕ ಹಾಗೂ ಥೈಲ್ಯಾಂಡ್, ವಿಯೆಟ್ನಾಂ ಮತ್ತು ನೇಪಾಳದಂತಹ ವಿಶೇಷ ಮಾರುಕಟ್ಟೆಗಳಲ್ಲಿ ಉತ್ತಮ ಪ್ರದರ್ಶನದ ಕಾರಣದಿಂದಾಗಿ ‘ರಾಮಾಯಣ’ ತನ್ನ ವಿದೇಶಿ ಓಟವನ್ನು ಮೂರನೇ ವಾರಾಂತ್ಯದಲ್ಲೂ ಕಾಯ್ದುಕೊಂಡಿತು. 1 ಮಿಲಿಯನ್ ಡಾಲರ್‌ಗಿಂತ ಕಡಿಮೆ ಗಳಿಕೆಯ ಹಲವು ದಿನಗಳ ನಂತರ, ಮೂರನೇ ವಾರಾಂತ್ಯದಲ್ಲಿ ಚೇತರಿಸಿಕೊಂಡ ‘ರಾಮಾಯಣ’ 5 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ತಂದುಕೊಟ್ಟಿತು. ಬಿಡುಗಡೆಯಾದ 23ನೇ ದಿನದಂದು ಚಿತ್ರವು ವಿದೇಶದಲ್ಲಿ ₹5 ಕೋಟಿ ಸಂಗ್ರಹಿಸಿದ್ದು, ಇದುವರೆಗಿನ ಒಟ್ಟು ವಿದೇಶಿ ಗಳಿಕೆಯನ್ನು ₹595 ಕೋಟಿಗೆ ಕೊಂಡೊಯ್ದಿದೆ.

ನಿತಿಶ್ ತಿವಾರಿ ನಿರ್ಮಾಣದ ಈ ಚಿತ್ರವು ಈಗ 27 ದೇಶಗಳಲ್ಲಿ ‘ಸಾರ್ವಕಾಲಿಕ ನಂಬರ್ 1 ಭಾರತೀಯ ಚಿತ್ರ’ಎನಿಸಿಕೊಂಡಿದೆ. ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌, ವಿಯೆಟ್ನಾಂ, ಕಾಂಬೋಡಿಯಾ ಮತ್ತು ಹಲವಾರು ಯುರೋಪಿಯನ್ ದೇಶಗಳಲ್ಲಿಯೂ ಸಹ ‘ರಾಮಾಯಣ’ ಅದ್ಭುತ ಪ್ರದರ್ಶನ ಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Sat, 28 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸುದೀಪ್ ಎದುರು ಕಳಚಲಿದೆ ಗುಳ್ಳೆನರಿ ಯಶಸ್ ಮುಖವಾಡ
ಸುದೀಪ್ ಎದುರು ಕಳಚಲಿದೆ ಗುಳ್ಳೆನರಿ ಯಶಸ್ ಮುಖವಾಡ
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದ ಖಾಸಗಿ ಎಲೆಕ್ಟ್ರಿಕ್ ಬಸ್
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದ ಖಾಸಗಿ ಎಲೆಕ್ಟ್ರಿಕ್ ಬಸ್