AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು ಅತ್ಯಾಚಾರ ಕೇಸಿನ ಹಿಂದೆ ಗೀತು ಮೋಹನ್​​ದಾಸ್: ‘ಟಾಕ್ಸಿಕ್’ ನಿರ್ದೇಶಕಿ ಮೇಲೆ ಆರೋಪ

‘ಟಾಕ್ಸಿಕ್’ ಸಿನಿಮಾದ ಸಾಧಾರಣ ಬಾಕ್ಸ್ ಆಫೀಸ್ ಪ್ರದರ್ಶನದ ಬಳಿಕ ಸಿನಿಮಾ ನಿರ್ದೇಶಕಿ ಗೀತೂ ಮೋಹನ್​​ದಾಸ್ ಮೌನಕ್ಕೆ ಶರಣಾಗಿದ್ದಾರೆ. ಇದರ ನಡುವೆ ಇದೀಗ ನಿರ್ದೇಶಕಿ ಗೀತೂ ಮೋಹನ್​​ದಾಸ್ ಮೇಲೆ ಮಲಯಾಳಂ ನಿರ್ದೇಶಕನೊಬ್ಬ ಗಂಭೀರ ಆರೋಪ ಮಾಡಿದ್ದು, ‘ಸುಳ್ಳು ಅತ್ಯಾಚಾರ ಆರೋಪದ ಹಿಂದೆ ಗೀತೂ ಮೋಹನ್​ದಾಸ್ ಕೈವಾಡ ಇದೆ’ ಎಂದಿದ್ದಾರೆ. ಏನಿದು ಪ್ರಕರಣ?

ಸುಳ್ಳು ಅತ್ಯಾಚಾರ ಕೇಸಿನ ಹಿಂದೆ ಗೀತು ಮೋಹನ್​​ದಾಸ್: ‘ಟಾಕ್ಸಿಕ್’ ನಿರ್ದೇಶಕಿ ಮೇಲೆ ಆರೋಪ
Geetu Mohandas
ಮಂಜುನಾಥ ಸಿ.
|

Updated on: Nov 28, 2026 | 8:18 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ನಿರ್ದೇಶಕಿ ಮೇಲೆ ಆರೋಪ
  • ಸುಳ್ಳು ಅತ್ಯಾಚಾರ ಕೇಸಿನ ಹಿಂದೆ ಗೀತೂ ಮೋಹನ್​​ದಾಸ್?
  • ನಿರ್ದೇಶಕ ಲಿಜು ಕೃಷ್ಣನ್ ಮಾಡಿರುವ ಆರೋಪವೇನು?

ಯಶ್ ನಟಿಸಿದ್ದ ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡುವ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದ ನಿರ್ದೇಶಕಿ ಗೀತೂ ಮೋಹನ್​​ದಾಸ್, ‘ಟಾಕ್ಸಿಕ್’ ಸಿನಿಮಾದ ಸಾಧಾರಣ ಬಾಕ್ಸ್ ಆಫೀಸ್ ಪ್ರದರ್ಶನದ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಇದರ ನಡುವೆ ಇದೀಗ ನಿರ್ದೇಶಕಿ ಗೀತೂ ಮೋಹನ್​​ದಾಸ್ ಮೇಲೆ ಮಲಯಾಳಂ ನಿರ್ದೇಶಕನೊಬ್ಬ ಗಂಭೀರ ಆರೋಪ ಮಾಡಿದ್ದು, ‘ಸುಳ್ಳು ಅತ್ಯಾಚಾರ ಆರೋಪದ ಹಿಂದೆ ಗೀತೂ ಮೋಹನ್​ದಾಸ್ ಕೈವಾಡ ಇದೆ’ ಎಂದಿದ್ದಾರೆ. ಏನಿದು ಪ್ರಕರಣ?

2022 ರಲ್ಲಿ ಮಲಯಾಳಂ ನಿರ್ದೇಶಕ ಲಿಜು ಕೃಷ್ಣನ್ ಎಂಬ ಸಿನಿಮಾ ನಿರ್ದೇಶಕನನ್ನು ‘ಪಡವೆಟ್ಟು’ ಸಿನಿಮಾದ ಸೆಟ್​​ನಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ಲಿಜು ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆದಿದ್ದು, ಇತ್ತೀಚೆಗಷ್ಟೆ ಸ್ಥಳೀಯ ನ್ಯಾಯಾಲಯವು ಲಿಜು ಕೃಷ್ಣನ್ ಅವರನ್ನು ಸಾಕ್ಷ್ಯಗಳ ಕೊರತೆ ಕಾರಣಕ್ಕೆ ನಿರ್ದೋಷಿ ಎಂದು ಘೋಷಿಸಿದೆ. ತೀರ್ಪು ಹೊರಬಿದ್ದ ಬಳಿಕ ಮಾತನಾಡಿರುವ ನಿರ್ದೇಶಕ ಲಿಕು ಕೃಷ್ಣನ್, ಈ ಪ್ರಕರಣದ ಹಿಂದೆ ‘ಟಾಕ್ಸಿಕ್’ ನಿರ್ದೇಶಕಿ ಗೀತೂ ಮೋಹನ್​​ದಾಸ್ ಕೈವಾಡ ಇದೆ ಎಂದಿದ್ದಾರೆ.

‘ನನ್ನ ಮೊದಲ ಸಿನಿಮಾ ‘ಪಡವೆಟ್ಟು’ ಸಿನಿಮಾ ಶುರು ಆಗುವ ಮುಂಚೆಯೇ ನನಗೂ ಹಾಗೂ ಗೀತೂ ಮೋಹನ್​​ದಾಸ್ ನಡುವೆ ಕತೆಯ ಕುರಿತು ಭಿನ್ನಾಭಿಪ್ರಾಯ ಮೂಡಿತ್ತು. ಆ ಭಿನ್ನಾಭಿಪ್ರಾಯ ಜಗಳವಾಗಿ ಅದು ದ್ವೇಷಕ್ಕೆ ದಾರಿ ಮಾಡಿಕೊಟ್ಟಿತ್ತು. ಅದೇ ಹಗೆತನದ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಕೇಲು ದಾಖಲಾಯ್ತು. ನನ್ನ ವಿರುದ್ಧ ದಾಖಲಾದ ಕೇಸಿನ ವಿಚಾರಣೆ ವೇಳೆ ಪ್ರಕರಣದ ಹಿಂದೆ ಗೀತೂ ಮೋಹನ್​​ದಾಸ್ ಕೈವಾಡ ಇರುವ ಬಗ್ಗೆಯೂ ನ್ಯಾಯಾಲಯದಲ್ಲಿ ಉಲ್ಲೇಖ ಬಂದಿತ್ತು’ ಎಂದು ಲಿಜು ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ದಲ್ಲಿ ಯಶ್ ನಟನೆ ಬಗ್ಗೆ ತನಿಷಾ ವಿಮರ್ಶೆ: ನಟಿ ಹೇಳಿದ್ದೇನು?

‘ಪಡವೆಟ್ಟು’ ಸಿನಿಮಾದಿಂದ ನನ್ನನ್ನು ಹೊರಗಟ್ಟಿ, ಸಿನಿಮಾದ ರಿಲೀಸ್ ನಿಲ್ಲಿಸುವುದೇ ಗೀತೂ ಮೋಹನ್​​ದಾಸ್ ಉದ್ದೇಶವಾಗಿತ್ತು. ಹಾಗಾಗಿ ನನ್ನ ಬಂಧನ ಆದ ಕೂಡಲೇ ಸಿನಿಮಾದ ರಿಲೀಸ್ ಅನ್ನು ತಮ್ಮ ಪ್ರಭಾವ ಬಳಸಿ ನಿಲ್ಲಿಸಿದರು. ಭಾರತದ ಹಲವು ಸಿನಿಮಾ ಸಂಘಘಳಿಗೆ ನನ್ನ ವಿರುದ್ಧ ನೊಟೀಸ್​​ಗಳನ್ನು ಕಳಿಸಿದರು. ಗೀತೂ ಅವರು ತಮ್ಮ ಪ್ರಭಾವ ಬಳಸಿ ನನ್ನ ವಿರುದ್ಧ ನರೆಟಿವ್ ಕಟ್ಟಿದರು’ ಎಂದು ಆರೋಪಿಸಿದ್ದಾರೆ ಲಿಜು.

ಗೀತೂ ಮೋಹನ್​​ದಾಸ್ ಅವರು ನನ್ನ ಪ್ರಕರಣದಲ್ಲಿ ಡಬ್ಲುಸಿಸಿ (ವಿಮೆನ್ ಇನ್ ಸಿನಿಮಾ ಕಲೆಕ್ಟಿವ್) ಅನ್ನು ತಪ್ಪಾಗಿ ಬಳಕೆ ಮಾಡಿದ್ದಾರೆ. ದುರುದ್ಧೇಶಪೂರ್ವಕವಾಗಿ ನನ್ನ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದಾರೆ. ತಮ್ಮ ದ್ವೇಷ ತೀರಿಸಿಕೊಳ್ಳಲು, ಅಹಂ ಪ್ರದರ್ಶಿಸಲು ಡಬ್ಲುಸಿಸಿಯನ್ನು ಅವರು ಬಳಕೆ ಮಾಡಿದ್ದಾರೆ ಎಂದು ನಿರ್ದೇಶಕ ಲಿಜು ಆರೋಪ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ