AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ದಲ್ಲಿ ಯಶ್ ನಟನೆ ಬಗ್ಗೆ ತನಿಷಾ ವಿಮರ್ಶೆ: ನಟಿ ಹೇಳಿದ್ದೇನು?

‘ರಾಮಾಯಣ’ ಸಿನಿಮಾ ನೋಡಿ ಟ್ವಿಟ್ಟರ್​​ನಲ್ಲಿ ವಿಮರ್ಶೆ ಹಂಚಿಕೊಂಡಿರುವ ನಟಿ ತನಿಷಾ ಮುಖರ್ಜಿ, ‘ರಾಮಾಯಣ’ ಚಿತ್ರದಲ್ಲಿ ರಾವಣನ ಶಕ್ತಿ ಮತ್ತು ದೈಹಿಕ ಗಾಂಭೀರ್ಯವನ್ನು ಪರದೆಯ ಮೇಲೆ ತಂದಿದ್ದಕ್ಕಾಗಿ ಯಶ್ ಅವರನ್ನು ಶ್ಲಾಘಿಸಿದ್ದಾರೆ, ಆದರೆ ಯಶ್ ಅವರ ನಟನೆಯ ರಾವಣನ ವ್ಯಕ್ತಿತ್ವವನ್ನು ಪೂರ್ತಿಯಾಗಿ ಪ್ರತಿನಿಧಿಸುತ್ತಿಲ್ಲ’ ಎಂದು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ‘ಯಶ್ ಒಬ್ಬ ನಟನಾಗಿ ಇಷ್ಟವಾದರೂ, ರಾವಣನಂಥ ಪೌರಾಣಿಕ ಪಾತ್ರದ ನಿರೂಪಣೆಯಲ್ಲಿ ಇನ್ನಷ್ಟು ಆಳ ತರಬಹುದಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ರಾಮಾಯಣ’ದಲ್ಲಿ ಯಶ್ ನಟನೆ ಬಗ್ಗೆ ತನಿಷಾ ವಿಮರ್ಶೆ: ನಟಿ ಹೇಳಿದ್ದೇನು?
Yash Tanisha
ಮಂಜುನಾಥ ಸಿ.
|

Updated on:Nov 25, 2026 | 6:50 PM

Share

ಮುಖ್ಯಾಂಶಗಳು

  • ಯಶ್ ನಟನೆ ಬಗ್ಗೆ ಬಾಲಿವುಡ್ ನಟಿ ಕೊಂಕು
  • ಯಶ್ ನಟನೆಯ ವಿಮರ್ಶೆ ಮಾಡಿದ ತನಿಷಾ ಮುಖರ್ಜಿ
  • ಯಶ್ ಬಗ್ಗೆ ಟ್ವೀಟ್ ಮಾಡಿರುವ ತನಿಷಾ

‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಸಿನಿಮಾದ ಗಳಿಕೆ 1700 ಕೋಟಿ ದಾಟಿದ್ದು, ಕೆಲವೇ ದಿನಗಳಲ್ಲಿ 2000 ಕೋಟಿ ಗಡಿ ದಾಟಲಿದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಅದ್ಧೂರಿಯತನ, ವಿಎಫ್​​ಎಕ್ಸ್, ಸಂಗೀತ ಇನ್ನಿತರೆ ತಾಂತ್ರಿಕ ಅಂಶಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾ ನೋಡಿದವರೆಲ್ಲ ಯಶ್ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಈ ವರೆಗೆ ಬಂದಿರುವ ‘ರಾಮಾಯಣ’ ಕುರಿತ ಸಿನಿಮಾಗಳಲ್ಲಿ ಯಶ್ ಅವರ ‘ರಾವಣ’ ಪಾತ್ರವೇ ಟಾಪ್ ಎನ್ನುತ್ತಿದ್ದಾರೆ. ಕೆಲವರಂತೂ ‘ಇದು ರಾವಣಾಯಣ’ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ನಟಿ ತನಿಷಾ ಮಾತ್ರ, ಯಶ್ ನಟನೆಯನ್ನು ಟೀಕೆ ಮಾಡಿದ್ದಾರೆ.

ಸಿನಿಮಾ ನೋಡಿ ಟ್ವಿಟ್ಟರ್​​ನಲ್ಲಿ ವಿಮರ್ಶೆ ಹಂಚಿಕೊಂಡಿರುವ ನಟಿ ತನಿಷಾ ಮುಖರ್ಜಿ, ‘ರಾಮಾಯಣ’ ಚಿತ್ರದಲ್ಲಿ ರಾವಣನ ಶಕ್ತಿ ಮತ್ತು ದೈಹಿಕ ಗಾಂಭೀರ್ಯವನ್ನು ಪರದೆಯ ಮೇಲೆ ತಂದಿದ್ದಕ್ಕಾಗಿ ಯಶ್ ಅವರನ್ನು ಶ್ಲಾಘಿಸಿದ್ದಾರೆ, ಆದರೆ ಯಶ್ ಅವರ ನಟನೆಯ ರಾವಣನ ವ್ಯಕ್ತಿತ್ವವನ್ನು ಪೂರ್ತಿಯಾಗಿ ಪ್ರತಿನಿಧಿಸುತ್ತಿಲ್ಲ’ ಎಂದು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ‘ಯಶ್ ಒಬ್ಬ ನಟನಾಗಿ ಇಷ್ಟವಾದರೂ, ರಾವಣನಂಥ ಪೌರಾಣಿಕ ಪಾತ್ರದ ನಿರೂಪಣೆಯಲ್ಲಿ ಇನ್ನಷ್ಟು ಆಳ ತರಬಹುದಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಅಜ್ಜಿಯ ಕಾಲದ ‘ರಾಮರಾಜ್ಯ’ವನ್ನು (ಹಳೆಯ ಚಲನಚಿತ್ರ) ನೋಡಿದವಳಾಗಿ, ಈ ಹೊಸ ಚಿತ್ರವನ್ನು (ರಾಮಾಯಣ) ನೋಡಿದ ನಂತರ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲೇಬೇಕೆನಿಸಿತು. ನಟನಾಗಿ ನನಗೆ ಯಶ್ ಇಷ್ಟ, ಮತ್ತು ವ್ಯಕ್ತಿಯಾಗಿಯೂ ಅವರು ಬಹಳ ಪ್ರಗತಿಪರ ಚಿಂತನೆಯುಳ್ಳವರು ಎಂದು ನನಗನ್ನಿಸುತ್ತದೆ. ಆದರೆ, ಈ ಪಾತ್ರದಲ್ಲಿ ಅವರ ಅಭಿನಯವು ನನಗೆ ಅಷ್ಟೇನೂ ತೃಪ್ತಿ ನೀಡಲಿಲ್ಲ. ಅವರ ಅಭಿನಯದಲ್ಲಿ ಕೇವಲ ‘ಶಕ್ತಿ’ (power) ಎದ್ದು ಕಾಣುತ್ತಿತ್ತು’ ಎಂದಿದ್ದಾರೆ.

‘ಅವರದ್ದು, ಅದ್ಭುತವಾದ ದೇಹ ಭಾಷೆ (ಬಾಡಿ ಲಾಂಗ್ವೇಜ್), ಆಕ್ಷನ್ ದೃಶ್ಯಗಳು, ಹಾಗೂ ದರ್ಪ, ಇವೆಲ್ಲವೂ ಅತ್ಯುತ್ತಮವಾಗಿದ್ದವು. ಆದರೆ, ‘ರಾವಣ’ನ ಪಾತ್ರಕ್ಕೆ ಇಷ್ಟೇ ಸಾಲದು. ರಾವಣ ಕೇವಲ ಒಬ್ಬ ಖಳನಾಯಕನಾಗಿರಲಿಲ್ಲ, ಆತ ಒಬ್ಬ ವಿದ್ವಾಂಸ, ಬ್ರಾಹ್ಮಣ ಮತ್ತು ಜ್ಞಾನಿಯಾಗಿದ್ದ. ಆತ ಆಳವಾದ ಚಿಂತನೆಯಲ್ಲಿ ಮುಳುಗಿರುವ, ಬಹುತೇಕ ಧ್ಯಾನಸ್ಥ ಸ್ಥಿತಿಯಲ್ಲಿರುವ ವ್ಯಕ್ತಿಯಾಗಿದ್ದ. ಈ ಪಾತ್ರವನ್ನು ಇನ್ನಷ್ಟು ಆಳವಾಗಿ ಕಟ್ಟಿಕೊಡಲು ಅವಕಾಶವಿತ್ತು, ಆದರೆ ಯಶ್ ಅದನ್ನು ಬಳಸಿಕೊಂಡಿಲ್ಲ’ ಎಂದಿದ್ದಾರೆ ತನಿಷಾ.

‘ಶೂರ್ಪಣಖಿಯ ಪತಿಯನ್ನು ಕೊಲ್ಲುವ ದೃಶ್ಯದಲ್ಲಿ, ಸ್ವಲ್ಪ ಮೃದುತ್ವ ಅಥವಾ ಸಹಾನುಭೂತಿಯ ಅಗತ್ಯವಿತ್ತು. ಹಾಗೆ ಮಾಡುವುದರಿಂದ ರಾವಣನ ಪಾತ್ರ ದುರ್ಬಲನಾಗುತ್ತಿರಲಿಲ್ಲ, ಬದಲಾಗಿ ಪಾತ್ರಕ್ಕೆ ಇನ್ನಷ್ಟು ಆಯಾಮಗಳು (layers) ಸಿಗುತ್ತಿದ್ದವು. ರಾವಣ ಕೇವಲ ಕೋಪ ಮತ್ತು ಅಹಂಕಾರದ ಮೂರ್ತಿಯಾಗಿರಬೇಕಿಲ್ಲ. ಆತ ಚಾಣಾಕ್ಷನೂ, ಜ್ಞಾನಿಯೂ ಆಗಿರಬೇಕಿತ್ತು. ಸೀತೆಯ ಬಳಿ ಸಾಧುವಿನ ವೇಷದಲ್ಲಿ ಹೋಗುವ ದೃಶ್ಯದಲ್ಲೂ ಕೇವಲ ಕೋಪವೇ ಎದ್ದು ಕಾಣುತ್ತಿತ್ತು. ಅಲ್ಲಿ ಸೌಮ್ಯತೆ, ಬೇಡಿಕೊಳ್ಳುವಿಕೆ, ಕಿರಿಕಿರಿ ಮತ್ತು ಕೋಪ – ಹೀಗೆ ಭಾವನೆಗಳ ವೈವಿಧ್ಯವಿರಬೇಕಿತ್ತು’ ಎಂದಿದ್ದಾರೆ.

‘ಇದೆಲ್ಲದರ ನಡುವೆಯೂ ರಣಬೀರ್‌ಗೆ ಸರಿಸಮನಾಗಿ ಯಶ್ ನಟಿಸಿದ್ದಾರೆ. ರಾವಣನ ಪಾತ್ರಕ್ಕೆ ಬೇಕಾದ ‘ಶಕ್ತಿ’ಯನ್ನು ತೆರೆಯ ಮೇಲೆ ತರುವಲ್ಲಿ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಒಂದು ಬೃಹತ್ ಸಾಧನೆ. ಹಾಗಾಗಿ, ಅವರ ಅಭಿನಯವನ್ನು ನಾನು ಹೆಚ್ಚು ಟೀಕಿಸಲಾರೆ’ ಎಂದು ತನಿಷಾ ಹೇಳಿದ್ದಾರೆ.

ತನಿಷಾ ಮುಖರ್ಜಿ, ಬಾಲಿವುಡ್​​ನ ಸ್ಟಾರ್ ನಟಿ ಕಾಜಲ್ ಅವರ ಸಹೋದರಿ ಖುದ್ದು ನಟಿಯೂ ಸಹ. ಕೆಲವು ಬಾಲಿವುಡ್ ಸಿನಿಮಾಗಳ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಜೂ ಎನ್​​ಟಿಆರ್ ಜೊತೆಗೆ ‘ಕಂತ್ರಿ’ ಸಿನಿಮಾನಲ್ಲಿ ತನಿಷಾ ನಟನೆ ಮಾಡಿದ್ದಾರೆ. ಅವರ ನಟನೆಯ ಮರಾಠಿ ಸಿನಿಮಾ ಒಂದು ಇತ್ತೀಚೆಗಷ್ಟೆ ರಿಲೀಸ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Wed, 25 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'