AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿರಾಜ್ ಆಡಿದ್ದರೆ ಭಾರತ ಗೆಲ್ಲುತ್ತಿತ್ತಾ?’; ರಾಜಕೀಯ ಬೇಡ ಎಂದ ರಾಜೀವ್ ಶುಕ್ಲಾ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೆ ಪ್ಲೇಯಿಂಗ್ 11ರಲ್ಲಿ ಅವಕಾಶ ನೀಡದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾರತ ಪಂದ್ಯ ಡ್ರಾ ಮಾಡಿಕೊಂಡ ಬಳಿಕ ಅಭಿಮಾನಿಗಳ ಅಸಮಾಧಾನ ಹೆಚ್ಚಿದೆ. ಈ ವಿವಾದಕ್ಕೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದು, ಸಿರಾಜ್ ಆಯ್ಕೆ ನಾಯಕ-ಕೋಚ್ ನಿರ್ಧಾರ. ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಿರಾಜ್ ಆಡಿದ್ದರೆ ಭಾರತ ಗೆಲ್ಲುತ್ತಿತ್ತಾ?’; ರಾಜಕೀಯ ಬೇಡ ಎಂದ ರಾಜೀವ್ ಶುಕ್ಲಾ
ರಾಜೀವ್ ಶುಕ್ಲಾ, ಮೊಹಮ್ಮದ್ ಸಿರಾಜ್
ಪೃಥ್ವಿಶಂಕರ
|

Updated on: Nov 25, 2026 | 6:36 PM

Share

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವ ವಿಚಾರ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಸಿರಾಜ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ಕೈಬಿಟ್ಟಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ವೆಲ್ಲಿಂಗ್ಟನ್ ಟೆಸ್ಟ್‌ನ ಕೊನೆಯ ದಿನ ಭಾರತೀಯ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದ ಬಳಿಕ ಸಿರಾಜ್ ಅವರನ್ನು ಆಡಿಸಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಇದೀಗ ಈ ವಿವಾದಕ್ಕೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ಸಿರಾಜ್ ತಂಡದಲ್ಲಿ ಆಡದ ಕಾರಣಕ್ಕಾಗಿಯೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ ಎಂದು ಹೇಳುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿರಾಜ್‌ಗೆ ಅವಕಾಶ ನೀಡದಿದ್ದಕ್ಕೆ ಆಕ್ರೋಶ

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಪಂದ್ಯದ ಕೊನೆಯ ದಿನ ಭಾರತ ತಂಡಕ್ಕೆ ನ್ಯೂಜಿಲೆಂಡ್‌ನ ಉಳಿದ ಎಂಟು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಕೊನೆಯ ಒಂದು ಗಂಟೆ ಬಾಕಿ ಇರುವಾಗ ನಾಯಕ ಶುಭಮನ್ ಗಿಲ್ ಡ್ರಾಗೆ ಒಪ್ಪಿಕೊಂಡಿದ್ದರು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟಿರುವ ಬಗ್ಗೆ ಚರ್ಚೆ ಶುರುವಾಗಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿ ಐದೂ ಟೆಸ್ಟ್ ಪಂದ್ಯಗಳನ್ನಾಡಿದ್ದ ಸಿರಾಜ್ ತಮ್ಮ ವೇಗ ಮತ್ತು ಸ್ಥಿರ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.

ಗಂಟೆಗೆ 140 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಸಿರಾಜ್‌ಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಕೊನೆಯ ದಿನ ಭಾರತ ವಿಕೆಟ್ ಪಡೆಯಲು ವಿಫಲವಾದಾಗ ಈ ಚರ್ಚೆ ಮತ್ತಷ್ಟು ಜೋರಾಯಿತು.

ಸಿರಾಜ್ ಹೆಸರಿನಲ್ಲಿ ಅನಗತ್ಯ ವಿವಾದ ಬೇಡ

ಸಿರಾಜ್‌ಗೆ ಅವಕಾಶ ನೀಡದಿರುವ ವಿಚಾರವಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಿರಾಜ್ ಆಡದ ಕಾರಣಕ್ಕೆ ಪಂದ್ಯ ಡ್ರಾ ಆಯಿತು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ, ಸಿರಾಜ್ ಅವರನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಬಾರದು ಎಂದು ಮನವಿ ಮಾಡಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾಗುವುದೇ ಆಟಗಾರನ ಪ್ರತಿಭೆಗೆ ಸಿಕ್ಕ ಮನ್ನಣೆ. ಆದರೆ ಅಂತಿಮ ಹನ್ನೊಂದರ ಬಳಗದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ನಾಯಕ ಮತ್ತು ಕೋಚ್‌ಗೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ಲೇಯಿಂಗ್ ನಿರ್ಧರಿಸುವುದು ನಾಯಕ ಮತ್ತು ಕೋಚ್

ತಂಡದ ಅಂತಿಮ ಆಯ್ಕೆಯ ಹಿಂದೆ ಹಲವು ಅಂಶಗಳು ಕೆಲಸ ಮಾಡುತ್ತವೆ ಎಂದು ರಾಜೀವ್ ಶುಕ್ಲಾ ವಿವರಿಸಿದ್ದಾರೆ. ಪಿಚ್‌ನ ಸ್ವರೂಪ, ತಂಡದ ಅಗತ್ಯತೆ ಹಾಗೂ ಪಂದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾಯಕ ಮತ್ತು ಕೋಚ್ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಒಬ್ಬ ಆಟಗಾರನಿಗೆ ಅಂತಿಮ ತಂಡದಲ್ಲಿ ಅವಕಾಶ ಸಿಗದಿರುವುದಕ್ಕೆ ಬೇರೆ ಬಣ್ಣ ನೀಡುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ. ಇಂತಹ ಹೇಳಿಕೆಗಳು ಆಟಗಾರನನ್ನೇ ಮುಜುಗರಕ್ಕೀಡು ಮಾಡಬಹುದು. ಆದ್ದರಿಂದ ತಂಡದ ಆಯ್ಕೆ ವಿಚಾರದಲ್ಲಿ ಕೋಚ್ ಮತ್ತು ನಾಯಕನ ನಿರ್ಧಾರವನ್ನು ಗೌರವಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸಿರಾಜ್‌ರನ್ನು ಕೈಬಿಟ್ಟಿದ್ದೇಕೆ? ಟೀಂ ಇಂಡಿಯಾ ಆಯ್ಕೆಗೆ ಕೋಚ್ ಸಮರ್ಥನೆ

ಮುಂದಿನ ಟೆಸ್ಟ್‌ನಲ್ಲಿ ಸಿರಾಜ್‌ಗೆ ಅವಕಾಶ ಸಿಗುತ್ತಾ?

ಇದೀಗ ಅಭಿಮಾನಿಗಳ ಕಣ್ಣು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂದಿನ ಟೆಸ್ಟ್ ಪಂದ್ಯದ ಮೇಲಿದೆ. ಮೊದಲ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಸಿರಾಜ್‌ಗೆ ಎರಡನೇ ಟೆಸ್ಟ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಿರಾಜ್ ಅವರನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಸಬೇಕು ಎಂಬ ಒತ್ತಾಯ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಆದರೆ ತಂಡದ ಸಂಯೋಜನೆ, ಪಿಚ್ ಪರಿಸ್ಥಿತಿ ಹಾಗೂ ಪಂದ್ಯದ ಅಗತ್ಯಕ್ಕೆ ತಕ್ಕಂತೆ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಿರಾಜ್ ಆಯ್ಕೆ ವಿವಾದಕ್ಕೆ ರಾಜೀವ್ ಶುಕ್ಲಾ ನೀಡಿರುವ ಪ್ರತಿಕ್ರಿಯೆ ಇದೀಗ ಕ್ರಿಕೆಟ್ ವಲಯದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ