ಮತ್ತೊಬ್ಬ ಹಿಟ್ ನಿರ್ದೇಶಕನ ಜೊತೆ ಕೈಜೋಡಿಸಿದ ಸೂರ್ಯ, ಮತ್ತೊಂದು ಹಿಟ್ ಗ್ಯಾರಂಟಿ?
ಸೂರ್ಯ ನಟನೆಯ ‘ಸೀನ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿದೆ. ‘ಸೀನ್’ ಸಿನಿಮಾ ಮೂಲಕ ಮೂರನೇ ಹಿಟ್ ಸಿನಿಮಾ ಅನ್ನು ಸೂರ್ಯ ನೀಡಿದಂತಾಗಿದೆ. ಆ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವಾಗಲೇ ಸೂರ್ಯ ಅವರು ಎರಡು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಸೂರ್ಯ ನಟಿಸಲಿರುವ 49ನೇ ಸಿನಿಮಾ ಅನ್ನು ಮತಿಮಾರನ್ ನಿರ್ದೇಶನ ಮಾಡಲಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಮಂದಾಡಿ’ ಸಿನಿಮಾವನ್ನು ನಿರ್ದೇಶಿಸಿದ್ದು ಇದೇ ಮತಿಮಾರನ್.

ಮುಖ್ಯಾಂಶಗಳು
- ಹಿಟ್ ನಿರ್ದೇಶಕನ ಜೊತೆ ಕೈಜೋಡಿಸಿದ ಸೂರ್ಯ
- ಈಗಾಗಲೇ ಮೂರು ಹಿಟ್ ನೀಡಿರುವ ನಟ ಸೂರ್ಯ
- ಸೂರ್ಯ ಇದೀಗ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ
ತಮಿಳಿನ ನಟ ಸೂರ್ಯ ಪಾಲಿಗೆ 2026 ಅವರ ವೃತ್ತಿ ಜೀವನದ ಅತ್ಯುತ್ತಮ ವರ್ಷವಾಗಿ ಮಾರ್ಪಟ್ಟಿದೆ. ಈ ವರ್ಷ ಅವರ ನಟನೆಯ ಮೂರು ಸಿನಿಮಾಗಳು ಈವರೆಗೆ ರಿಲೀಸ್ ಆಗಿದ್ದು ಮೂರೂ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಇದೀಗ ಒಟ್ಟಿಗೆ ಎರಡು ಸಿನಿಮಾಗಳನ್ನು ಸೂರ್ಯ ಒಪ್ಪಿಕೊಂಡಿದ್ದು, ಎರಡೂ ಸಿನಿಮಾಗಳು ಸಹ ಹಿಟ್ ಆಗುವ ನಿರೀಕ್ಷೆ ಸೂರ್ಯ ಅಭಿಮಾನಿಗಳದ್ದು. ಆ ಭರವಸೆಗೆ ಕಾರಣ, ಸೂರ್ಯ ಕೈಜೋಡಿಸಿರುವ ನಿರ್ದೇಶಕರು. ಇಬ್ಬರು ಸೂಪರ್ ಹಿಟ್ ನಿರ್ದೇಶಕರ ಜೊತೆಗೆ ಸೂರ್ಯ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ್ದಾರೆ.
ಸೂರ್ಯ ನಟನೆಯ ‘ಸೀನ್’ ಸಿನಿಮಾ ಕೆಲ ವಾರಗಳ ಹಿಂದಷ್ಟೇ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿದೆ. ‘ಸೀನ್’ ಸಿನಿಮಾ ಮೂಲಕ ಮೂರನೇ ಹಿಟ್ ಸಿನಿಮಾವನ್ನು ಸೂರ್ಯ ನೀಡಿದಂತಾಗಿದೆ. ಆ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವಾಗಲೇ ಸೂರ್ಯ ಅವರು ಎರಡು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಸೂರ್ಯ ನಟಿಸಲಿರುವ 49ನೇ ಸಿನಿಮಾವನ್ನು ಮತಿಮಾರನ್ ನಿರ್ದೇಶನ ಮಾಡಲಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಮಂಡಾಡಿ’ ಸಿನಿಮಾವನ್ನು ನಿರ್ದೇಶಿಸಿದ್ದು ಇದೇ ಮತಿಮಾರನ್.
ಅದರ ಜೊತೆಗೆ ಸೂರ್ಯ ಅವರು ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾ ‘ಡಿಸಿ’ ನಿರ್ದೇಶಿಸಿದ್ದ ಅರುಣ್ ಮಾಥೇಶ್ವರನ್, ಸೂರ್ಯ ನಟನೆಯ 50ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಲಿದ್ದು, ಭಯಂಕರ ವೈಲೆನ್ಸ್ ಈ ಸಿನಿಮಾದಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಸೀನ್’ ಸಿನಿಮಾ ಯಶಸ್ಸು: ಸಹನಟನಿಗೆ 9 ಲಕ್ಷ ರೂ. ಮೌಲ್ಯದ ವಾಚ್ ನೀಡಿದ ಸೂರ್ಯ
ಅರುಣ್ ಮಾಥೇಶ್ವರನ್ ಅವರ ಈ ಹಿಂದಿನ ಸಿನಿಮಾ ‘ಡಿಸಿ’ಗೆ ಬಂಡವಾಳ ಹೂಡಿದ್ದ ಸನ್ ಪಿಕ್ಚರ್ಸ್ನವರೇ ಅವರ ಹೊಸ ಸಿನಿಮಾಕ್ಕೂ ಬಂಡವಾಳ ಹೂಡಲಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ‘ಬ್ಲಡ್ ಅಂಡ್ ಫೀಸ್ಟ್’ ಜಾನರ್ಗೆ ಸೇರಿದ ಸಿನಿಮಾ ಇದಾಗಲಿದ್ದು, ಸೂರ್ಯ ಅವರು ಹಿಂದೆಂದೂ ಕಾಣದ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಸೂರ್ಯ ಅವರು ‘ವಿಕ್ರಂ’ ಸಿನಿಮಾದ ಅತಿಥಿ ಪಾತ್ರವಾದ ರೋಲೆಕ್ಸ್ ರೀತಿಯ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




