AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆದರ್ಶ ಕುಟುಂಬಂ’ ಚಿತ್ರತಂಡದ ಮೇಲೆ ನಟಿ ಪೂಜಾ ಆರೋಪ

‘ಆದರ್ಶ ಕುಟುಂಬಂ’ ಸಿನಿಮಾದ ಬಿಡುಗಡೆ ಸಮಯದಲ್ಲಿ ಕೆಲವು ಗೊಂದಲಗಳು ಉಂಟಾದವು. ಮೊದಲಿಗೆ ಸಿನಿಮಾ ಘೋಷಣೆ ಆಗಿದ್ದ ದಿನಾಂಕಕ್ಕೆ ಬಿಡುಗಡೆ ಆಗಲಿಲ್ಲ. ಸಿನಿಮಾ ಬಿಡುಗಡೆಯನ್ನು ಮುಂದೂಡಲಾಯ್ತು. ಸಂಗೀತ ನಿರ್ದೇಶಕರ ಸಮಸ್ಯೆ ಉಂಟಾಯ್ತು. ಸಿನಿಮಾ ರಿಲೀಸ್ ಆದ ಬಳಿಕವೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಇದೀಗ ನಟಿಯೊಬ್ಬರು ಸಿನಿಮಾ ತಂಡದ ವಿರುದ್ಧ ಆರೋಪ ಮಾಡಿದ್ದಾರೆ.

‘ಆದರ್ಶ ಕುಟುಂಬಂ’ ಚಿತ್ರತಂಡದ ಮೇಲೆ ನಟಿ ಪೂಜಾ ಆರೋಪ
Adarsh Kutumbam Poojita
ಮಂಜುನಾಥ ಸಿ.
|

Updated on: Nov 25, 2026 | 4:00 PM

Share

ಇತ್ತೀಚೆಗಷ್ಟೇ ಬಿಡುಗಡೆ ಆದ ತೆಲುಗು ಸಿನಿಮಾ ‘ಆದರ್ಶ ಕುಟುಂಬಂ’, ರಿಲೀಸ್​​ಗೆ ಮೊದಲು ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ವೆಂಕಟೇಶ್ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಕನ್ನಡದ ಹುಡುಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟನೆ ಮಾಡಿದ್ದರು. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಸಿನಿಮಾದ ಬಿಡುಗಡೆ ಸಮಯದಲ್ಲಿ ಕೆಲವು ಗೊಂದಲಗಳು ಉಂಟಾದವು. ಮೊದಲಿಗೆ ಸಿನಿಮಾ ಘೋಷಣೆ ಆಗಿದ್ದ ದಿನಾಂಕಕ್ಕೆ ಬಿಡುಗಡೆ ಆಗಲಿಲ್ಲ. ಸಿನಿಮಾ ಬಿಡುಗಡೆಯನ್ನು ಮುಂದೂಡಲಾಯ್ತು. ಸಂಗೀತ ನಿರ್ದೇಶಕರ ಸಮಸ್ಯೆ ಉಂಟಾಯ್ತು. ಸಿನಿಮಾ ರಿಲೀಸ್ ಆದ ಬಳಿಕವೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಇದೀಗ ನಟಿಯೊಬ್ಬರು ಸಿನಿಮಾ ತಂಡದ ವಿರುದ್ಧ ಆರೋಪ ಮಾಡಿದ್ದಾರೆ.

ನಟಿ ಪೂಜಿತಾ ಪೊನ್ನಾಡ ‘ಆದರ್ಶ ಕುಟುಂಬಂ’ ಚಿತ್ರತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೂಜಿತಾ ಅವರ ಪ್ರಕಾರ, ‘ಆದರ್ಶ ಕುಟುಂಬಂ’ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರಕ್ಕಾಗಿ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಲುಕ್ ಟೆಸ್ಟ್ ಹಾಗೂ ಫೋಟೋಶೂಟ್‌ಗಳ ನಂತರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೇ ವೈಯಕ್ತಿಕವಾಗಿ ಅವರನ್ನು ಆಯ್ಕೆ ಮಾಡಿದ್ದರು. ಚಿತ್ರದುದ್ದಕ್ಕೂ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತದೆ ಮತ್ತು ಪ್ರಮುಖ ನಟ ನಾರಾ ರೋಹಿತ್ ಜೊತೆಗೆ ಪ್ರಮುಖ ದೃಶ್ಯಗಳೂ ಇರುತ್ತವೆ ಎಂದು ಅವರಿಗೆ ತಿಳಿಸಲಾಗಿತ್ತು.

ಇದನ್ನೂ ಓದಿ:ಮುಂದಕ್ಕೆ ಹೋಯ್ತು ‘ಎಕೆ 47’ ಸಿನಿಮಾ ರಿಲೀಸ್, ಕ್ಷಮೆ ಕೇಳಿದ ನಿರ್ಮಾಪಕ

ಇದೇ ಕಾರಣಕ್ಕೆ ನಟಿ ಪೂಜಿತಾ ಪೊನ್ನಾಡ ಒಪ್ಪಂದಕ್ಕೆ ಸಹಿ ಹಾಕಿ, ಮುಂಗಡ ಹಣ ಪಡೆದಿದ್ದರು. ಜೊತೆಗೆ ಐದು ದಿನಗಳ ಕಾಲ ಚಿತ್ರೀಕರಣದಲ್ಲಿ ಸಹ ಭಾಗವಹಿಸಿದ್ದರು. ಐದು ದಿನಗಳ ಚಿತ್ರೀಕರಣ ಬಳಿಕ ಸುಮಾರು ಮೂರು ತಿಂಗಳ ಕಾಲ ಚಿತ್ರತಂಡದವರು ಪೂಜಿತಾ ಅವರನ್ನು ಸಂಪರ್ಕ ಮಾಡಲೇ ಇಲ್ಲವಂತೆ. ನಂತರ ಅವರಿಗೆ ಯಾವುದೇ ಮಾಹಿತಿ, ಮುನ್ಸೂಚನೆ ನೀಡದೆ ತಮ್ಮ ಪಾತ್ರಕ್ಕೆ ಹಿರಿಯ ನಟಿಯೊಬ್ಬರನ್ನು ತರಲಾಗಿದೆ ಎಂಬುದು ಅವರಿಗೆ ಬೇರೆ ಮೂಲಗಳಿಂದ ಗೊತ್ತಾಯ್ತಂತೆ.

ನಟಿ ಪೂಜಿತಾ ಅವರ ಬದಲಿಗೆ ಬೇರೆ ನಟಿಯನ್ನು ಹಾಕಿಕೊಂಡರೂ ಸಹ ಚಿತ್ರತಂಡವು ಪೂಜಿತಾ ನಟಿಸಿದ್ದ ಒಂದು ದೃಶ್ಯವನ್ನು ಸಿನಿಮಾದಲ್ಲಿ ಇರಿಸಿಕೊಂಡಿದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಆದ ಸಿನಿಮಾದಲ್ಲಿ ಅವರ ನಟನೆಯ ಒಂದು ದೃಶ್ಯ ಇದೆಯಂತೆ. ಆದರೆ ಒಂದು ದೃಶ್ಯ ಉಳಿಸಿಕೊಂಡರೂ ಸಹ ಪೂಜಿತಾ ಅವರ ಹೆಸರನ್ನು ಟೈಟಲ್ ಕಾರ್ಡ್​​ನಿಂದ ಕೈಬಿಡಲಾಗಿದೆಯಂತೆ. ಇದು ತಮಗೆ ಬಹಳ ನೋವುಂಟು ಮಾಡಿದೆ. ಚಿತ್ರೀಕರಣದ ಸಮಯದಲ್ಲಿ ನಟ-ನಟಿಯರನ್ನು ಬದಲಾಯಿಸುವುದು ಚಿತ್ರರಂಗದಲ್ಲಿ ಹೊಸದೇನಲ್ಲ. ಆದರೆ ಒಪ್ಪಂದಕ್ಕೆ ಸಹಿ ಹಾಕಿ, ಚಿತ್ರೀಕರಣದಲ್ಲೂ ಭಾಗವಹಿಸಿದ ನಂತರ, ಒಬ್ಬ ನಟಿ ಕನಿಷ್ಠ ನಿರೀಕ್ಷಿಸುವುದು ನಿರ್ಮಾಪಕರಿಂದ ಸರಿಯಾದ ಸಂವಹನವನ್ನು. ಈ ಇಡೀ ಘಟನೆಯಿಂದ ತಮಗೆ ಮೋಸವಾದಂತೆ ಅನಿಸಿದೆ ಎಂದು ನಟಿ ಪೂಜಿತಾ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ