AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಿಟಿಎ 6’ ಗೇಮ್ ಆಡಿದ ಪೂಜಾ ಹೆಗ್ಡೆ, ನೆಟ್ಟಿಗರು ಹೇಳಿದ್ದೇನು?

ಭಾರಿ ಮೊತ್ತದ ಹಣ ನೀಡಿ, 200 ಜಿಬಿಗೂ ಹೆಚ್ಚು ಡಾಟಾ ಖರ್ಚು ಮಾಡಿ, ರಾತ್ರಿಯೆಲ್ಲ ನಿದ್ದೆಗೆಟ್ಟು ಜಿಟಿಎ 6 ಆಡಿದ್ದಾರೆ, ಆಡುತ್ತಿದ್ದಾರೆ. ಗೇಮರ್​​ಗಳು, ಗೇಮ್ ಪ್ರಿಯರು ಮಾತ್ರವಲ್ಲ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟರುಗಳು ಸಹ ಗೇಮ್ ಆಡುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಪೂಜಾ ಹೆಗ್ಡೆ, ತಾವು ಜಿಟಿಎ 6 ಆಡಿದ್ದಾಗಿ, ಅದರ ಸ್ಕ್ರೀನ್ ಶಾಟ್ ಒಂದನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೊಕ್ಕೆ ನಾನಾ ರೀತಿಯ ಕಮೆಂಟುಗಳು ಬಂದಿದ್ದವು.

‘ಜಿಟಿಎ 6’ ಗೇಮ್ ಆಡಿದ ಪೂಜಾ ಹೆಗ್ಡೆ, ನೆಟ್ಟಿಗರು ಹೇಳಿದ್ದೇನು?
Pooja Hegde
ಮಂಜುನಾಥ ಸಿ.
|

Updated on: Nov 25, 2026 | 12:55 PM

Share

ಜಿಟಿಎ 6 ವಿಶ್ವದಾದ್ಯಂತ ಹವಾ ಎಬ್ಬಿಸಿದೆ. ಕೋಟ್ಯಂತರ ಮಂದಿ ಹಣ ನೀಡಿ ಜಿಟಿಎ 6 ಗೇಮ್ ಆಡುತ್ತಿದ್ದಾರೆ. ಭಾರತದಲ್ಲೂ ಈ ಗೇಮಿನ ಹವಾ ಬಲು ಜೋರಾಗಿದೆ. ಭಾರಿ ಮೊತ್ತದ ಹಣ ನೀಡಿ, 200 ಜಿಬಿಗೂ ಹೆಚ್ಚು ಡಾಟಾ ಖರ್ಚು ಮಾಡಿ, ರಾತ್ರಿಯೆಲ್ಲ ನಿದ್ದೆಗೆಟ್ಟು ಜಿಟಿಎ 6 ಆಡಿದ್ದಾರೆ, ಆಡುತ್ತಿದ್ದಾರೆ. ಗೇಮರ್​​ಗಳು, ಗೇಮ್ ಪ್ರಿಯರು ಮಾತ್ರವಲ್ಲ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟರುಗಳು ಸಹ ಗೇಮ್ ಆಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಪೂಜಾ ಹೆಗ್ಡೆ, ತಾವು ಜಿಟಿಎ 6 ಆಡಿದ್ದಾಗಿ, ಅದರ ಸ್ಕ್ರೀನ್ ಶಾಟ್ ಒಂದನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೊಕ್ಕೆ ನಾನಾ ರೀತಿಯ ಕಮೆಂಟುಗಳು ಬಂದಿದ್ದವು.

ಪೂಜಾ ಹೆಗ್ಡೆ, ಜಿಟಿಎ 6 ಪಾತ್ರದ ಸ್ಕ್ರೀನ್ ಶಾಟ್ ಹಂಚಿಕೊಂಡು, ‘ರೀಲ್ ಪ್ರಪಂಚದಲ್ಲಿ ಕಾಫಿ ಮಾಡಿದೆ’ ಎಂದು ಬರೆದುಕೊಂಡಿದ್ದರು. ಗೇಮ್​​ನಲ್ಲಿ ಅವರು ಗೇಮಿನ ಮುಖ್ಯ ಪಾತ್ರಧಾರಿ ಜೇಸನ್‌ನಿಂದ ಕಾಫಿ ಮಾಡಿಸಿದ್ದರು. ಗೇಮಿನಲ್ಲಿ ಪಾತ್ರಧಾರಿ ಜೇಸನ್​​ ಕೈಯಿಂದ ದಿನನಿತ್ಯದ ಕೆಲಸಗಳನ್ನು ಮಾಡಿಸಬಹುದು. ಫೈಟಿಂಗ್ ಮಾಡಿಸಬಹುದು, ಕಾರು ಓಡಿಸಬಹುದು ಇನ್ನೂ ಹಲವು ಕೆಲಸಗಳನ್ನು ಮಾಡಿಸಬಹುದು. ಇದೇ ಕಾರಣಕ್ಕೆ ಈ ಗೇಮ್ ಬಹಳ ಜನಪ್ರಿಯ. ಪೂಜಾ ಹೆಗ್ಡೆ ಸಹ ಅದನ್ನೇ ಮಾಡಿದ್ದರು.

ಆದರೆ ನೆಟ್ಟಿಗರು ಈ ಬಗ್ಗೆ ನಾನಾ ರೀತಿಯ ಕಮೆಂಟುಗಳನ್ನು ಮಾಡಿದ್ದರು. ಕೆಲವರಂತೂ, ನಟಿ ಸುಮ್ಮನೆ ‘ಫ್ಲೆಕ್ಸ್’ ಮಾಡಲು ಚಿತ್ರ ಹಂಚಿಕೊಂಡಿದ್ದಾರೆ, ಈಕೆ ನಿಜವಾದ ‘ಗೇಮರ್’ ಅಲ್ಲ ಎಂದೆಲ್ಲ ಏನೇನೋ ಕಮೆಂಟುಗಳನ್ನು ಮಾಡಿದ್ದರು. ಇನ್ನು ಕೆಲವರು ಪೂಜಾ ಹೆಗ್ಡೆ ಪರವಾಗಿಯೂ ಕಮೆಂಟ್ ಮಾಡಿ, ಜಿಟಿಎ 6 ಆಡಬೇಕು ಎಂದರೆ ಗೇಮರ್ ಆಗಿರಲೇಬೇಕು ಎಂದೇನಿಲ್ಲ. ಯಾರು ಬೇಕಾದರೂ ಅದನ್ನು ಆಡಬಹುದು. ಅಜ್ಜಿಯೂ ಸಹ ಆಡುವಂತಹ ಸರಳವಾದ ಆಟ ಅದು. ಕೇವಲ ಪುರುಷರೇ ಗೇಮಿಂಗ್ ಮಾಡಬೇಕು ಎಂದೇನೂ ಇಲ್ಲ ಎಂದೆಲ್ಲ ಕಮೆಂಟ್ ಮಾಡಿದ್ದರು. ಒಟ್ಟಾರೆ ಪೂಜಾ ಹೆಗ್ಡೆಯ ಗೇಮಿಂಗ್ ಸ್ಕ್ರೀನ್​​ಶಾಟ್ ಲಿಂಗ ತಾರತಮ್ಯದ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು.

ಇದನ್ನೂ ಓದಿ:ಜಿಟಿಎ 6 ಕಮಾಲ್, ಒಂದೇ ದಿನಕ್ಕೆ ಹಾಲಿವುಡ್​​ನ ಎಲ್ಲ ದಾಖಲೆಗಳು ಉಡೀಸ್

ಪೂಜಾ ಹೆಗ್ಡೆ ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ಆಗಿದ್ದು, ಪ್ರಸ್ತುತ ಅವರು ದುಲ್ಕರ್ ಸಲ್ಮಾನ್ ನಟನೆಯ ತೆಲುಗು ಸಿನಿಮಾ ‘ಶ್ರೀ ಶ್ರೀ’ ಮತ್ತು ತಮಿಳಿನಲ್ಲಿ ‘ಕಾಂಚನಾ 4’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿಯ ಒಂದು ಹೊಸ ಸಿನಿಮಾ ಹಾಗೂ ತೆಲುಗಿನಲ್ಲೂ ಹೆಸರಿಡದ ಒಂದು ಹೊಸ ಸಿನಿಮಾದಲ್ಲಿ ಪೂಜಾ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ