AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲಾಪ್ ಹೀರೋ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಪ್ರಭುದೇವ

ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಕೆಲವು ಸೂಪರ್ ಹಿಟ್ ಕಲ್ಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮಾತ್ರವಲ್ಲದೆ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶನವನ್ನೂ ಸಹ ಮಾಡಿದ್ದಾರೆ. ‘ನುವ್ವಸ್ತಾನಂಟೆ ನೆನೊದ್ದಂಟಾನ’, ‘ಪೌರ್ಣಮಿ’ ಇನ್ನೂ ಹಲವಾರು ಸಿನಿಮಾಗಳನ್ನು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಿರ್ದೇಶಿಸಿದ್ದಾರೆ. ಆದರೆ 2021ರ ಬಳಿಕ ಯಾವುದೇ ಹೊಸ ಸಿನಿಮಾ ಅವರು ನಿರ್ದೇಶಿಸಿರಲಿಲ್ಲ. ಆದರೆ ಇದೀಗ ಹೊಸ ಸಿನಿಮಾ ಘೋಷಿಸಿದ್ದು, ಫ್ಲಾಪ್ ಹೀರೋ ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದಾರೆ.

ಫ್ಲಾಪ್ ಹೀರೋ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಪ್ರಭುದೇವ
Manchu Vishnu
ಮಂಜುನಾಥ ಸಿ.
|

Updated on: Nov 25, 2026 | 11:06 AM

Share

ಮುಖ್ಯಾಂಶಗಳು

  • ಹೊಸ ಸಿನಿಮಾ ಘೋಷಿಸಿದ ಪ್ರಭುದೇವ
  • ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರಭುದೇವ
  • ಫ್ಲಾಪ್ ಹೀರೋಗೆ ಹಿಟ್ ಕೊಡ್ತಾರಾ ಪ್ರಭು

ಪ್ರಭುದೇವ, ಭಾರತದ ಅದ್ಭುತ ಡ್ಯಾನ್ಸರ್, ಅವರನ್ನು ‘ಇಂಡಿಯನ್ ಮೈಕಲ್ ಜಾಕ್ಸನ್’ ಎಂದೇ ಕರೆಯಲಾಗುತ್ತದೆ. ಜೊತೆಗೆ ಅವರು ಯಶಸ್ವಿ ನಟರೂ ಹೌದು. ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಕೆಲವು ಸೂಪರ್ ಹಿಟ್ ಕಲ್ಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮಾತ್ರವಲ್ಲದೆ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶನವನ್ನೂ ಸಹ ಮಾಡಿದ್ದಾರೆ. ‘ನುವ್ವಸ್ತಾನಂಟೆ ನೆನೊದ್ದಂಟಾನ’, ‘ಪೌರ್ಣಮಿ’ ಇನ್ನೂ ಹಲವಾರು ಸಿನಿಮಾಗಳನ್ನು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಿರ್ದೇಶಿಸಿದ್ದಾರೆ. ಆದರೆ 2021ರ ಬಳಿಕ ಯಾವುದೇ ಹೊಸ ಸಿನಿಮಾ ಅವರು ನಿರ್ದೇಶಿಸಿರಲಿಲ್ಲ. ಆದರೆ ಇದೀಗ ಹೊಸ ಸಿನಿಮಾ ಘೋಷಿಸಿದ್ದು, ಫ್ಲಾಪ್ ಹೀರೋ ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದಾರೆ.

ತೆಲುಗಿನಲ್ಲಿ ಫ್ಲಾಪ್ ಹೀರೋ ಎಂದೇ ಎನಿಸಿಕೊಂಡಿರುವ ಮಂಚು ವಿಷ್ಣು ಅವರ ಜೊತೆಗೆ ಪ್ರಭುದೇವ ಅವರು ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಮಂಚು ವಿಷ್ಣು, ತೆಲುಗು ಚಿತ್ರರಂಗದಲ್ಲಿ ಸಖತ್ ಟ್ರೋಲ್ ಆಗುವ ನಾಯಕ ನಟ. ಅವರು ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಫ್ಲಾಫ್ ಆಗುತ್ತಲೇ ಬಂದಿವೆ. ಈ ಹಿಂದೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​​ಲಾಲ್ ಅವರುಗಳನ್ನು ಅತಿಥಿ ಪಾತ್ರಗಳಲ್ಲಿ ಹಾಕಿಕೊಂಡು ‘ಕಣ್ಣಪ್ಪ’ ಸಿನಿಮಾ ಮಾಡಿದರು. ಆ ಸಿನಿಮಾ ದಾರುಣವಾಗಿ ಫ್ಲಾಫ್ ಆಯ್ತು. ಅದಕ್ಕೂ ಮುಂಚಿನ ಕೆಲ ಸಿನಿಮಾಗಳು ಸಹ ಬಾಕ್ಸ್ ಆಫೀಸ್​​ನಲ್ಲಿ ನಿಂತಿರಲಿಲ್ಲ. ಇದೀಗ ಪ್ರಭುದೇವ ಅವರು ಮಂಚು ವಿಷ್ಣು ಜೊತೆಗೆ ಸಿನಿಮಾ ಘೋಷಿಸಿದ್ದಾರೆ.

ಮಂಚು ವಿಷ್ಣು ಅವರ 24ನೇ ಸಿನಿಮಾ ಇದಾಗಿದ್ದು, ಸಿನಿಮಾ ಅನ್ನು ಪ್ರಭುದೇವ ನಿರ್ದೇಶನ ಮಾಡುವ ಜೊತೆಗೆ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಲಿದ್ದಾರೆ. ಸಹಜವಾಗಿಯೇ ಮಂಚು ವಿಷ್ಣು ಅವರ ತಂದೆ ಮೋಹನ್ ಬಾಬು ಅವರೇ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಬಗ್ಗೆ ಪೋಸ್ಟ್ ಒಂದನ್ನು ಮಾತ್ರವೇ ಹಂಚಿಕೊಳ್ಳಲಾಗಿದೆ. ಸಿನಿಮಾದ ಬಗ್ಗೆ ಇತರೆ ಮಾಹಿತಿಗಳು ಇನ್ನಷ್ಟೇ ಬಹಿರಂಗ ಆಗಬೇಕಿದೆ.

ಇದನ್ನೂ ಓದಿ:ಪ್ರಭುದೇವ ಭರತನಾಟ್ಯ ಮಾಡಿರುವ ಶೈಲಿ ನೋಡಿ: ವಿಡಿಯೋ

ಮಂಚು ವಿಷ್ಣು ಅವರ ತಂದೆ ಮೋಹನ್​​ಬಾಬು ಹಾಗೂ ಪ್ರಭುದೇವ ಬಲು ಆಪ್ತರು. ಮಗನನ್ನು ಹೇಗಾದರೂ ಹಿಟ್ ಮಾಡಿಸಬೇಕು ಎಂಬ ಪ್ರಯತ್ನದಲ್ಲಿ ಮೋಹನ್​​ಬಾಬು ಇದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್ ಇನ್ನೂ ಕೆಲವರನ್ನು ಕರೆತಂದಿದ್ದರು. ಈ ಬಾರಿ ಗೆಳೆಯ ಹಾಗೂ ಒಳ್ಳೆಯ ನಿರ್ದೇಶಕರೂ ಆಗಿರುವ ಪ್ರಭುದೇವ ಅವರಿಂದಲೇ ಸಿನಿಮಾ ನಿರ್ದೇಶನ ಮಾಡಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ