AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಸಿನಿಮಾ ನೋಡಿ ಭಾವುಕಳಾದೆ’; ಶ್ರುತಿ ಹಾಸನ್ ಮೆಚ್ಚಿದ ಸಿನಿಮಾ ಇದು

ಇತ್ತೀಚೆಗೆ ಚಿತ್ರಮಂದಿರದಲ್ಲಿ 'ಬತ್ತಾ' ಸಿನಿಮಾ ವೀಕ್ಷಿಸಿದ ನಟಿ ಶ್ರುತಿ ಹಾಸನ್ ಚಿತ್ರದ ಸರಳತೆಗೆ ಮನಸೋತಿದ್ದಾರೆ. ನಿರ್ದೇಶಕ ಬಾಲಾಜಿ ತರಣೀಧರನ್ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಸಿನಿಮಾದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಇತ್ತೀಚೆಗೆ ತಾವು ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಆ ಸಿನಿಮಾ ನೋಡಿ ಭಾವುಕಳಾದೆ’; ಶ್ರುತಿ ಹಾಸನ್ ಮೆಚ್ಚಿದ ಸಿನಿಮಾ ಇದು
ಶ್ರುತಿ ಹಾಸನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 25, 2026 | 7:52 AM

Share

ಮುಖ್ಯಾಂಶಗಳು

  • 'ಬತ್ತಾ' ಸಿನಿಮಾ ನೋಡಿ ಕಣ್ಣೀರಿಟ್ಟ ಶ್ರುತಿ ಹಾಸನ್
  • ಬಾಲಾಜಿ ತರಣೀಧರನ್ ವಿಭಿನ್ನ ಶೈಲಿಗೆ ನಟಿ ಫಿದಾ
  • ಚಿತ್ರದ ಸರಳ ನಿರೂಪಣೆಗೆ ಶ್ರುತಿ ಹಾಸನ್ ಮೆಚ್ಚುಗೆ

ನಟಿ ಶ್ರುತಿ ಹಾಸನ್ ಅವರು ಆಗಾಗ ಮಾಧ್ಯಮಗಳ ಎದುರು ಬಂದು ಸಂದರ್ಶನ ನೀಡುತ್ತಾರೆ. ಅವರು ಈ ವೇಳೆ ಹಲವು ವಿಷಯಗಳನ್ನು ಹಂಚಿಕೊಳ್ಳೋದನ್ನು ನೀವು ಕಂಡಿರಬಹುದು. ಈಗ ಅವರು ಇತ್ತೀಚೆಗೆ ತಾವು ವೀಕ್ಷಿಸಿದ ಅತ್ಯುತ್ತಮ ಸಿನಿಮಾ ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ. ವಿಜಯ್ ಸೇತುಪತಿ ನಟನೆಯ ‘ಬತ್ತಾ’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ನೋಡಿದಾಗ ಕ್ಲೈಮ್ಯಾಕ್ಸ್‌ನಲ್ಲಿ ತಾವು ಭಾವುಕರಾಗಿ ಕಣ್ಣೀರು ಹಾಕಿದ್ದಾಗಿ ಸಂದರ್ಶನವೊಂದರಲ್ಲಿ ಅವರು ಹಂಚಿಕೊಂಡಿದ್ದಾರೆ.

ಶ್ರುತಿ ಹಾಸನ್ ಹೇಳಿದ್ದೇನು?

ಸಂದರ್ಶನದಲ್ಲಿ ಮಾತನಾಡಿದ ಶ್ರುತಿ ಹಾಸನ್ ಅವರು ಇತ್ತೀಚೆಗೆ ನೋಡಿದ ಉತ್ತಮ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದರು, ‘ಇತ್ತೀಚೆಗೆ ನಾನು ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ‘ಬತ್ತಾ’ ಒಂದು. ನಾನು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದೆ. ನಿಜವಾಗಿಯೂ ತುಂಬಾ ಇಷ್ಟವಾಯಿತು. ಅದೊಂದು ಸುಂದರ ಸಿನಿಮಾ’ ಎಂದು ಹೇಳಿದ್ದಾರೆ.

ಬಾಲಾಜಿ ತರಣೀಧರನ್ ಶೈಲಿಗೆ ಫಿದಾ

ಚಿತ್ರದ ನಿರ್ದೇಶಕ ‘ಬಾಲಾಜಿ ತರಣೀಧರನ್’ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಈ ವಿಷಯವನ್ನು ನಾನು ನಿರ್ದೇಶಕರ ಬಳಿಯೂ ಹೇಳಿದ್ದೇನೆ. ಅವರ ಹಿಂದಿನ ಸಿನಿಮಾ ಕೂಡ ನನಗೆ ತುಂಬಾ ಇಷ್ಟವಾಗಿತ್ತು. ಬಾಲಾಜಿ ತರಣೀಧರನ್ ಅವರ ಕೆಲಸವೆಂದರೆ ನನಗೆ ತುಂಬಾ ಇಷ್ಟ. ಅವರ ಯೋಚನಾ ಶೈಲಿ ತುಂಬಾ ವಿಭಿನ್ನ ಮತ್ತು ವಿಶಿಷ್ಟವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಒಟಿಟಿಯಲ್ಲಿ ಕನ್ನಡದಲ್ಲೂ ಇರುವ ವಿಜಯ್ ಸೇತುಪತಿಯ ಹೊಸ ಚಿತ್ರವನ್ನು ಮಿಸ್ ಮಾಡಿಕೊಳ್ಳಲೇಬೇಡಿ

ಸರಳತೆ ಮತ್ತು ಕಣ್ಣೀರು ತರಿಸಿದ ಕ್ಷಣ

ಸಿನಿಮಾದ ಕಥೆ ಮತ್ತು ನಿರೂಪಣೆಯ ಸರಳತೆಯ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, ‘ಸಿನಿಮಾ ನನಗೆ ತುಂಬಾ ಇಷ್ಟವಾಯಿತು. ಅದರ ಸರಳತೆ ನನಗೆ ತುಂಬಾ ಹತ್ತಿರವಾಯಿತು. ಕೊನೆಯಲ್ಲಿ ಸಿನಿಮಾವೊಂದು ಸಹಜವಾಗಿ ನಮ್ಮನ್ನು ಭಾವುಕರನ್ನಾಗಿಸಿ ಕಣ್ಣೀರು ತರಿಸುವುದು ನಿಜಕ್ಕೂ ಅದ್ಭುತ ಅನುಭವ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More