AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಮಾಡಿದ್ದಕ್ಕೆ ಪಾರ್ವತಿಗೆ ಗೀತು ಮೇಲೆ ಮುನಿಸು? ಸ್ಪಷ್ಟನೆ ನೀಡಿದ ನಟಿ

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ನಟಿ ಪಾರ್ವತಿ ತಿರುವೋತ್ತು ಅವರು ಗೀತು ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾರ್ವತಿ, ಮಹಿಳೆಯರನ್ನು ಪರಸ್ಪರ ಎತ್ತಿಕಟ್ಟುವ ಷಡ್ಯಂತ್ರವಿದು, ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಖಡಕ್ ಆಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

‘ಟಾಕ್ಸಿಕ್’ ಮಾಡಿದ್ದಕ್ಕೆ ಪಾರ್ವತಿಗೆ ಗೀತು ಮೇಲೆ ಮುನಿಸು? ಸ್ಪಷ್ಟನೆ ನೀಡಿದ ನಟಿ
ಯಶ್-ಪಾರ್ವತಿ
ರಾಜೇಶ್ ದುಗ್ಗುಮನೆ
|

Updated on: Nov 25, 2026 | 7:04 AM

Share

ಮುಖ್ಯಾಂಶಗಳು

  • ಗಾಳಿಸುದ್ದಿಗಳಿಗೆ ಪಾರ್ವತಿ ತಿರುಗೇಟು
  • ಮಹಿಳೆಯರ ವಿರುದ್ಧ ಮಹಿಳೆಯರನ್ನೇ ಎತ್ತಿಕಟ್ಟುವ ಷಡ್ಯಂತ್ರವಿದು
  • ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್ ಪರ ಬ್ಯಾಟ್ ಬೀಸಿದ ನಟಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ನಟಿ ಪಾರ್ವತಿ ತಿರುವೋತ್ತು (ಪಾರ್ವತಿ ಮೆನನ್) ಅವರು ಗೀತು ಮೋಹನ್‌ದಾಸ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಬ್ಬರ ನಡುವೆ ಸಾಕಷ್ಟು ಆಪ್ತತೆ ಇತ್ತು. ಈ ವದಂತಿಯಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹರಡಿದ್ದವು. ಇದೀಗ ಸಂದರ್ಶನವೊಂದರಲ್ಲಿ ಈ ಎಲ್ಲಾ ಊಹಾಪೋಹಗಳಿಗೆ ನಟಿ ಪಾರ್ವತಿ ತೆರೆ ಎಳೆದಿದ್ದಾರೆ.

ಪಾರ್ವತಿ ಹೇಳಿದ್ದೇನು?

ಗಲಾಟ್ಟಾ ಪ್ಲಸ್ ಸಂದರ್ಶನದಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾರ್ವತಿ, ‘ಅಲ್ಲಿ ಏನೂ ನಡೆದಿಲ್ಲ, ಅದನ್ನು ಸುದ್ದಿ ಮಾಡುವಂತಹದ್ದು ಏನೂ ಇಲ್ಲ. ಮಹಿಳೆಯರನ್ನು ಮಹಿಳೆಯರ ವಿರುದ್ಧವೇ ಎತ್ತಿಕಟ್ಟುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇನ್ನು ಮುಂದೆ ನಾನು ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಬಗ್ಗೆ ಮಾತು:

ತಮ್ಮ ಮತ್ತು ಗೀತು ನಡುವಿನ ಬಾಂಧವ್ಯ ಹಾಗೂ ‘ವುಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯುಸಿಸಿ) ಸಂಘಟನೆಯ ಬಗ್ಗೆ ಮಾತನಾಡಿದ ಪಾರ್ವತಿ, ‘ನಾವು ಡಬ್ಲ್ಯುಸಿಸಿ ಸದಸ್ಯರಾಗಿರುವುದರಿಂದ ನಮ್ಮನ್ನು ಪರಸ್ಪರ ಎತ್ತಿಕಟ್ಟುವುದು ಕೆಲವರಿಗೆ ತುಂಬಾ ಸುಲಭವಾಗಿದೆ. ಫಾಲೋ-ಅನ್‌ಫಾಲೋ ವಿಚಾರವಾಗಿ ನಾನು ಏನಾದರೂ ಹೇಳಿಕೆ ನೀಡಲಿ ಎಂದು ಅವರು ಕಾಯುತ್ತಿದ್ದಾರೆ. ಆದರೆ ಡಬ್ಲ್ಯುಸಿಸಿ ಒಳಗೆ ನಮಗೆ ಪರಸ್ಪರರ ಬಗ್ಗೆ ಉತ್ತಮ ತಿಳುವಳಿಕೆಯಿದೆ. ಗೀತು ತಮಗೆ ಇಷ್ಟ ಬಂದಂತೆ ಒಂದು ಸಿನಿಮಾ ಮಾಡಲು ಬಯಸಿದರೆ, ಆ ಸಿನಿಮಾ ಯಾವುದೇ ವೈಯಕ್ತಿಕ ಇಷ್ಟ-ಕಷ್ಟಗಳ ಹಂಗಿಲ್ಲದೆ ತನ್ನದೇ ಆದ ರೀತಿಯಲ್ಲಿ ಹೊರಬರಬೇಕು. ಸಿನಿಮಾವನ್ನು ಅದರ ಪಾಡಿಗೆ ಬಿಡಬೇಕು. ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವದಾದ್ಯಂತ 1500 ಕೋಟಿ ಗಳಿಸಿದ ‘ರಾಮಾಯಣ’; 2000 ಕೋಟಿ ಗಡಿ ತಲುಪುತ್ತಾ ರಣಬೀರ್-ಯಶ್ ಸಿನಿಮಾ?

ನಾನು ಫಾಲೋ ಮಾಡದ ಎಷ್ಟೋ ಜನ ಚಿತ್ರರಂಗದಲ್ಲಿದ್ದಾರೆ:

ಚಿತ್ರರಂಗದಲ್ಲಿ ನನಗೆ ಪರಿಚಯವಿರುವ ಎಷ್ಟೋ ಜನರನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದಿಲ್ಲ. ಅಷ್ಟಕ್ಕೇ ರೆಡಿಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯಾಗುವುದಾದರೆ ಆಗಲಿ, ನಾನು ಮಾತ್ರ ಇಂತಹ ಗಾಳಿಸುದ್ದಿಗಳಿಗೆ ಬಲಿಯಾಗುವುದಿಲ್ಲ’ ಎನ್ನುವ ಮೂಲಕ ತಮ್ಮ ಹಾಗೂ ಗೀತು ಮೋಹನ್‌ದಾಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಪಾರ್ವತಿ ರವಾನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ
ಹಾಸನ ಪೊಲೀಸ್ ನೋಟಿಸ್​​​ಗೆ ಕುಮಾರಸ್ವಾಮಿ ಕೆಂಡಾಮಂಡಲ
ಹಾಸನ ಪೊಲೀಸ್ ನೋಟಿಸ್​​​ಗೆ ಕುಮಾರಸ್ವಾಮಿ ಕೆಂಡಾಮಂಡಲ
ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳ ನೋಟಿಸ್ ಬಂದ್ರೆ ಏನು ಮಾಡಬೇಕು?
ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳ ನೋಟಿಸ್ ಬಂದ್ರೆ ಏನು ಮಾಡಬೇಕು?
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ