AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮದುವೆಯ ವಿರೋಧಿಯಲ್ಲ’: ಮನಬಿಚ್ಚಿ ಮಾತನಾಡಿದ ನಟಿ ನಿತ್ಯಾ ಮೆನನ್

ನಟಿ ನಿತ್ಯಾ ಮೆನನ್ ಅವರಿಗೆ ಈಗ 38 ವರ್ಷ ವಯಸ್ಸು. ಇನ್ನೂ ಅವರು ಮದುವೆ ಆಗಿಲ್ಲ. ಆದರೆ ‘ನಾನು ಮದುವೆಯ ವಿರೋಧಿಯಲ್ಲ, ಸರಿಯಾದ ಸಂಗಾತಿಯ ಹುಡುಕಾಟದಲ್ಲಿದ್ದೇನೆ’ ಎಂದು ಅವರು ಹೇಳಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ತಮ್ಮ ಹಳೆಯ ಸಂಬಂಧಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

‘ನಾನು ಮದುವೆಯ ವಿರೋಧಿಯಲ್ಲ’: ಮನಬಿಚ್ಚಿ ಮಾತನಾಡಿದ ನಟಿ ನಿತ್ಯಾ ಮೆನನ್
Nithya MenenImage Credit source: PTI
ಮದನ್​ ಕುಮಾರ್​
|

Updated on: Nov 24, 2026 | 7:18 PM

Share

ಬಹುಭಾಷಾ ನಟಿ ನಿತ್ಯಾ ಮೆನನ್ ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ತಮ್ಮ ವೈಯಕ್ತಿಕ ಜೀವನ, ಪ್ರೀತಿ ಮತ್ತು ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಉಸಿರುಗಟ್ಟಿಸುವಂತಿದ್ದ ಸಂಬಂಧಗಳಿಂದ ತಾವು ಹೊರಬಂದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಮದುವೆಯ ಬಗ್ಗೆ ತಾವು ನೀಡುವ ಹೇಳಿಕೆಗಳಿಂದ ಜನರು ತಮಗೆ ಮದುವೆಯೇ ಇಷ್ಟವಿಲ್ಲ ಎಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ತಮಗೆ ಮದುವೆಯಾಗುವ ಆಸೆಯಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇವಲ ಮದುವೆಯಾಗಬೇಕು ಎಂಬ ಕಾರಣಕ್ಕೆ ಮದುವೆಯಾಗುವುದಕ್ಕಿಂತ, ಸರಿಯಾದ ವ್ಯಕ್ತಿಗಾಗಿ ಕಾಯುತ್ತಿರುವುದಾಗಿ ನಿತ್ಯಾ ತಿಳಿಸಿದ್ದಾರೆ.

ಗೋಪಿನಾಥ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ನಿತ್ಯಾ ಮೆನನ್, ‘ನನ್ನ ಆತ್ಮಕ್ಕೆ ಅಥವಾ ವ್ಯಕ್ತಿತ್ವಕ್ಕೆ ಕಡಿವಾಣ ಹಾಕುವಂತಹ ಸಂಬಂಧಗಳಿಂದ ಹೊರಬರುವುದು ತುಂಬಾ ಕಷ್ಟವಾಗಿತ್ತು. ಆದರೂ ನಾನು ಯಾವಾಗಲೂ ಅಂತಹ ಸಂಬಂಧಗಳಿಂದ ದೂರ ಸರಿಯುವ ನಿರ್ಧಾರವನ್ನೇ ತೆಗೆದುಕೊಂಡೆ. ಕೆಲವು ವ್ಯಕ್ತಿಗಳ ಪ್ರಭಾವ ಹೇಗಿರುತ್ತದೆ ಎಂದರೆ, ನಮಗೆ ಬೆಳೆಯಲು ಸಾಧ್ಯವಾಗುವುದಿಲ್ಲ, ಉಸಿರಾಡಲೂ ಆಗದಷ್ಟು ಒತ್ತಡವಿರುತ್ತದೆ. ಇನ್ನೊಬ್ಬರಿಗೆ ಉಸಿರಾಡಲೂ ಬಿಡದಂತಹ ಎಷ್ಟೋ ಜನರಿದ್ದಾರೆ. ಅಂತಹ ಸಂಬಂಧಗಳಿಂದ ಹೊರಬಂದಿದ್ದು ನನ್ನ ಭಯವಲ್ಲ, ಬದಲಾಗಿ ಅದು ನನಗಾದ ಅರಿವು’ ಎಂದು ಹೇಳಿದ್ದಾರೆ.

ಅಂತಹ ಸಂಬಂಧಗಳನ್ನು ಕಡಿದುಕೊಳ್ಳುವುದು ಸುಲಭದ ನಿರ್ಧಾರವಾಗಿರಲಿಲ್ಲ, ಆದರೆ ಆ ನಿರ್ಧಾರ ತಮಗೆ ದೊಡ್ಡ ನೆಮ್ಮದಿ ನೀಡಿತು ಎಂದು ನಿತ್ಯಾ ಹೇಳಿಕೊಂಡಿದ್ದಾರೆ. ‘ಆ ಸಂಬಂಧಗಳಿಂದ ಹೊರಬಂದಾಗ ಒಂದು ರೀತಿಯ ನಿಟ್ಟುಸಿರು ಬಿಟ್ಟಂತಾಯಿತು. ನನ್ನ ಮುಂದೆ ಹೊಸ ಪ್ರಪಂಚವೇ ತೆರೆದುಕೊಂಡಂತೆ ಭಾಸವಾಯಿತು. ನಾನು ಮತ್ತೆ ಉಸಿರಾಡಬಲ್ಲೆ ಎಂಬ ಭಾವನೆ ಮೂಡಿತು. ನಾನು ಮದುವೆಯಾಗದಿರುವ ಬಗ್ಗೆ ಮಾತನಾಡಿದಾಗಲೆಲ್ಲಾ, ನಾನು ಮದುವೆಯ ವಿರೋಧಿ ಅಥವಾ ನನಗೆ ಮದುವೆ ಇಷ್ಟವಿಲ್ಲ ಎಂಬಂತೆ ಅರ್ಥೈಸಲಾಗುತ್ತದೆ. ಆದರೆ ಅದು ನಿಜವಲ್ಲ. ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ನನಗೂ ಮದುವೆಯಾಗುವ ಆಸೆಯಿದೆ’ ಎಂದಿದ್ದಾರೆ ನಿತ್ಯಾ ಮೆನನ್.

ಮುಂದುವರಿದು ಮಾತನಾಡಿದ ನಿತ್ಯಾ ಮೆನನ್ ಅವರು, ‘ನಾನು ಹುಡುಕುತ್ತಿರುವುದು ಕೇವಲ ಮದುವೆಯನ್ನಲ್ಲ, ಬದಲಾಗಿ ಒಂದು ಸರಿಯಾದ ಸಂಬಂಧವನ್ನು. ಹಾಗಾಗಿ ಸುಮ್ಮನೆ ಯಾರನ್ನೋ ಮದುವೆಯಾಗಲು ನಾನು ಸಿದ್ಧವಿಲ್ಲ. ನನಗೆ ಸ್ವಾತಂತ್ರ್ಯ ನೀಡುವಂತಹ ವ್ಯಕ್ತಿ ಸಿಗದಿದ್ದರೆ, ನನಗೆ ಮದುವೆಯೇ ಬೇಡ’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿರುವುದೇಕೆ ನಿತ್ಯಾ ಮೆನನ್: ಕೊಟ್ಟರು ಉತ್ತರ

ತಮ್ಮ ಹಳೆಯ ಸಂಬಂಧಗಳ ಅನುಭವವನ್ನು ವಿವರಿಸಿದ ನಿತ್ಯಾ, ಆ ದಿನಗಳಲ್ಲಿ ತಮಗೆ ಏನನ್ನೂ ಮಾಡಲು ಬಿಡದೆ ಕಟ್ಟಿಹಾಕಿದಂತೆ ಮತ್ತು ನಿರ್ಬಂಧಿಸಿದಂತೆ ಅನಿಸುತ್ತಿತ್ತು ಎಂದಿದ್ದಾರೆ. ಅಂತಹ ಸಂಬಂಧಗಳು ತಮ್ಮನ್ನು ತೀರಾ ಸಣ್ಣವಳನ್ನಾಗಿ ಮತ್ತು ದುರ್ಬಲಳನ್ನಾಗಿ ಭಾವಿಸುವಂತೆ ಮಾಡಿದ್ದವು ಎಂದು ನಟಿ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ