AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿದೇಶದಿಂದ ಬಂದ ಮಗಳು; ಸರ್ಪ್ರೈಸ್ ವಿಸಿಟ್‌ಗೆ ಕಣ್ಣೀರು ಹಾಕಿದ ತಾಯಿ

ಕೆಲವು ಹೃದಯ ಸ್ಪರ್ಶಿ ಕ್ಷಣಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಮೂರು ವರ್ಷಗಳ ಬಳಿಕ ಮಗಳನ್ನು ಕಂಡ ಹೆತ್ತಮ್ಮನ ಕಣ್ಣು ಒದ್ದೆಯಾಗಿದೆ. ಮಗಳ ಸರ್ಪ್ರೈಸ್ ವಿಸಿಟ್ ಗೆ ತಾಯಿ ಶಾಕ್ ಆಗಿದ್ದಾಳೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಾಯಿ ಮಗಳ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ವಿದೇಶದಿಂದ ಬಂದ ಮಗಳು; ಸರ್ಪ್ರೈಸ್ ವಿಸಿಟ್‌ಗೆ ಕಣ್ಣೀರು ಹಾಕಿದ ತಾಯಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 24, 2026 | 6:56 PM

Share

ನಿಸ್ವಾರ್ಥ ಪ್ರೀತಿ ನೀಡುವುದು ಹೆತ್ತವರು (parents) ಮಾತ್ರ. ದೂರದ ಊರಿನಲ್ಲಿ ನೆಲೆಸಿರುವ ಮಕ್ಕಳಿಗೆ ಹೆತ್ತವರನ್ನು ಕಾಣಲು ಬರುವ ಖುಷಿಯೇ ಬೇರೆ. ಇದೀಗ ಯುವತಿ ಮೂರು ವರ್ಷಗಳ ಬಳಿಕ ವಿದೇಶದಿಂದ ಮನೆಗೆ ಹಿಂದಿರುಗಿದ್ದಾಳೆ. ಆದರೆ ತಾಯಿಗೆ ಒಂದೇ ಒಂದು ಮಾತು ತಿಳಿಸದೇ ಸರ್ಪ್ರೈಸ್ ನೀಡಿದ್ದಾಳೆ. ಈ ಭಾವನಾತ್ಮಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದೇಶದಿಂದ ದಿಢೀರನೆ ಮನೆಗೆ ಬಂದ ಮಗಳು

ಅದಿತಿ (Aditi) ಎಂಬ ಯುವತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಹಂಚಿಕೊಂದು, ಈ ಜಗತ್ತಿನಲ್ಲಿ ಬೇರೆ ಯಾವುದಕ್ಕಿಂತ ಹೆಚ್ಚಾಗಿ ನಾನು ಈ ಅಪ್ಪುಗೆಯನ್ನು ಮಿಸ್ ಮಾಡಿಕೊಂಡೆ. ನಿಜವಾಗಿಯೂ, ಮೂರು ವರ್ಷಗಳ ದೀರ್ಘ ಕಾಯುವಿಕೆ ಮತ್ತು ದೂರದ ಆಯಾಸವು ನನ್ನ ತಾಯಿಯ ಒಂದೇ ಅಪ್ಪುಗೆಯಲ್ಲಿ ಮಾಯವಾಯಿತು ಎಂದು ಶೀರ್ಷಿಕೆ ನೀಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Aditiiiii (@_.a.a.d.u.u._)

ಮಗಳ ಸರ್ಪ್ರೈಸ್ ವಿಸಿಟ್‌ಗೆ ಭಾವುಕಳಾದ ತಾಯಿ

ಈ ವಿಡಿಯೋ ಮೂರು ವರ್ಷಗಳ ನಂತರ ನಾನು ನನ್ನ ತಾಯಿಯನ್ನು ಅಚ್ಚರಿಗೊಳಿಸುತ್ತಿದ್ದೇನೆ ಎಂಬ ಪಠ್ಯದೊಂದಿಗೆ ಆರಂಭವಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಮನೆಯ ಮುಖ್ಯದ್ವಾರದ ಮುಂದೆ ನಿಂತು ಡೋರ್ ಬೆಲ್ ಬಾರಿಸಿದ್ದಾಳೆ. ಆಕೆಯ ತಾಯಿ ಬಾಗಿಲು ತೆರೆಯುತ್ತಿದ್ದಂತೆ ಮಗಳನ್ನು ಕಂಡು ಶಾಕ್ ಆಗಿರುವುದನ್ನು ಕಾಣಬಹುದು.

ಮಗಳನ್ನು ಕಂಡು ಖುಷಿಯಲ್ಲಿ ತೇಲಾಡಿದ ಹೆತ್ತಮ್ಮ

ಮಗಳನ್ನು ಕಂಡ ಖುಷಿಯಲ್ಲಿ ತಾಯಿ ತೇಲಾಡಿದ್ದಾಳೆ. ಒಂದು ಕ್ಷಣವೂ ವ್ಯರ್ಥ ಮಾಡದೆ, ತಾಯಿ ಮತ್ತು ಮಗಳು ಪರಸ್ಪರ ಅಪ್ಪಿಕೊಂಡಿದ್ದಾರೆ. ಆ ಬಳಿಕ ಮನೆಯೊಳಗೆ ಹೋಗಿ ಮನೆ ಮಂದಿಯನ್ನೆಲ್ಲಾ ಮಾತನಾಡಿಸಿದ್ದಾಳೆ. ಮನೆಯಲ್ಲಿ ಮಗಳು ಬಂದಿದ್ದಾಳೆ ಎಂಬ ಖುಷಿಯ ವಾತಾವರಣ ಮನೆ ಮಾಡಿದೆ. ಕೊನೆಗೆ ಮನೆಯ ಮುದ್ದಿನ ಶ್ವಾನವನ್ನು ಅಪ್ಪಿ ಮುದ್ದಾಡಿದ್ದಾಳೆ.

ಇದನ್ನೂ ಓದಿ: ತಾಯಿ ಮಗಳ ಪುನರ್ಮಿಲನ; ಒಂದು ವರ್ಷದ ಬಳಿಕ ಮಗಳನ್ನು ಕಂಡು ಕಣ್ಣೀರು ಹಾಕಿದ ಹೆತ್ತಮ್ಮ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಂಜಾಯ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಶ್ವಾನದ ಖುಷಿ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿ ಕೊಳ್ಳುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ