ಅಮರಕಂಟಕ್ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯಡಿ ಸಿಲುಕಿದ ಭಕ್ತ, ರಕ್ಷಣೆಯ ವಿಡಿಯೋ ವೈರಲ್
ಅಮರಕಂಟಕ್ ನರ್ಮದಾ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯ ಕೆಳಗೆ ಹೋಗುವ ಆಚರಣೆ ವೇಳೆ ಭಕ್ತರೊಬ್ಬರು ಸಿಲುಕಿಕೊಂಡ ಘಟನೆ ವೈರಲ್ ಆಗಿದೆ. ಇಷ್ಟಾರ್ಥ ಸಿದ್ಧಿಗಾಗಿ ಅಥವಾ ಪಾಪ ವಿಮೋಚನೆಗಾಗಿ ಈ ಕಿರಿದಾದ ಜಾಗ ದಾಟಲು ಯತ್ನಿಸಿದ ಭಕ್ತನನ್ನು ಇತರರು ಸೇರಿ ಸುರಕ್ಷಿತವಾಗಿ ಹೊರತಂದರು. ಸ್ಥಳೀಯ ನಂಬಿಕೆಗಳ ಸುತ್ತಲಿನ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಮರಕಂಟಕ್, ನವೆಂಬರ್ 23: ಮಧ್ಯಪ್ರದೇಶದ ಅಮರಕಂಟಕ್‌ನ ನರ್ಮದಾ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಯೊಂದರಲ್ಲಿ ಭಾಗವಹಿಸಿದ್ದ ಭಕ್ತರೊಬ್ಬರು ಆನೆಯ ಕಲ್ಲಿನ ಪ್ರತಿಮೆಯ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡಿದ್ದರು.ಅವರನ್ನು ಹೊರಗೆ ತರಲು ಇತರ ಭಕ್ತರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಎಲ್ಲರೂ ಸೇರಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸ್ಥಳೀಯ ನಂಬಿಕೆಯ ಪ್ರಕಾರ, ದೇವಸ್ಥಾನದ ಆವರಣದಲ್ಲಿರುವ ಆನೆಯ ಪ್ರತಿಮೆಯ ಕಾಲುಗಳ ನಡುವಿನ ಜಾಗವನ್ನು ದಾಟಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಕೆಲವರು ಇದನ್ನು ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಪರೀಕ್ಷೆ ಎಂದೂ ಭಾವಿಸುತ್ತಾರೆ. ಇದೇ ನಂಬಿಕೆಯಂತೆ ವ್ಯಕ್ತಿಯೊಬ್ಬರು ಆನೆಯ ಪ್ರತಿಮೆಯ ಕೆಳಗಿರುವ ಕಿರಿದಾದ ಜಾಗದ ಮೂಲಕ ತೆವಳುತ್ತಾ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಮಧ್ಯದಲ್ಲೇ ಸಿಲುಕಿಕೊಂಡು ಹೊರಬರಲು ಸಾಧ್ಯವಾಗದೆ ಪರದಾಡಿದ್ದಾರೆ.
ಅಚರನ್ನು ಹೊರತೆಗೆಯಲು ಕೆಲವರು ಹಿಂದಿನಿಂದ ತಳ್ಳಿದರೆ, ಇನ್ನು ಕೆಲವರು ಮುಂದೆ ಎಳೆದು ಸಹಾಯ ಮಾಡಿದ್ದಾರೆ. ಸಾಕಷ್ಟು ಪ್ರಯತ್ನದ ಬಳಿಕ ಭಕ್ತನನ್ನು ಹೊರಗೆ ತರಲಾಗಿದೆ. ಈ ವೇಳೆ ದೇವಸ್ಥಾನದಲ್ಲಿದ್ದವರು ಆತಂಕಗೊಂಡಿದ್ದರು. ವ್ಯಕ್ತಿ ಸುರಕ್ಷಿತವಾಗಿ ಹೊರಬಂದ ಬಳಿಕ ಇತರ ಭಕ್ತರೂ ಇದೇ ಆಚರಣೆಯಲ್ಲಿ ಭಾಗವಹಿಸಿರುವುದಾಗಿ ವರದಿಯಾಗಿದೆ.
భక్తితో వెళ్లి.. ఇరుక్కుపోయి తంటాలు!
ఏనుగు విగ్రహం మధ్యలో ఇరుక్కున్న భక్తుడు! మధ్యప్రదేశ్ అమర్కంటక్లో విచిత్ర ఘటన మా నర్మదా ఆలయ ప్రాంగణంలో ఘటన విగ్రహం మధ్య నుంచి బయటకు రాలేక అవస్థలు! ఎలాగోలా బయటపడ్డ భక్తుడు https://t.co/2QlrWqAI9L
— V6 News (@V6News) November 23, 2026
ಆನೆಯ ಪ್ರತಿಮೆಯ ಕೆಳಗೆ ಹಾದುಹೋಗುವ ಆಚರಣೆ ಏಕೆ? ಅಮರಕಂಟಕ್‌ನ ನರ್ಮದಾ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯ ಕೆಳಗಿನಿಂದ ಹಾದುಹೋಗುವ ಸ್ಥಳೀಯ ಆಚರಣೆಯಿದೆ. ಈ ಜಾಗವನ್ನು ದಾಟಿದರೆ ಪಾಪಗಳಿಂದ ಮುಕ್ತಿ ಸಿಗುತ್ತದೆ ಅಥವಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಕೆಲವು ಭಕ್ತರಲ್ಲಿದೆ. ಆದರೆ ಇದು ಧಾರ್ಮಿಕ ನಂಬಿಕೆಯೇ ಹೊರತು, ವೈಜ್ಞಾನಿಕವಾಗಿ ಸಾಬೀತಾದ ಸಂಗತಿಯಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




