ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ, ವಿಡಿಯೋ ನೋಡಿ ಶಾಸಕ
ಮುಖ್ಯಾಂಶಗಳು
- ಕೆಡಿಪಿ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನಾಮಫಲಕ ತೆಗೆಸಿದ ಕೈ ಶಾಸಕ ಉದಯ್
- ಇಂದು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಕೆಡಿಪಿ ಸಭೆಯಲ್ಲಿ ನಡೆದ ಘಟನೆ
- ಕುಮಾರಸ್ವಾಮಿ ಮಂಡ್ಯ ಸಂಸದರಾಗಿರುವ ಹಿನ್ನಲೆಯಲ್ಲಿ ಶಿಷ್ಟಾಚಾರದ ಪ್ರಕಾರ ನಾಮಫಲಕ ಇಟ್ಟಿದ್ದ ಅಧಿಕಾರಿಗಳು
ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ರಾಜಕೀಯ ಮುಸುಕಿನ ಗುದ್ದಾಟ ಮುಂದುವರೆದಿದೆ. ಇದಕ್ಕೆ ಪೂರಕವೆಂಬಂತೆ ಮದ್ದೂರಿನ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಯವರ ನಾಮಫಲಕವನ್ನು ತೆಗೆಸಿರುವ ಪ್ರಸಂಗ ನಡೆದಿದೆ. ಹೌದು....ಕೆಲಸಕ್ಕೆ ಬಾರದವರೆಂದು ಕೆಡಿಪಿ ಸಭೆಯಲ್ಲಿದ್ದ ಕೇಂದ್ರ ಸಚಿವ ಕುಮಾರಸ್ವಾಮಿಯವರ ನಾಮಫಲಕ ತೆಗೆಸಿದ್ದಾರೆ
ಮಂಡ್ಯ, ನವೆಂಬರ್ 24: ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ರಾಜಕೀಯ ಮುಸುಕಿನ ಗುದ್ದಾಟ ಮುಂದುವರೆದಿದೆ. ಇದಕ್ಕೆ ಪೂರಕವೆಂಬಂತೆ ಮದ್ದೂರಿನ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಯವರ ನಾಮಫಲಕವನ್ನು ತೆಗೆಸಿರುವ ಪ್ರಸಂಗ ನಡೆದಿದೆ. ಹೌದು….ಕೆಲಸಕ್ಕೆ ಬಾರದವರೆಂದು ಕೆಡಿಪಿ ಸಭೆಯಲ್ಲಿದ್ದ ಕೇಂದ್ರ ಸಚಿವ ಕುಮಾರಸ್ವಾಮಿಯವರ ನಾಮಫಲಕ ತೆಗೆಸಿದ್ದಾರೆ. ಇಂದು (ನವೆಂಬರ್ 24) ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ನಡೆಯುತ್ತಿರುವ ಕೆಡಿಪಿ ಸಭೆ ನಡೆದಿದ್ದು, ಕುಮಾರಸ್ವಾಮಿ ಮಂಡ್ಯ ಸಂಸದರಾಗಿರುವ ಹಿನ್ನಲೆಯಲ್ಲಿ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳು, ಟೇಬಲ್ ಮೇಲೆ ಅವರ ನಾಮಫಲಕ ಇಟ್ಟಿದ್ದರು. ಇದನ್ನು ಕಂಡ ಶಾಸಕ ಉದಯ್, ಯಾರೋ ಕೆಲಸಕ್ಕೆ ಬಾರದವರ ನಾಮಫಲಕ ಇಟ್ಟಿದ್ದೀರಾ ಎಂದು ಗರಂ ಆಗಿ ಹೇಳಿದ್ದಾರೆ. ಕೂಡಲೇ ಅಧಿಕಾರಿಗಳು ಓಡೋಡಿ ಬಂದು ಎಚ್‌ಡಿಕೆ ನಾಮಫಲಕ ತೆಗೆದರು. ಬಳಿಕ ಅದೇ ಸೀಟಿನಲ್ಲಿ ಶಾಸಕರು ಕುಳಿತುಕೊಂಡರು.

