ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.
ಕಾವೇರಿ ಜಲ ವಿವಾದ: CWMA ಆದೇಶದಿಂದ ಕಂಗೆಟ್ಟ ಕರ್ನಾಟಕ; ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕೆಆರ್‌ಎಸ್ ಜಲಾಶಯ ಬತ್ತಿ ಹೋಗುತ್ತಿದೆ. ಈ ಸಂದರ್ಭದಲ್ಲೂ ತಮಿಳುನಾಡಿಗೆ ಸರಿಸುಮಾರು 4 ಟಿಎಂಸಿ ನೀರು ಬಿಡಲು ಸಿಡಬ್ಲ್ಯೂಎಂಎ ಆದೇಶಿಸಿದೆ. ಇದರಿಂದ ರೈತರಿಗೆ ನೀರಿಲ್ಲದೆ ಬೆಳೆ ಬೆಳೆಯಲು ಕಷ್ಟವಾಗಿದೆ, ಅಲ್ಲದೆ ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತವಾಗಿದೆ.
- Dileep CP
- Updated on: Oct 9, 2026
- 6:58 pm
ಕೇಂದ್ರ ಸಚಿವ, ರಾಜ್ಯದ ಬಿಜೆಪಿ ನಾಯಕ ಸೇರಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ: ಪೆನ್‌ಡ್ರೈವ್ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಕಾಂಗ್ರೆಸ್ ಶಾಸಕ ಗಣಿಗ ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇಂದ್ರದ ಸಚಿವರು ಮತ್ತು ರಾಜ್ಯದ ನಾಯಕರು ಸೇರಿ ಖಾಸಗಿ ಕಂಪನಿಗಳಿಗೆ ಸುಪಾರಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋ, ಫೋಟೋ ಸಹಿತ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ.
- Dileep CP
- Updated on: Oct 9, 2026
- 11:19 am
ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ದಾಸ್ತಾನು ಕೊರತೆ ಮುಚ್ಚಿಹಾಕಲು ಕಲಬೆರಕೆ ಪುಡಿ ತಂದಿದ್ದ ಆರೋಪಿಗಳು!
ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಸ್ತಾನು ಕೊರತೆ ಸರಿದೂಗಿಸಲು ಕಲಬೆರಕೆ ಹಾಲಿನಪುಡಿ ತಂದಿದ್ದ ಆರೋಪ ಕೇಳಿಬಂದಿದ್ದು, ಮನ್‌ಮುಲ್‌ನ ಹಾಲಿನಪುಡಿ ಬ್ಯಾಗ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
- Dileep CP
- Updated on: Oct 6, 2026
- 9:16 am
ದರ್ಶನ್ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಕ್ಕೆ ತೆರಳುವ ಆರೋಪ: ಶಾಸಕರ ಭೇಟಿಯಾಗಲು ಉಚಿತ ವೀಸಾಗೆ ಆಗ್ರಹಿಸಿ ಡಿಸಿಗೆ ಕ್ಷೇತ್ರದ ಜನರಿಂದ ಮನವಿ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಕ್ಕೆ ತೆರಳುತ್ತಿದ್ದು, ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಲಭ್ಯವಿಲ್ಲದ ಕಾರಣ ಅವರನ್ನು ಭೇಟಿಯಾಗಲು ಉಚಿತ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸ್ಥಳೀಯರು ವಿಚಿತ್ರ ಮನವಿ ಸಲ್ಲಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯರವರ ಕುಟುಂಬ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಿರುವುದಿಂದ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕರು ಇಲ್ಲದಂತಾಗಿದೆ ಎಂದೂ ದೂರಿದ್ದಾರೆ.
- Dileep CP
- Updated on: Sep 30, 2026
- 3:18 pm
ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ: ಅಧಿಕಾರಿಗಳ ಎಡವಟ್ಟಿಗೆ ರೇಷನ್, ಬ್ಯಾಂಕ್ ಖಾತೆ ಕಳೆದುಕೊಂಡು ವ್ಯಕ್ತಿ ಪರದಾಟ!
ಮಂಡ್ಯದಲ್ಲಿ ಜೀವಂತವಾಗಿರುವ ವ್ಯಕ್ತಿಯನ್ನು ಸತ್ತಿದ್ದಾನೆಂದು ದಾಖಲೆಗಳಲ್ಲಿ ಉಲ್ಲೇಖಿಸಿರುವ ವಿಚಿತ್ರ ಘಟನೆ ನಡೆದಿದೆ. ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಸಂತ್ರಸ್ತ ಶಫಿಉಲ್ಲಾ ಖಾನ್ ಅವರ ರೇಷನ್ ಕಾರ್ಡ್, ಮತದಾರರ ಹಕ್ಕು ಹಾಗೂ ಬ್ಯಾಂಕ್ ಖಾತೆಗಳು ರದ್ದಾಗಿದ್ದು, ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ನ್ಯಾಯಕ್ಕಾಗಿ ಸರ್ಕಾರಿ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಅಲೆಯುತ್ತಿರುವ ಶಫಿಉಲ್ಲಾ ಕಣ್ಣೀರಿಡುತ್ತಿದ್ದಾರೆ.
- Dileep CP
- Updated on: Sep 27, 2026
- 9:14 am
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ: ಜನವರಿ ತಿಂಗಳ ಒಳಗಾಗಿಯೇ ಜಲಕ್ಷಾಮದ ಭೀತಿ
ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWMA ಆದೇಶಿಸಿರುವ ನಡುವೆ ಕೆಆರ್‌ಎಸ್ ಸೇರಿದಂತೆ ಕಾವೇರಿ ಜಲಾನಯನದ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ರಾಜ್ಯದಲ್ಲಿ ಜನವರಿ ವೇಳೆಗೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಎದುರಾಗುವ ಭೀತಿ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಬಿಡಲು CWMA ಆದೇಶಿಸುರುವ ಕಾರಣ ಆತಂಕ ಹೆಚ್ಚಿದೆ.
- Dileep CP
- Updated on: Sep 25, 2026
- 8:11 am
ಮಂಡ್ಯದಲ್ಲಿ ನಿಲ್ಲದ ಹೆಚ್‌ಡಿಕೆ-ಕಾಂಗ್ರೆಸ್ ಶಾಸಕರ ಸಮರ: ಮದ್ದೂರಲ್ಲಿ ಆಟೋ ನಿಲ್ದಾಣ ವಿಚಾರಕ್ಕೆ ಜಟಾಪಟಿ
ಮಂಡ್ಯದ ಮದ್ದೂರಿನಲ್ಲಿ ಆಟೋ ನಿಲ್ದಾಣ ನಿರ್ಮಾಣ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಕದಲೂರು ಉದಯ್ ನಡುವೆ ಶೀತಲ ಸಮರ ತೀವ್ರಗೊಂಡಿದ್ದು, ಪುರಸಭೆ ಅಧಿಕಾರಿಗಳ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಮದ್ದೂರು ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ಕಾಮಗಾರಿಗೆ ಕುಮಾರಸ್ವಾಮಿ ಪೂಜೆ ನೆರವೇರಿಸಿದ್ದರು. ಇದೇ ವಿಚಾರವೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
- Dileep CP
- Updated on: Sep 25, 2026
- 6:42 am
ಬಿಸಿಎಂ ಹಾಸ್ಟೆಲ್ ನಿವೃತ್ತ ಅಧೀಕ್ಷಕನ ಮನೆಯಲ್ಲಿ ಖಜಾನೆ ಕಂಡು ಲೋಕಾಯುಕ್ತ ಅಧಿಕಾರಿಗಳಿಗೇ ಶಾಕ್: ಬರೋಬ್ಬರಿ 80 ಮದ್ಯದ ಬಾಟಲಿಗಳೂ ಪತ್ತೆ
ಮಂಡ್ಯದ ಬಿಸಿಎಂ ಹಾಸ್ಟೆಲ್ ನಿವೃತ್ತ ಅಧೀಕ್ಷಕನ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ನಡೆದ ಈ ಕಾರ್ಯಾಚರಣೆಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ, ಚಿನ್ನಾಭರಣ, 80 ಬಾಟಲ್ ಮದ್ಯ, ರೇಷ್ಮೆ ಸೀರೆಗಳು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ದಿನಸಿ ಮತ್ತು ಸಾಹಿತ್ಯ ಸಮ್ಮೇಳನದ ಉಡುಗೊರೆಗಳು ಪತ್ತೆಯಾಗಿವೆ.
- Dileep CP
- Updated on: Sep 22, 2026
- 12:46 pm
ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ: ವಿಡಿಯೋ ಮೂಲಕ ಕ್ಷಮೆ ಕೇಳಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ
ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದ ಆರೋಪದ ಮೇಲೆ, ಶಾಸಕ ಸುರೇಶ್ ಗೌಡರ ಪುತ್ರಿ ಐಶ್ವರ್ಯ ಗೌಡ ಕ್ಷಮೆ ಯಾಚಿಸಿದ್ದಾರೆ. ಆಗಸ್ಟ್ 12ರಂದು ತುಮಕೂರಿನ ಉಕ್ಕಡ ಮಾರಮ್ಮನ ದೇವಸ್ಥಾನದಲ್ಲಿ ನಡೆದ ಘಟನೆಗೆ ಸಂಬಂಧಿಸಿ ವಿಡಿಯೋ ಹಂಚಿಕೊಂಡಿರುವ ಅವರು, ಕೋಪ ಮತ್ತು ಉದ್ವೇಗದಿಂದ ನಡೆದ ಘಟನೆ ಬಗ್ಗೆ ಬೇಷರತ್ ಕ್ಷಮೆ ಕೋರಿದ್ದಾರೆ.
- Dileep CP
- Updated on: Sep 22, 2026
- 11:59 am
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ತಪ್ಪಿಸಲು ಕಳ್ಳಾಟ: ಜೀವದ ಜೊತೆ ಚೆಲ್ಲಾಟ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕೆಲ ಚಾಲಕರು ಶ್ರೀರಂಗಪಟ್ಟಣ ಟೋಲ್ ತಪ್ಪಿಸಲು ಎಕ್ಸಿಟ್‌ಗಳಲ್ಲಿ ಎಂಟ್ರಿ ಪಡೆಯುತ್ತಾ ಅಪಾಯಕಾರಿ ಕಳ್ಳಾಟವಾಡುತ್ತಿದ್ದಾರೆ. ಇತ್ತೀಚೆಗೆ ಉಮ್ಮಡಹಳ್ಳಿ ಗೇಟ್ ಬಳಿ ಕಾರೊಂದು ಫ್ಲೈಓವರ್‌ನಿಂದ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ದುರಂತದ ಬಳಿಕವೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Dileep CP
- Updated on: Sep 20, 2026
- 8:53 am
ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಗೆ ಮೆರವಣಿಗೆಗೆ ಕ್ಷಣಗಣನೆ: ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕಳೆದ ವರ್ಷದ ಕಲ್ಲು ತೂರಾಟ ಘಟನೆ ನಡೆದಿದ್ದ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಗಣೇಶೋತ್ಸವದ ನೆಪದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದೋಸ್ತಿ ಪಕ್ಷಗಳು ಒಂದಾಗಿ ತಮ್ಮ ರಾಜಕೀಯ ಶಕ್ತಿಯನ್ನೂ ಪ್ರದರ್ಶಿಸಲು ಸಜ್ಜಾಗಿರುವುದರಿಂದ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
- Dileep CP
- Updated on: Sep 16, 2026
- 11:28 am
ಮದ್ದೂರಿನಲ್ಲಿ ಕಳೆದ ವರ್ಷದ ಕಲ್ಲೆಸೆತಕ್ಕೆ ದೋಸ್ತಿಗಳ ಉತ್ತರ: ನಾಳೆ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ, ಬೃಹತ್ ಮೆರವಣಿಗೆ
ಮಂಡ್ಯದ ಮದ್ದೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಳೆದ ವರ್ಷದ ಗಲಭೆಗೆ ಪ್ರತಿಕ್ರಿಯೆಯಾಗಿ 108 ಗಣೇಶ ಮೂರ್ತಿಗಳ ಬೃಹತ್ ವಿಸರ್ಜನಾ ಕಾರ್ಯಕ್ರಮ ಆಯೋಜಿಸಿದೆ. ಇದು ಮೈತ್ರಿಕೂಟದ ರಾಜಕೀಯ ಶಕ್ತಿ ಪ್ರದರ್ಶನವೂ ಆಗಿದ್ದು, ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
- Dileep CP
- Updated on: Sep 15, 2026
- 12:22 pm