ಶಾಲಾ ಕಟ್ಟಡದಿಂದ ಬಿದ್ದು ಬೀದರ್‌ನಲ್ಲಿ 15 ವರ್ಷದ ಬಾಲಕ ಸಾವು: ಕಾರಣ ನಿಗೂಢ
ಬೀದರ್‌ನ ಜನಸೇವಾ ಖಾಸಗಿ ಶಾಲೆಯಲ್ಲಿ 15 ವರ್ಷದ ಸಮೀರ್ ಎಂಬ ಬಾಲಕ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ. ಶಾಲಾ ಸಿಬ್ಬಂದಿ ಕಿರುಕುಳ ನೀಡಿದ್ದರಿಂದಲೇ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಬಾಲಕನ ಸಾವಿಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್, ಜೂನ್ 10: LIC ಕಾಲೋನಿಯ ಜನಸೇವಾ ಖಾಸಗಿ ಶಾಲೆಯ ಕಟ್ಟಡದಿಂದ ಬಿದ್ದು 15 ವರ್ಷದ ಸಮೀರ್ ಎಂಬ ಬಾಲಕ ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಶಾಂತಿನಗರದ ನಿವಾಸಿ ಸಮೀರ್(15) ಮೃತ ಬಾಲಕನಾಗಿದ್ದು, ಶಾಲೆಯಲ್ಲಿ ಈತ SSLC ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಶಾಲಾ ಸಿಬ್ಬಂದಿಯ ಕಿರುಕುಳದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಾಲಕನ ಕುಟುಂಬಸ್ಥರು ಶಾಲಾ ಸಿಬ್ಬಂದಿ ವಿರುದ್ಧ ಆರೋಪಿಸಿದ್ದು, ನಮ್ಮ ಅನುಮತಿ ಪಡೆಯದೆ ಬಾಲಕನ ಶವ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಶಾಲೆಯಲ್ಲಿ ಕಿರುಕುಳ ನೀಡ್ತಿರುವ ಬಗ್ಗೆ ಆತ ಮನೆಯಲ್ಲಿ ಹೇಳಿಕೊಂಡಿದ್ದ ಎಂದು ದೂರಿದ್ದಾರೆ. ಆದರೆ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ನಾವು ಬಾಲಕನಿಗೆ ಕೇವಲ ಓದುವಂತೆ ಹೇಳಿದ್ದೇವೆಯೇ ಹೊರತು ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು

