AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ; ವಿಡಿಯೋ ವೈರಲ್

ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Sep 20, 2026 | 7:16 PM

Share

ಜಪಾನ್ ಏರ್ ಸೆಲ್ಫ್-ಡಿಫೆನ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಟೇಕೆಹಿರೊ ಮೊರಿಟಾ ಭಾರತದ ಸ್ವದೇಶಿ ನಿರ್ಮಿತ 'ಎಲ್‌ಸಿಎ ತೇಜಸ್' ಯುದ್ಧವಿಮಾನದಲ್ಲಿ ಹಾರಾಟ ನಡೆಸಿದರು. ಇದನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಭಾರತದ ಯುದ್ಧವಿಮಾನದ ಮೇಲಿರುವ ಜಪಾನ್‌ನ ನಂಬಿಕೆ ಮತ್ತು ವಿಶ್ವಾಸಕ್ಕೆ ಉದಾಹರಣೆ ಎಂದು ಬಣ್ಣಿಸಿದ್ದಾರೆ. ಸಮರಾಭ್ಯಾಸದ ನಂತರ ಮಾತನಾಡಿದ ಭಾರತೀಯ ವಾಯುಪಡೆ (IAF) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ಮೊರಿಟಾ ಅವರ ಈ ನಿರ್ಧಾರವು ಭಾರತೀಯ ಯುದ್ಧವಿಮಾನದ ಮೇಲಿರುವ ಗೌರವ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು.

ನವದೆಹಲಿ, ಸೆಪ್ಟೆಂಬರ್ 20: ‘ವೀರ್ ಗಾರ್ಡಿಯನ್-2026’ ಜಂಟಿ ಸಮರಾಭ್ಯಾಸದ ವೇಳೆ ಜಪಾನ್ ಏರ್ ಸೆಲ್ಫ್-ಡಿಫೆನ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಟೇಕೆಹಿರೊ ಮೊರಿಟಾ ಭಾರತದ ಸ್ವದೇಶಿ ನಿರ್ಮಿತ ‘ಎಲ್‌ಸಿಎ ತೇಜಸ್’ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದರು. ಇದನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಭಾರತದ ಯುದ್ಧವಿಮಾನದ ಮೇಲಿರುವ ಜಪಾನ್‌ನ ನಂಬಿಕೆ ಮತ್ತು ವಿಶ್ವಾಸಕ್ಕೆ ಉದಾಹರಣೆ ಎಂದು ಬಣ್ಣಿಸಿದ್ದಾರೆ.

ಸಮರಾಭ್ಯಾಸದ ನಂತರ ಮಾತನಾಡಿದ ಭಾರತೀಯ ವಾಯುಪಡೆ (IAF) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ಮೊರಿಟಾ ಅವರ ಈ ನಿರ್ಧಾರವು ಭಾರತೀಯ ಯುದ್ಧವಿಮಾನದ ಮೇಲಿರುವ ಗೌರವ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು.

ಪ್ರಸ್ತುತ ನಡೆಯುತ್ತಿರುವ ‘ವೀರ್ ಗಾರ್ಡಿಯನ್-2026’ ಯುದ್ಧಾಭ್ಯಾಸದಲ್ಲಿ ಭಾರತೀಯ ವಾಯುಪಡೆಯು ತನ್ನ ಸ್ವದೇಶಿ ತೇಜಸ್, ಸುಖೋಯ್ ಸು-30 ಎಂಕೆಐ ಮತ್ತು ರಫೇಲ್  ಯುದ್ಧವಿಮಾನಗಳೊಂದಿಗೆ ಭಾಗವಹಿಸುತ್ತಿದ್ದರೆ, ಜಪಾನ್ ವಾಯುಪಡೆಯು ತನ್ನ ಎಫ್-2ಎ ಯುದ್ಧವಿಮಾನಗಳೊಂದಿಗೆ ಪಾಲ್ಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us