Indian Army

Indian Army

2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ.

ನೂತನ ಸೇನಾ ಮುಖ್ಯಸ್ಥರಾದ ಉಪೇಂದ್ರ ದ್ವಿವೇದಿ; ಸಹಪಾಠಿಗಳಿಬ್ಬರು ಸೇನಾಪಡೆ, ನೌಕಾಪಡೆ ಮುಖ್ಯಸ್ಥರಾಗಿರುವುದು ಇದೇ ಮೊದಲು

Upendra Dwivedi becomes 30th Chief of Army Staff: ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ ಇಂದು ಜೂನ್ 30ರಂದು ಅಧಿಕಾರ ಪಡೆದಿದ್ದಾರೆ. ಜೂನ್ 11ರಂದು ಅವರ ಹೆಸರನ್ನು ಆ ಸ್ಥಾನಕ್ಕೆ ಸೂಚಿಸಲಾಗಿತ್ತು. ಜನರಲ್ ಮನೋಜ್ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಉಪೇಂದ್ರ ತುಂಬಿದ್ದಾರೆ.

ಭಾರತೀಯ ಸೇನೆ ತಲುಪಿದ ನಾಗಾಸ್ತ್ರ; ನಾಗಪುರದ ಕಂಪನಿ ತಯಾರಿಸಿದ ಪ್ರಬಲ ಡ್ರೋನ್ ಅಸ್ತ್ರ ಇದು

Indian army gets Nagastra-1: ಮಹಾರಾಷ್ಟ್ರದ ಸೋಲಾರ್ ಇಂಡಸ್ಟ್ರೀಸ್​ಗೆ ಸೇರಿದ ಇಇಎಲ್ ಸಂಸ್ಥೆ ತಯಾರಿಸಿರುವ ಮಿಲಿಟರಿ ಶ್ರೇಣಿಯ ನಾಗಾಸ್ತ್ರ-1 ಡ್ರೋನ್​ಗಳ ಮೊದಲ ಬ್ಯಾಚ್ ಈಗ ಭಾರತೀಯ ಸೇನೆ ಕೈಸೇರಿದೆ. ಈ ಶ್ರೇಣಿಯ ಡ್ರೋನ್​ಗಳನ್ನು ಇದೆ ಮೊದಲ ಬಾರಿಗೆ ದೇಶೀಯವಾಗಿ ನಿರ್ಮಿಸಲಾಗಿರುವುದು. ಆಮದಿತ ಡ್ರೋನ್​ಗಳಿಗಿಂತ ಬಹಳ ಅಗ್ಗದ ಬೆಲೆಗೆ ಇವನ್ನು ತಯಾರಿಸಲಾಗಿದೆ. 2 ಮೀಟರ್​ನಷ್ಟು ನಿಖರವಾಗಿ ಈ ಡ್ರೋನ್​ಗಳು ಗುರಿಗೆ ಹೊಡೆಯಬಲ್ಲುವು. 30 ಕಿಮೀ ಶ್ರೇಣಿ ಹೊಂದಿವೆ.

ಸರಣಿ ಭಯೋತ್ಪಾದಕ ದಾಳಿ, ಜಮ್ಮು-ಕಾಶ್ಮೀರದ ಭದ್ರತಾ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರದ ಭದ್ರತಾ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ್ದಾರೆ. ಇದಕ್ಕಾಗಿ ಹಿರಿಯ ಅಧಿಕಾರಿಗಳ ಸಭೆಯನ್ನು ಇಂದು ಕರೆದಿದ್ದರು. ಜಮ್ಮು-ಕಾಶ್ಮೀರದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಯೋಜನೆ ಏನು? ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೂ ಪ್ರಧಾನಿ ಮೋದಿ ಮತ್ತು ಅಮಿತ್​​​ ಶಾ ಕೆಲವೊಂದು ಸಲಹೆ ನೀಡಿದ್ದಾರೆ.

ಪೂಂಚ್​ನಲ್ಲಿ ಉಗ್ರ ದಾಳಿ; ಇಬ್ಬರು ಭಯೋತ್ಪಾದಕರ ಸ್ಕೆಚ್ ಬಿಡುಗಡೆ; 20 ಲಕ್ಷ ರೂ ತಲೆದಂಡ ಘೋಷಣೆ

Poonch terror attack: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ವಾಯುಪಡೆಗೆ ಸೇರಿದ ವಾಹನದ ಮೇಲೆ ಉಗ್ರರು ದಾಳಿ ಮಾಡಿ, ವಿಕ್ಕಿ ಪಹಾಡೆ ಎಂಬವರನ್ನ ಬಲಿಪಡೆದಿದ್ದರು. ಆ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಮೇ 4, ಶನಿವಾರ ರಾತ್ರಿ ಈ ಕೃತ್ಯ ಸಂಭವಿಸಿದೆ. ಭದ್ರತಾ ಪಡೆಗಳು ಉಗ್ರರನ್ನು ಹಿಡಿಯಲು ಇಡೀ ಶಾಹಸಿತಾರ್ ಪ್ರದೇಶ ಜಾಲಾಡುತ್ತಿದ್ದಾರೆ. ಇದೇ ವೇಳೆ ಪೂಂಚ್​ನಲ್ಲಿ ದಾಳಿ ಮಾಡಿದ್ದಾರೆಂದು ಶಂಕಿಸಲಾಗಿರುವ ಇಬ್ಬರು ಉಗ್ರರ ರೇಖಾಚಿತ್ರವನ್ನು ರಚಿಸಲಾಗಿದ್ದು ಸಾರ್ವಜನಿಕರ ಗಮನಕ್ಕೆ ಬಿಡುಗಡೆ ಮಾಡಲಾಗಿದೆ. ಇವರ ಬಗ್ಗೆ ಯಾರಾದರೂ ಸುಳಿವು ಕೊಟ್ಟರೆ 20 ಲಕ್ಷ ರೂ ಬಹುಮಾನ ಕೊಡುವುದಾಗಿ ಘೋಷಿಸಲಾಗಿದೆ.

ಪಾಕಿಸ್ತಾನಕ್ಕೆ ಮೊದಲು ತಿಳಿಸಿದೆವು; ಬಾಲಾಕೋಟ್ ಸ್ಟ್ರೈಕ್ ಹೊಸ ರಹಸ್ಯ ಬಿಚ್ಚಿಟ್ಟ ಪ್ರಧಾನಿ

Narendra Modi on Balakot Airstrike incident: 2019ರಲ್ಲಿ ಕಾಶ್ಮೀರದ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಬಾಲಾಕೋಟ್ ಏರ್​ಸ್ಟ್ರೈಕ್ ಘಟನೆಯ ಬಗ್ಗೆ ನರೇಂದ್ರ ಮೋದಿ ಹೊಸ ರಹಸ್ಯವೊಂದನ್ನು ತೆರೆದಿಟ್ಟಿದ್ದಾರೆ. ಬಾಲಾಕೋಟ್ ದಾಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಮೊದಲು ಪಾಕಿಸ್ತಾನಕ್ಕೆ ತಿಳಿಸಲಾಗಿತ್ತು. ಏರ್ ಸ್ಟ್ರೈಕ್​ನಲ್ಲಿ ಎಷ್ಟು ಹಾನಿಯಾಗಿದೆ, ಎಷ್ಟು ಮಂದಿ ಸತ್ತಿದ್ದಾರೆ ಇತ್ಯಾದಿ ಮಾಹಿತಿಯನ್ನು ಪಾಕಿಸ್ತಾನಕ್ಕೆ ಮೊದಲು ತಿಳಿಸಲಾಯಿತು ಎಂದು ಮೋದಿ ಹೇಳಿದ್ದಾರೆ. ಬಾಗಲಕೋಟೆಯ ನವನಗರದಲ್ಲಿ ಏಪ್ರಿಲ್ 29ರಂದು ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅತಿ ಹಗುರವಾದ ಬುಲೆಟ್​ ಪ್ರೂಫ್​ ಜಾಕೆಟ್​ ಸಿದ್ಧಪಡಿಸಿದ ಡಿಆರ್​ಡಿಒ

ಅಮೆರಿಕ, ಇಂಗ್ಲೆಂಡ್, ಮತ್ತು ಜರ್ಮನಿಯಂತೆ ಭಾರತವೂ ಈಗ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ ಪಡಿಸಿದೆ. ಡಿಆರ್​ಡಿಒ ದೇಶದ ಅತ್ಯಂತ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಜಾಕೆಟ್ ಹೆಚ್ಚಿನ ಬೆದರಿಕೆ ಮಟ್ಟದಿಂದ ರಕ್ಷಣೆ ನೀಡುತ್ತದೆ. ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಚಂಡೀಗಢದ TBRL ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಇದು ಪ್ರಜಾತಂತ್ರದ ಲೇವಡಿ: ಹತ್ಯೆಯಾದ 29 ಮಾವೋವಾದಿ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿದ ಸುಪ್ರಿಯಾ ಶ್ರೀನೇತ್ ವಿರುದ್ಧ ಬಿಜೆಪಿ ಕಿಡಿ

BJP objects to pro naxal statement of Supriya Shrinate: ಏಪ್ರಿಲ್ 16, ಮಂಗಳವಾರದಂದು ಛತ್ತೀಸ್​ಗಡದ ಕಾಂಕೇರ್​ನಲ್ಲಿ ನಡೆದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 29 ಮಾವೋವಾದಿ ಉಗ್ರರು ಹತ್ಯೆಯಾಗಿದ್ದರು. ಈ ನಕ್ಸಲರನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಹುತಾತ್ಮರೆಂದು ಬಣ್ಣಿಸಿದ್ದಾರೆ. ಇವರ ಈ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ. ಸುಪ್ರಿಯಾ ಶ್ರೀನೇತ್ ಅವರ ಈ ಹೇಳಿಕೆಯು ಛತ್ತೀಸ್​ಗಡ ಜನತೆ, ಪೊಲೀಸ್ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಲೇವಡಿ ಆಗಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

Indian Tourists to Maldives: ಮಾಲ್ಡೀವ್ಸ್ ದೇಶಕ್ಕೆ ಪ್ರವಾಸ ಹೋಗುವ ಭಾರತೀಯರ ಸಂಖ್ಯೆ 2023ಕ್ಕೆ ಹೋಲಿಸಿದರೆ 2024ರಲ್ಲಿ ಗಣನೀಯವಾಗಿ ತಗ್ಗಿದೆ. 2023ರಲ್ಲಿ ಮಾರ್ಚ್ 2ರವರೆಗೆ ಹೋಗಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ 2024ರಲ್ಲಿ ಶೇ. 33ರಷ್ಟು ಕಡಿಮೆ ಆಗಿದೆ. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಗ್ಗೆ ಮಾಲ್ಡೀವ್ಸ್​ನ ಕೆಲ ಸಚಿವರು ಮತ್ತು ಸಂಸದರು ಅವಹೇಳನ ಮಾಡಿದ ಪರಿಣಾಮ ಇದು ಎಂದು ಭಾವಿಸಲಾಗಿದೆ.

ಚೀನಾ ಗಡಿ ಭಾಗದಲ್ಲಿ 10,000 ಯೋಧರ ಪ್ರಬಲ ಪಡೆ ನಿಯೋಜಿಸಿದ ಭಾರತೀಯ ಸೇನೆ; ಶಾಂತಿಕಾಲದಲ್ಲೂ ಯುದ್ಧಕ್ಕೆ ಸನ್ನದ್ಧ ಸ್ಥಿತಿ ಎಂದ ರಾಜನಾಥ್

India-China Conflict: ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಸೂಕ್ಷ್ಮ ಎನಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಇನ್ನಷ್ಟು ಸೈನಿಕರನ್ನು ನಿಯೋಜಿಸಿದೆ. ಈಗಾಗಲೇ ಇರುವ 9,000 ಸೈನಿಕರ ಜೊತೆಗೆ ಪಶ್ಚಿಮ ಗಡಿಭಾಗದಲ್ಲಿದ್ದ 10,000 ಸೈನಿಕರ ಪ್ರಬಲ ಪಡೆಗಳನ್ನು ಚೀನಾ ಗಡಿಭಾಗಕ್ಕೆ ಕರೆತರಲಾಗಿದೆ. ಇದರೊಂದಿಗೆ ಚೀನಾ ಗಡಿಭಾಗವನ್ನು ಭಾರತ ಹೆಚ್ಚು ಭದ್ರ ಮಾಡಿಕೊಳ್ಳುತ್ತಿದೆ.

Pulwama Attack: ಪುಲ್ವಾಮಾ‌ದಲ್ಲಿ ಹುತಾತ್ಮರಿಗೆ ವಿಶಿಷ್ಟ ರೀತಿ ಶ್ರದ್ಧಾಂಜಲಿ, ಮಡಿಕೇರಿಯಲ್ಲಿ ಗಮನ ಸೆಳೆದ ಬಾಲಕಿ

2019ರ ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 40 ಸಿಆರ್​​​ಪಿಎಫ್​ ಯೋಧರು ಹುತ್ಮಾರಾದರು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮಡಿಕೇರಿಯಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

  • Gopal AS
  • Updated on: Feb 14, 2024
  • 3:30 pm