ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಪ್ರಲೇ ಕ್ಷಿಪಣಿಯು ಅದರ ಹೆಚ್ಚಿನ ನಿಖರತೆಗೆ ಹೆಸರುವಾಸಿಯಾದ ಘನ ಪ್ರೊಪೆಲ್ಲಂಟ್ ಅರೆ-ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ವಿವಿಧ ರೀತಿಯ ಸಿಡಿತಲೆಗಳನ್ನು ಹೊತ್ತೊಯ್ಯುವ ಮತ್ತು ಬಹು ವಿಧದ ಉದ್ದೇಶಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿ ಭಾರತದ ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯಗಳ ಪ್ರಮುಖ ಭಾಗವಾಗಿದೆ. ಇದನ್ನು ಒಂದು ಒಡಿಶಾದಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ನವದೆಹಲಿ, ಡಿಸೆಂಬರ್ 31: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ಒಡಿಶಾದ ಕರಾವಳಿಯಲ್ಲಿ ಎರಡು ಪ್ರಲೇ ಕ್ಷಿಪಣಿಗಳ (missiles) ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷೆಯು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ನಡೆಯಿತು. ಕ್ಷಿಪಣಿಗಳನ್ನು ಒಂದೇ ಲಾಂಚರ್‌ನಿಂದ ಉಡಾಯಿಸಲಾಯಿತು. ಇದು ಭಾರತದ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಪ್ರಲೇ ಕ್ಷಿಪಣಿಯು ಭಾರತದಲ್ಲಿ ಅಭಿವೃದ್ಧಿಪಡಿಸಿದ, ಘನ ಇಂಧನ, ಅರೆ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ಹೆಚ್ಚಿನ ನಿಖರತೆ ಮತ್ತು ಸುಧಾರಿತ ಮಾರ್ಗದರ್ಶನ ವ್ಯವಸ್ಥೆಗಳಿಗೆ ಹೆಸರುವಾಸಿಯಾಗಿದೆ. ಪ್ರಲೇ ಕ್ಷಿಪಣಿಯನ್ನು ಭಾರತದ ಬೆಳೆಯುತ್ತಿರುವ ರಕ್ಷಣಾ ಬಲಕ್ಕೆ ಪ್ರಮುಖ ಸೇರ್ಪಡೆ ಎಂದು ಪರಿಗಣಿಸಲಾಗಿದೆ. ಸಂಶೋಧನಾ ಕೇಂದ್ರ ಇಮಾರತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಮತ್ತು ಅಡ್ವಾನ್ಸ್ಡ್ ಸಿಸ್ಟಮ್ಸ್ ಪ್ರಯೋಗಾಲಯ ಸೇರಿದಂತೆ ಹಲವಾರು ಡಿಆರ್‌ಡಿಒ ಪ್ರಯೋಗಾಲಯಗಳ ಜಂಟಿ ಪ್ರಯತ್ನಗಳ ಫಲಿತಾಂಶವೇ ಈ ಯಶಸ್ವಿ ಪರೀಕ್ಷೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

