ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?
Indian Army to deploy ramjet powered 155 mm artillery shells: ಡಿಆರ್ಡಿಒ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳನ್ನು ಅಭಿವೃದ್ಧಿಪಡಿಸಿವೆ. ಈ ಶೆಲ್ಗಳನ್ನು ಭಾರತದ ಸೇನೆಯ 155 ಎಂಎಂ ಗನ್ಗಳಿಗೆ ನಿಯೋಜಿಸಲಾಗಿದೆ. ರಾಮ್ಜೆಟ್ ಶಕ್ತಿಯ ಆರ್ಟಿಲರಿ ಶೆಲ್ಗಳನ್ನು ನಿಯೋಜಿಸಿರುವ ವಿಶ್ವದ ಮೊದಲ ಸಶಸ್ತ್ರ ಪಡೆ ಎನ್ನುವ ದಾಖಲೆ ಭಾರತದ್ದಾಗಿದೆ.

ನವದೆಹಲಿ, ಜನವರಿ 6: ಭಾರತೀಯ ಸೇನೆಯ (Indian Army) 155 ಎಂಎಂ ಗನ್ಗಳಿಗೆ ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳನ್ನು ನಿಯೋಜಿಸಿದೆ. ಈ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತದ್ದಾಗಿದೆ. ಡಿಆರ್ಡಿಒ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ಮತ್ತು ಸ್ವಂತವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಭೂಸೇನೆಯ ಬತ್ತಳಿಕೆಯಲ್ಲಿ ಇರುವ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ ಆರ್ಟಿಲರಿ ಶೆಲ್ಗಳು ಇವೆ. ಈ ಶೆಲ್ಗಳಿಗೆ ರಾಮ್ಜೆಟ್ ಎಂಜಿನ್ ಅಳವಡಿಸಿರುವುದು ಗೇಮ್ ಚೇಂಜರ್ ಎನಿಸಿದೆ.
ಏನಿದು ರಾಮ್ಜೆಟ್?
ರಾಮ್ಜೆಟ್ ಎಂಬುದು ಒಳನುಗ್ಗುವ ಗಾಳಿ ಬಳಸಿಕೊಂಡು ಕೆಲಸ ಮಾಡುವ ಎಂಜಿನ್ ಆಗಿದೆ. ತಿರುಗುವ ಕಂಪ್ರೆಸ್ಸರ್ಗಳು ಮತ್ತು ಟರ್ಬೈನ್ಗಳು ಬೇಕಾಗುವುದಿಲ್ಲ. ಗನ್ನಿಂದ ಹೊರಹಾರುವ ಶೆಲ್ ಒಂದು ನಿರ್ದಿಷ್ಟ ವೇಗ ಪಡೆದಾಗ ರಾಮ್ಜೆಟ್ ಎಂಜಿನ್ ಸಕ್ರಿಯಗೊಳ್ಳುತ್ತದೆ. ರಾಮ್ಜೆಟ್ ಎಂಜಿನ್ಗೆ ಗಾಳಿಯೇ ಪ್ರಮುಖ ಶಕ್ತಿ. ಈ ರಾಮ್ಜೆಟ್ಗಳನ್ನು ಸಾಮಾನ್ಯವಾಗಿ ಮಿಸೈಲ್ಗಳಿಗೆ ಅಳವಡಿಸಲಾಗುತ್ತದೆ. ಆರ್ಟಿಲರಿ ಶೆಲ್ಗಳಿಗೆ ಇತ್ತೀಚೆಗೆ ಇದರ ಅಳವಡಿಕೆ ಆರಂಭವಾಗಿದೆ.
ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ
ಏನಿದು ಆರ್ಟಿಲರಿ ಶೆಲ್?
ಇದು ಒಂದು ರೀತಿಯಲ್ಲಿ ಬುಲೆಟ್ಗಳಂತೆ. ಆದರೆ, ಸ್ಫೋಟಕಗಳು ಆರ್ಟಿಲರಿ ಶೆಲ್ನ ಒಳಗೆ ಇರುತ್ತವೆ. 155 ಎಂಎಂ ಗನ್, ಹೌವಿಟ್ಜರ್ ಗನ್ ಇತ್ಯಾದಿಗಳಿಂದ ಇವುಗಳನ್ನು ಶೂಟ್ ಮಾಡಲಾಗುತ್ತದೆ. ಸಾಮಾನ್ಯ ಆರ್ಟಿಲರಿ ಶೆಲ್ಗಳು 5ರಿಂದ 10 ಕಿಮೀ ದೂರದವರೆಗೆ ಹೋಗಬಲ್ಲುವು. ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳು 50 ಕಿಮೀ ದೂರದವರೆಗೂ ಗುರಿಯನ್ನು ಹೊಡೆದುರುಳಿಸಬಲ್ಲುವು.
ಭಾರತದಲ್ಲಿ ನಿಯೋಜಿಸಲಾಗಿರುವ ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳು ಸಾಮಾನ್ಯದವಕ್ಕಿಂತ ಶೇ. 30ರಷ್ಟು ಹೆಚ್ಚು ದೂರ ತಲುಪಬಲ್ಲುವು ಎಂದೆನ್ನಲಾಗುತ್ತಿದೆ. ಸದ್ಯ ಇದನ್ನು 155 ಎಂಎಂ ಗನ್ಗಳಿಗೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಲೈಟ್ ಹೌವಿಟ್ಜರ್ ಗನ್ ಇತ್ಯಾದಿ ಇನ್ನೂ ಹಲವು ವೆಪನ್ ಸಿಸ್ಟಂಗಳಿಗೆ ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳನ್ನು ಸೇರಿಸುವ ಯೋಜನೆ ಭಾರತದ್ದಾಗಿದೆ.
ಇದನ್ನೂ ಓದಿ: ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್ಎಸ್ ಖರೀದಿಗೆ ಸರ್ಕಾರ ಅನುಮೋದನೆ
ಬೇರೆ ದೇಶಗಳಲ್ಲಿ ಇಲ್ಲವಾ ರಾಮ್ಜೆಟ್ ಟೆಕ್ನಾಲಜಿ?
ಕ್ಷಿಪಣಿಗಳಿಗೆ ರಾಮ್ಜೆಟ್ ಎಂಜಿನ್ ಬಳಸಲಾಗುತ್ತದೆ. ಆದರೆ, ಆರ್ಟಿಲರಿ ಶೆಲ್ಗಳಿಗೆ ಇದನ್ನು ಅಳವಡಿಸುವ ಪ್ರಯತ್ನ ಇತ್ತೀಚಿನ ವರ್ಷಗಳಿಂದ ಆಗುತ್ತಿದೆ. ಅಮೆರಿಕದ ಬೋಯಿಂಗ್ ಮತ್ತು ನಾರ್ವೆಯ ನ್ಯಾಮ್ಮೋ ಕಂಪನಿಗಳು ಇಂಥ ಶೆಲ್ಗಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಇನ್ನೂ ಕೂಡ ಯಾವುದೇ ಸಶಸ್ತ್ರ ಸೇನಾ ಪಡೆಗಳ ಬಳಕೆಗೆ ಅದನ್ನು ನಿಯೋಜಿಸಲಾಗಿಲ್ಲ. ಆ ಮಟ್ಟಿಗೆ, ಇದನ್ನು ಬಳಸಿದ ಮೊದಲ ಸಶಸ್ತ್ರ ಪಡೆ ಭಾರತೀಯ ಸೇನೆಯದ್ದು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




