AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಡಗಿ ಮೆಣಸಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ಬ್ಯಾಡಗಿ ಮೆಣಸಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ಪ್ರಸನ್ನ ಹೆಗಡೆ
|

Updated on:Mar 09, 2026 | 7:12 PM

Share

ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿದೆ. ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಫ್ತು ಗಲ್ಫ್ ರಾಷ್ಟ್ರಗಳಿಗೆ ಸ್ಥಗಿತಗೊಂಡಿದೆ. ಕಂಟೈನರ್ ಕೊರತೆ ಮತ್ತು ಹೆಚ್ಚಿದ ಬಾಡಿಗೆ ದರದಿಂದಾಗಿ ರಫ್ತು ವೆಚ್ಚ ದುಪ್ಪಟ್ಟಾಗಿದೆ. ಒಂದು ಕೋಟಿ ರೂಪಾಯಿಗಳ ಬಾಕಿ ಹಣ ಇನ್ನೂ ಬಂದಿಲ್ಲ, ಇದರಿಂದ ಬೆಳೆಗಾರರು ಮತ್ತು ರಫ್ತುದಾರರು ಆತಂಕಗೊಂಡಿದ್ದಾರೆ.

ಹಾವೇರಿ, ಮಾರ್ಚ್​ 09: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಹಿನ್ನೆಲೆ ಹಾವೇರಿಯ ಪ್ರಸಿದ್ಧ ಬ್ಯಾಡಗಿ ಮೆಣಸಿನ ಮಾರುಕಟ್ಟೆಗೂ ಯುದ್ಧದ ಬಿಸಿ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ಆಗುತ್ತಿದ್ದ ಬ್ಯಾಡಗಿ ಮೆಣಸು ರಫ್ತಿನ ಮೇಲೆ ಪರಿಣಾಮ ಉಂಟಾಗಿದೆ. ಮಸಾಲೆ ಪದಾರ್ಥಗಳು ಮತ್ತು ಸೌಂದರ್ಯವರ್ಧಕ ತಯಾರಿಕೆಗೆ ಬಳಕೆಯಾಗುವ ಈ ಮೆಣಸು ಮಲೇಷಿಯಾ, ಸಿಂಗಾಪುರ, ಇಂಡೋನೇಷಿಯಾ, ಬಾಲಿ, ಥೈಲ್ಯಾಂಡ್, ಇಸ್ರೇಲ್, ಇರಾನ್, ಅಮೆರಿಕಕ್ಕೆ ರಫ್ತಾಗುತ್ತಿತ್ತು. ಯುದ್ಧದ ಹಿನ್ನೆಲೆ ಈ ಮೊದಲು 1800 US ಡಾಲರ್ ಇದ್ದ ಕಂಟೇನರ್ ಬಾಡಿಗೆ ದರ 3500 US ಡಾಲರ್ ದಾಟಿದೆ. ಯುದ್ಧ ಮುಂದುವರಿದರೆ ಬ್ಯಾಡಗಿ ಮೆಣಸಿನ ದರ ಕುಸಿಯುವ ಆತಂಕವನ್ನು ರೈತರು, ವರ್ತಕರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 09, 2026 06:52 PM
Follow Us