AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?

Pattern of US attacks on Venezuela and Iran gives clues about its next attack? ಯುದ್ಧಕ್ಕೆ ನಾನಾ ಕಾರಣಗಳಿರುತ್ತವೆ. ವೆನಿಜುವೆಲಾದಿಂದ ಮಾದಕವಸ್ತು ಕಳ್ಳಸಾಗಣೆ ಆಗುತ್ತಿದೆ ಎನ್ನುವ ನೆಪವೊಡ್ಡಿ ಅಮೆರಿಕ ದಾಳಿ ಮಾಡಿತು. ಇರಾನ್​ನಿಂದ ಪರಮಾಣ ಶಕ್ತಿ ದುರ್ಬಳಕೆ ಆಗುತ್ತದೆ ಎಂದು ಹೇಳಿ ಯುದ್ಧ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಅಮೆರಿಕದ ಈ ಯುದ್ಧಗಳಿಗೆ ಬೇರೆ ಕಾರಣಗಳಿವೆ ಎನ್ನುವುದು ತಜ್ಞರ ಅನಿಸಿಕೆ. ಇಲ್ಲಿದೆ ವಿವರ.

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 09, 2026 | 8:31 PM

Share

ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ ಎನ್ನುವುದು. ಆದರೆ, ತೆರೆಯ ಮರೆಯಲ್ಲಿ ಇರಾನ್ ಮೇಲೆ ಅಮೆರಿಕ ಎರಗಿ ಹೋಗಲು ಬೇರೊಂದು ಕಾರಣ ಇದೆ.

ವೆನಿಜುವೆಲಾ ಮಾದರಿ ಪ್ರಯೋಗದಲ್ಲಿ ಅಮೆರಿಕ…

ಅಮೆರಿಕದ ಸೇನೆ ಇತ್ತೀಚೆಗಷ್ಟೇ ವೆನಿಜುವೆಲಾದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷರನ್ನೇ ಬದಲಾಯಿಸಿಬಿಟ್ಟಿತು. ಜನಸಾಮಾನ್ಯರಿಗೆ ಹಾನಿಯಾಗದೆಯೇ ನಡೆದ ಆಪರೇಷನ್ ಅದು. ಅದೇ ಮಾದರಿಯಲ್ಲಿ ಕ್ಯೂಬಾ ಮತ್ತು ಇರಾನ್​ನಲ್ಲೂ ಅಮೆರಿಕ ಮಾಡಹೊರಟಿದೆ. ಇರಾನ್ ಅಧ್ಯಕ್ಷ ಆಯತೊಲ್ಲ ಖಮೇನಿ ಅವರನ್ನು ಆರಂಭದಲ್ಲೇ ಕೊಂದು ಹಾಕಿತು. ಸರ್ವೋಚ್ಚ ನಾಯಕ ಸಾವನ್ನಪ್ಪಿದರೆ ಇರಾನ್ ಶರಣಾಗಬಹುದು ಎನ್ನುವ ಅಮೆರಿಕದ ಎಣಿಕೆ ತಪ್ಪಾಗಿದ್ದು ಹೌದು. ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದ ಮಾಜಿ ನಿರ್ದೇಶಕಿಯಾದ ತಾರಾ ಕರ್ತಾ ಅವರ ಪ್ರಕಾರ ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್​ನಲ್ಲಿ ಒಂದು ಕಾಮನ್ ಫ್ಯಾಕ್ಟರ್ ಇದೆ. ಅದು ಚೀನಾದ ಲಿಂಕ್.

ಇದನ್ನೂ ಓದಿ: ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?

ಚೀನಾದ ಯುಆನ್ ಕರೆನ್ಸಿ ಲಿಂಕ್

ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್ ದೇಶಗಳು ತಮ್ಮ ತೈಲ ಮತ್ತು ಸರಕುಗಳ ರಫ್ತನ್ನು ಅಮೆರಿಕದ ಡಾಲರ್ ಕರೆನ್ಸಿ ಬದಲು ಚೀನಾದ ಯುಆನ್ ಕರೆನ್ಸಿಯಲ್ಲಿ ಮಾಡುತ್ತಿದ್ದವು ಎಂದು ತಾರಾ ಕರ್ತಾ ಅವರು ಎನ್​ಡಿಟಿವಿಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ವೆನಿಜುವೆಲಾ ಮತ್ತು ಇರಾನ್ ದೇಶಗಳು ಚೀನಾಗೆ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡುತ್ತಿದ್ದವು. ವೆನಿಜುವೆಲಾ ಅಧ್ಯಕ್ಷ ಮಡುರೊ ಅವರಂತೂ ಡಾಲರ್ ಕರೆನ್ಸಿ ವಹಿವಾಟು ತ್ಯಜಿಸಿ ತಮ್ಮ ದೇಶವನ್ನು ಅಮೆರಿಕದಿಂದ ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಹೇಳುತ್ತಿದ್ದರು. ಅಮೆರಿಕವು ನಿಷೇಧ ಹಾಕಿದಾಗ ಚೀನಾಗೆ ತೈಲವನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರುತ್ತಿತ್ತು ವೆನಿಜುವೆಲಾ.

ಇರಾನ್ ದೇಶ ಕೂಡ ಚೀನಾದೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಯುಆನ್ ಕರೆನ್ಸಿಯಲ್ಲೇ ವಹಿವಾಟು ನಡೆಸುತ್ತದೆ. ಅಮೆರಿಕದ ನಿಷೇಧ ಕ್ರಮವನ್ನು ಬೈಪಾಸ್ ಮಾಡಲು ಇರಾನ್ ದೇಶವು ಮಲೇಷ್ಯಾ ಮೂಲಕ ಚೀನಾಗೆ ತೈಲ ಸಾಗಿಸುತ್ತದೆ. ಅಲ್ಲಿ ಯುಆನ್ ಕರೆನ್ಸಿ ಬಳಕೆ ಆಗುತ್ತದೆ. ಅಮೆರಿಕ ಕಣ್ಣಿಟ್ಟಿರುವ ಕ್ಯೂಬಾ ದೇಶ ಕೂಡ ಚೀನೀ ಕರೆನ್ಸಿಯಲ್ಲಿ ವ್ಯವಹರಿಸುತ್ತದೆ.

ಚೀನಾಗೆ ತೈಲ ದಕ್ಕದಂತೆ ಮಾಡುವುದು ಅಮೆರಿಕದ ಚಿತಾವಣಿಯಾ?

ತಾರಾ ಕರ್ತಾ ಪ್ರಕಾರ ಅಮೆರಿಕವು ತೈಲ ಸಂಪನ್ಮೂಲದ ಲಭ್ಯತೆ ಖಾತ್ರಿಪಡಿಸಿಕೊಳ್ಳುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಚೀನಾಗೆ ತೈಲ ದಕ್ಕಬಾರದು ಎನ್ನುವ ಉದ್ದೇಶ ಇರಬಹುದು. ಇದರ ಜೊತೆಗೆ ಪ್ರಬಲ ಕಾರಣ ಯುಆನ್ ಕರೆನ್ಸಿ ಬಲಗೊಳ್ಳುತ್ತಿರುವುದು.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ವಿಶ್ವದಲ್ಲಿ ಸದ್ಯ ಅಮೆರಿಕದ ಡಾಲರ್ ಕರೆನ್ಸಿ ಅತಿ ಪ್ರಬಲವಾದುದು. ಡೀಫಾಲ್ಟ್ ಅಂತಾರಾಷ್ಟ್ರೀಯ ಕರೆನ್ಸಿಯಾಗಿದೆ. ಎಲ್ಲಾ ದೇಶಗಳು ಡಾಲರ್ ಖರೀದಿ ಮಾಡುವುದು ಅನಿವಾರ್ಯವಾಗಿದ್ದು, ಅದನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೂ ಅನಿವಾರ್ಯವಾಗಿದೆ. ಹೀಗಾಗಿ, ಅಮೆರಿಕ ಜಗತ್ತಿನ ದೊಡ್ಡಣ್ಣನಾಗಲು ಡಾಲರ್ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಈಗ ಡಾಲರ್​ಗೆ ಸೆಡ್ಡು ಹೊಡೆಯುವಂತೆ ಚೀನಾದ ಯುಆನ್ ಕರೆನ್ಸಿ ಬೆಳೆಯುತ್ತಿರುವುದು ಅಮೆರಿಕವನ್ನು ತಲ್ಲಣಗೊಳಿಸುತ್ತಿರಬಹುದು. ತಾರಾ ಅವರು ಶಂಕಿಸಿರುವುದು ಇದನ್ನೇ.

ಯುಆರ್ ಕರೆನ್ಸಿಯಲ್ಲಿ ವಹಿವಾಟು ನಡೆಸುತ್ತಿರುವ ದೇಶಗಳು ಅಮೆರಿಕದ ಹಿಟ್​ಲಿಸ್ಟ್​ನಲ್ಲಿ ಇರಬಹುದಾ? ಬ್ರೆಜಿಲ್, ಅರ್ಜೆಂಟೀನಾ ಇಂಡೋನೇಷ್ಯಾ, ಮಯನ್ಮಾರ್, ಪಾಕಿಸ್ತಾನ ಮೊದಲಾದ ಕೆಲ ದೇಶಗಳು ಚೀನಾದೊಂದಿಗಿನ ವ್ಯವಹಾರವನ್ನು ಯುಆನ್​ನಲ್ಲಿ ಡೀಲ್ ಮಾಡುತ್ತವೆ. ಇವುಗಳಲ್ಲೊಂದು ದೇಶವು ಅಮೆರಿಕದ ಮುಂದಿನ ಟಾರ್ಗೆಟ್ ಆಗಬಹುದಾ?

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!