AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್

ಬರೋಬ್ಬರಿ 209 ಎಸೆತಗಳು ಬಾಕಿ… ಹೀನಾಯ ಸೋಲುಂಡ ಪಾಕಿಸ್ತಾನ್

ಝಾಹಿರ್ ಯೂಸುಫ್
|

Updated on: Mar 12, 2026 | 7:37 AM

Share

Pakistan vs Bangladesh: ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಬಾಂಗ್ಲಾದೇಶದ ವೇಗಿ ನಹೀದ್ ರಾಣಾ 24 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರೆ, ಮತ್ತೊಂದೆಡೆ ತಂಝಿದ್ ಹಸನ್ ಕೇವಲ 42 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಅತ್ಯಂತ ಹೀನಾಯ ಸೋಲನುಭವಿಸಿದೆ. ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ  ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 30.4 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಕೇವಲ 15.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಅಂದರೆ ಬರೋಬ್ಬರಿ 209 ಎಸೆತಗಳನ್ನು ಬಾಕಿಯಿಸಿ ಬಾಂಗ್ಲಾ ಪಡೆ ಏಕದಿನ ಪಂದ್ಯ ಗೆದ್ದುಕೊಂಡಿದೆ.  ಇದು ಎಸೆತಗಳ ಆಧಾರದ ಮೇಲೆ (209 ಎಸೆತಗಳು ಬಾಕಿ) ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ್ ತಂಡದ  ಇದುವರೆಗಿನ ಅತಿದೊಡ್ಡ ಏಕದಿನ ಗೆಲುವಾಗಿದೆ.

ಹಾಗೆಯೇ ಪಾಕಿಸ್ತಾನ ತಂಡವು ಬಾಂಗ್ಲಾದೇಶ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ (114 ರನ್) ಕೂಡ ಇದಾಗಿದೆ.

ಇನ್ನು ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಬಾಂಗ್ಲಾದೇಶದ ವೇಗಿ ನಹೀದ್ ರಾಣಾ 24 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರೆ, ಮತ್ತೊಂದೆಡೆ ತಂಝಿದ್ ಹಸನ್ ಕೇವಲ 42 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪಾಕಿಸ್ತಾನ್ ತಂಡವು ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಅತ್ಯಂತ ಹೀನಾಯ ಸೋಲುಂಡು ಭಾರೀ ಮುಖಭಂಗ ಅನುಭವಿಸಿದೆ.

 

Follow Us