AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

Indonesia Inks $200-$350 Million Deal To Buy BrahMos Missiles From India Amid Defence Boost: ಭಾರತ ಮತ್ತು ರಷ್ಯಾದ ಜಂಟಿ ನಿರ್ಮಾಣದ ಬ್ರಹ್ಮೋಸ್ ಕ್ಷಿಪಣಿಗಳನ್ನು ಇಂಡೋನೇಷ್ಯಾ ಖರೀದಿಸುತ್ತಿದೆ. 200ರಿಂದ 350 ಮಿಲಿಯನ್ ಡಾಲರ್ ಮೊತ್ತದ ಡೀಲ್ ಅನ್ನು ಇಂಡೋನೇಷ್ಯಾ ಮಾಡಿಕೊಂಡಿದೆ. ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿ ಬಹಳ ನಿಖರ ದಾಳಿಗೆ ಹೆಸರುವಾಸಿಯಾಗಿದೆ. ಪಾಕಿಸ್ತಾನ ವಿರುದ್ಧದ ಆಪರೇಷ್ ಸಿಂದೂರ್​ನಲ್ಲಿ ಇದು ಮಹತ್ವದ ಪಾತ್ರ ಹೊಂದಿತ್ತು.

ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್
ಬ್ರಹ್ಮೋಸ್ ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 09, 2026 | 6:35 PM

Share

ನವದೆಹಲಿ, ಮಾರ್ಚ್ 9: ಭಾರತದ ಬತ್ತಳಿಕೆಯಲ್ಲಿರುವ ಯುದ್ಧಾಸ್ತ್ರಗಳಲ್ಲಿ ಪ್ರಮುಖವಾಗಿರುವ ಬ್ರಹ್ಮೋಸ್ ಮಿಸೈಲ್ ಸಿಸ್ಟಂ (Brahmos missile system) ಅನ್ನು ಖರೀದಿಸಲು ಇಂಡೋನೇಷ್ಯಾ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರಾದ ರಿಕೋ ರಿಕಾರ್ಡೊ ಸಿರಾಯ್ಟ್ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. 2023ರಲ್ಲೇ ಭಾರತ ಮತ್ತು ಇಂಡೋನೇಷ್ಯಾ ನಡುವೆ ಈ ಒಪ್ಪಂದ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿತ್ತು. ಈ ಡೀಲ್ ಸುಮಾರು 200 ಮಿಲಿಯನ್ ಡಾಲರ್​ನಿಂದ 350 ಮಿಲಿಯನ್ ಡಾಲರ್ ಇರಬಹುದು. ಅಂದರೆ ಸುಮಾರು 2,000 ಕೋಟಿ ರೂ ಮೊತ್ತದ ಡೀಲ್ ಇದಾಗಿರಬಹುದು.

ಆದರೆ, ಒಪ್ಪಂದದ ಸ್ವರೂಪ ಏನು ಎಂಬುದು ಗೊತ್ತಾಗಿಲ್ಲ. ಇಂಡೋನೇಷ್ಯಾದ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ತಮ್ಮ ಮಿಲಿಟರಿ ಹಾರ್ಡ್​ವೇರ್​ನ ಆಧುನೀಕರಣ ಹಾಗೂ ರಕ್ಷಣಾ ಸಾಮರ್ಥ್ಯ ಬಲಪಡಿಸಲು ಈ ಒಪ್ಪಂದವನ್ನು ಬಳಸಲಾಗಿದೆ. ಆದರೆ, ಅವರು ಈ ಡೀಲ್​ನ ಒಟ್ಟು ಮೊತ್ತವೆಷ್ಟು ಎಂದು ನಿಖರ ಡಾಟಾ ಕೊಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್​ನಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಜಗಜ್ಜಾಹೀರಾಗಿತ್ತು. ಭಾರತದ ಡಿಆರ್​ಡಿಒ ಮತ್ತು ರಷ್ಯಾದ ಎನ್​ಪಿಒ ಮಷಿನೋಸ್​ಟ್ರೋಯೇನಿಯಾ ಕಂಪನಿಗಳು ಜಂಟಿಯಾಗಿ ಸೇರಿ ಬ್ರಹ್ಮೋಸ್ ಏರೋಸ್ಪೇಸ್ ಎನ್ನುವ ಸಂಸ್ಥೆ ಹುಟ್ಟುಹಾಕಿವೆ. ಬ್ರಹ್ಮೋಸ್ ಹೆಸರಿನಲ್ಲಿ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕವಾ ನದಿಗಳ ಹೆಸರಿವೆ.

ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ವಿಶ್ವದ ಅನೇಕ ದೇಶಗಳು ಆಸಕ್ತವಾಗಿವೆ. 2022ರಲ್ಲಿ ಫಿಲಿಪ್ಪೈನ್ಸ್ ದೇಶವು ಬ್ರಹ್ಮೋಸ್ ಖರೀದಿಗೆ ಡೀಲ್ ಮಾಡಿಕೊಂಡಿತ್ತು. ಇದೀಗ ಇಂಡೋನೇಷ್ಯಾದಿಂದ ಒಪ್ಪಂದ ಆಗಿದೆ.

ಬ್ರಹ್ಮೋಸ್ ಕ್ಷಿಪಣಿಯನ್ನು ಹಡಗು, ಸಬ್​ಮರೀನ್, ಮೊಬೈಲ್ ಲಾಂಚರ್ಸ್ ಹಾಗೂ ಫೈಟರ್ ಜೆಟ್​ಗಳಿಂದ ಹಾರಿಬಿಡಬಹುದು. ಇದಕ್ಕೆ ಗುರಿ ನಿಗದಿ ಮಾಡಿ ಬಿಟ್ಟರೆ ಸಾಕು ಬಹಳ ನಿಖರವಾಗಿ ಗುರಿಯನ್ನು ಹೊಡೆದು ಹಾಕುತ್ತದೆ.

ಇದನ್ನೂ ಓದಿ: ಬಹರೇನ್​ನ ಅಮೆರಿಕನ್ ಫಿಫ್ತ್ ಫ್ಲೀಟ್ ಮೇಲೆ ಇರಾನ್ ದಾಳಿ; 21 ಸೈನಿಕರ ಹತ್ಯೆ

ಈ ಕ್ಷಿಪಣಿಯ ದೂರ ಶ್ರೇಣಿ ಮೂಲತಃ 290 ಕಿಮೀ ಇದೆ. ಇದನ್ನು 800 ಕಿಮೀವರೆಗೂ ವಿಸ್ತರಿಸುವ ಅವಕಾಶ ಇರುತ್ತದೆ. ರಾಡಾರ್ ಕಣ್ಣಿಂದ ತಪ್ಪಿಸಿಕೊಳ್ಳಲು ಇದು ಸಮುದ್ರದ ನೀರಿನಿಂದ ಕೇವಲ 3-10 ಮೀಟರ್ ಎತ್ತರದಲ್ಲಿ ತೂರಿ ಹೋಗಬಲ್ಲುದು. 15 ಕಿಮೀ ಎತ್ತರದಲ್ಲೂ ಇದು ಹೋಗಬಹುದು.

ಬ್ರಹ್ಮೋಸ್ ಕ್ಷಿಪಣಿಯ ವೇಗ ಮ್ಯಾಕ್ 3 ಇದೆ. ಅಂದರೆ ಶಬ್ದಕ್ಕಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಇದು ಕ್ರಮಿಸಬಲ್ಲುದು. ಎರಡನೇ ಆವೃತ್ತಿಯ ಬ್ರಹ್ಮೋಸ್ ತಯಾರಿಕೆ ನಡೆದಿದ್ದು ಇದು ಮ್ಯಾಕ್ 8 ವೇಗದಲ್ಲಿ ಸಾಗಬಲ್ಲುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!