AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: 20ನೇ ವಯಸ್ಸಿನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಾಕ್ಸರ್ ಪ್ರಿಯಾ ಘಾಂಗ್ಹಾಸ್

Commonwealth Games 2026: 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಅದ್ಭುತ ಸಾಧನೆ ಮಾಡಿದ್ದಾರೆ, ಇದುವರೆಗೆ 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 60 ಕೆಜಿ ವಿಭಾಗದಲ್ಲಿ ಪ್ರಿಯಾ ಘಾಂಗ್ಹಾಸ್ ಚಿನ್ನ ಗೆಲ್ಲುವ ಮೂಲಕ ದೇಶದ ಯಶಸ್ವಿ ಬಾಕ್ಸಿಂಗ್ ಅಭಿಯಾನ ಮುಂದುವರೆಸಿದ್ದಾರೆ. ಕೇವಲ 20 ವರ್ಷದ ಪ್ರಿಯಾ ಕೆನಡಾದ ಎದುರಾಳಿಯನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು, ಇದು ಭಾರತದ ಬಾಕ್ಸಿಂಗ್ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಪೃಥ್ವಿಶಂಕರ
|

Updated on: Aug 01, 2026 | 10:40 PM

Share
2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳ ಅಬ್ಬರ ಜೋರಾಗಿದೆ. ವಿವಿಧ ವಿಭಾಗಗಳಲ್ಲಿ ಇದುವರೆಗೆ ಭಾರತದ ಮಹಿಳಾ ಮಣಿಯರು 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ 60 ಕೆಜಿ ವಿಭಾಗದಲ್ಲಿ ಭಾರತದ ಉದಯೋನ್ಮುಖ ಬಾಕ್ಸರ್ ಪ್ರಿಯಾ ಘಾಂಗ್ಹಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಯಶಸ್ವಿ ಬಾಕ್ಸಿಂಗ್ ಅಭಿಯಾನವನ್ನು ಮುಂದುವರೆಸಿದ್ದಾರೆ(PC-PTI).

1 / 5
ಕೇವಲ 20 ವರ್ಷ ವಯಸ್ಸಿನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕೆನಡಾದ ಮೇರಿ ಬಾಥೋಲ್ ಅಲ್ ಅಹ್ಮದಿಯಾರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ. ಪ್ರಿಯಾ ಫೈನಲ್‌ನಲ್ಲಿ ಕೆನಡಾದ ಬಾಕ್ಸರ್​ನನ್ನು 4-1 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದರು(PC-PTI).

2 / 5
ಈ ಬಾಕ್ಸಿಂಗ್ ಫೈನಲ್‌ನಲ್ಲಿ ಪ್ರಿಯಾ ಮತ್ತು ಕೆನಡಾದ ಬಾಕ್ಸರ್ ನಡುವೆ ತೀವ್ರ ಪೈಪೋಟಿ ಇತ್ತು. ಮೊದಲ ಸುತ್ತಿನಲ್ಲಿ, ಅಲ್ ಅಹ್ಮದಿಯ 3-2 ಅಂತರದಿದ ಮುನ್ನಡೆ ಸಾಧಿಸಿದ್ದರು. ಆದಾಗ್ಯೂ, ಪ್ರಿಯಾ ಮುಂದಿನ ಸುತ್ತಿನಲ್ಲಿ ಬಲವಾದ ಪುನರಾಗಮನ ಮಾಡಿ, 4-1 ಅಂತರದಲ್ಲಿ ಗೆದ್ದು ಪಂದ್ಯವನ್ನು ತನ್ನ ಪರವಾಗಿ ತಿರುಗಿಸಿಕೊಂಡರು. ಮೂರನೇ ಸುತ್ತು ಅಷ್ಟೇ ತೀವ್ರವಾಗಿತ್ತಾದರೂ, ಅಂತಿಮವಾಗಿ, ಯುವ ಭಾರತೀಯ ಬಾಕ್ಸರ್ ಪರವಾಗಿ 4-1 ಅಂತರದ ತೀರ್ಪು ಬಂದಿತು(PC-PTI).

3 / 5
ಪ್ರಿಯಾ ಪ್ರಸ್ತುತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ನಾಲ್ಕನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಪ್ರಿಯಾ ಗೆದ್ದ ಚಿನ್ನದ ಪದಕ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಒಂದೇ ಕ್ರೀಡಾಕೂಟದಲ್ಲಿ ಭಾರತ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿಯಿತು(PC-PTI).

4 / 5
ಹರಿಯಾಣದ ಭಿವಾನಿ ಜಿಲ್ಲೆಯವರಾದ ಪ್ರಿಯಾ ಅವರ ತಂದೆ ಕೂಡ ಕಬಡ್ಡಿ ಆಟಗಾರರಾಗಿದ್ದರು. ಆದರೆ ಅವರು ತಮ್ಮ ಮಗಳನ್ನು ಬಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು. ಇದಕ್ಕೆ ಕಾರಣ ಅವರ ಹಳ್ಳಿಯಿಂದ ಅನೇಕ ಬಾಕ್ಸರ್‌ಗಳು ಭಾರತವನ್ನು ಪ್ರತಿನಿಧಿಸಿದ್ದರು. ಪ್ರಿಯಾ ತನ್ನ ಆರಂಭಿಕ ತರಬೇತಿಯನ್ನು ಪ್ರಸಿದ್ಧ ಭಿವಾನಿ ತರಬೇತುದಾರ ರವಿ ಸಂಗ್ವಾನ್ ಅವರಿಂದ ಪಡೆದರು. ನಂತರ ಅವರು ಭಿವಾನಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಬಾಕ್ಸಿಂಗ್ ಅಕಾಡೆಮಿಯಲ್ಲಿ ತರಬೇತಿ ನಡೆಸಿ ಇದೀಗ ಚಿನ್ನ ಗೆದ್ದಿದ್ದಾರೆ(PC-PTI).

5 / 5
Follow Us