AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡ್ತಿದೆ’: ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಡಿಕೆಶಿ ಮನವಿ

‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡ್ತಿದೆ’: ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಡಿಕೆಶಿ ಮನವಿ

ರಾಮ್​, ಮೈಸೂರು
| Edited By: |

Updated on: Aug 01, 2026 | 7:06 PM

Share

ಮುಖ್ಯಾಂಶಗಳು

  • ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ
  • ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದ ಸಿಎಂ ಡಿಕೆ ಶಿವಕುಮಾರ್​
  • ಇಡೀ ಸರ್ಕಾರ ಆಶ್ರಮದ ಶ್ರೀಗಳ ಪರವಾಗಿ ನಿಲ್ಲುತ್ತದೆ ಎಂದ ಸಿಎಂ

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯುವ ಶಕ್ತಿ, ಸ್ವಾಮಿ ವಿವೇಕಾನಂದರ ಆದರ್ಶಗಳು ಹಾಗೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದ ಅವರು, ಕರ್ನಾಟಕವನ್ನು ವಿಶ್ವಮಟ್ಟದಲ್ಲಿ ಗುರುತಿಸಲು ಯುವಕರ ಪಾತ್ರವನ್ನು ಒತ್ತಿ ಹೇಳಿದರು. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಅಭಿವೃದ್ಧಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಮೈಸೂರು, ಆಗಸ್ಟ್​ 01: ‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡುತ್ತಿದೆ. ಹಾಗಾಗಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ’ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು. ​ಇಂದು ಮೈಸೂರಿನಲ್ಲಿ ನಡೆದ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಯುವಕರ ಕನಸು ದೇಶದ ಕನಸಾಗಿದೆ. ವಿವೇಕಾನಂದರ ಯೋಚನೆಗಳನ್ನ ನಮ್ಮ ಸರ್ಕಾರ ಪಾಲಿಸುತ್ತೆ. ಇಡೀ ವಿಶ್ವವೇ ಇಂದು ಕರ್ನಾಟಕವನ್ನ ಗಮನಿಸುತ್ತಿದೆ. ಹಳ್ಳಿ, ನಗರಗಳಲ್ಲಿ ಯುವಶಕ್ತಿ ಸರಿಯಾಗಿ ಬಳಸಿಕೊಳ್ಳಬೇಕು, ಹಾಗಾಗಿ ಕೆಲ ಯೋಜನೆಗಳನ್ನ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us