CWG 2026: ದಿಗ್ಗಜರನ್ನು ಮಣಿಸಿ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಅರುಂಧತಿ ಚೌಧರಿ
Commonwealth Games 2026: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅರುಂಧತಿ ಚೌಧರಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ. 70 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್‌ನ ಚಾಂಟೆಲ್ಲೆ ರೀಡ್ ಅವರನ್ನು ಸೋಲಿಸಿ, ರಾಜಸ್ಥಾನದಿಂದ ಕಾಮನ್‌ವೆಲ್ತ್ ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡರು. ಇದು ಭಾರತಕ್ಕೆ 5ನೇ ಬಾಕ್ಸಿಂಗ್ ಚಿನ್ನವಾಗಿದ್ದು, ಅದೇ ದಿನ ಇತರ ನಾಲ್ವರು ಮಹಿಳಾ ಬಾಕ್ಸರ್‌ಗಳು ಕೂಡ ಬಂಗಾರ ಗೆದ್ದಿದ್ದಾರೆ.
Updated on: Aug 01, 2026 | 11:05 PM

2026 ರ ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನದಂದು ಬಾಕ್ಸಿಂಗ್ ಒಂದರಲ್ಲೇ ಭಾರತ ತನ್ನ ಐದನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಮಹಿಳೆಯರ 70 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಅರುಂಧತಿ ಚೌಧರಿ ಇಂಗ್ಲೆಂಡ್‌ನ ಚಾಂಟೆಲ್ಲೆ ರೀಡ್ ಅವರನ್ನು ಸೋಲಿಸುವ ಮೂಲಕ ಏಕಪಕ್ಷೀಯ ರೀತಿಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು(PC-PTI).

ಮೂರು ಸುತ್ತುಗಳಲ್ಲಿಯೂ ಇಂಗ್ಲಿಷ್ ಆಟಗಾರ್ತಿಯನ್ನು ಸೋಲಿಸುವ ಮೂಲಕ ಅರುಂಧತಿ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ರಾಜಸ್ಥಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅರುಂಧತಿ ಪಾತ್ರರಾದರು(PC-PTI).

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅರುಂಧತಿ ಚೌಧರಿ ಅವರ ಪ್ರಯಾಣವನ್ನು ನೋಡುವುದಾದರೆ.. ಕ್ವಾರ್ಟರ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಮಾರ್ಗನ್ ಹೆಂಡರ್ಸನ್ ಅವರನ್ನು ಸೋಲಿಸಿದ್ದ ಅರುಂಧತಿ ಸೆಮಿಫೈನಲ್‌ನಲ್ಲಿ ಹಿಂದಿನ ಕಾಮನ್ವೆಲ್ತ್ ಚಾಂಪಿಯನ್ ವೇಲ್ಸ್‌ನ ರೋಸಿ ಎಕ್ಲೆಸ್ ಅವರನ್ನು ಮಣಿಸಿದ್ದರು. ಈಗ, ಫೈನಲ್‌ನಲ್ಲಿ, ಅವರು ಇಂಗ್ಲೆಂಡ್‌ನ ಬಾಕ್ಸರ್ ಚಾಂಟೆಲ್ಲೆ ಅವರನ್ನು ಸೋಲಿಸುವ ಮೂಲಕ ಚಿನ್ನ ಗೆದಿದ್ದಾರೆ(PC-PTI).

ರಾಜಸ್ಥಾನದ ಕೋಟಾದಲ್ಲಿ ಜನಿಸಿದ ಅರುಂಧತಿ ಚೌಧರಿ ಪ್ರಸ್ತುತ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದಾರೆ. ಅವರ ತಂದೆ ಸುರೇಶ್ ಚೌಧರಿ ಅವರಿಗೆ ಮಗಳನ್ನು ಐಐಟಿಗೆ ಕಳುಹಿಸಬೇಕೆಂಬ ಬಯಕೆ ಇತ್ತು. ಆದಾಗ್ಯೂ, ಅರುಂಧತಿ ಅವರಿಗೆ ಕ್ರೀಡೆಯ ಮೇಲೆ ಹೆಚ್ಚು ಒಲವಿತ್ತು. ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದ ಅರುಂಧತಿ ತಂಡದ ನಾಯಕಿಯೂ ಆಗಿದ್ದರು, ಆದರೆ 15 ನೇ ವಯಸ್ಸಿನಲ್ಲಿ, ಅವರು ಬಾಕ್ಸಿಂಗ್ ಆಡಲು ಶುರು ಮಾಡಿದರು. ಇದೀಗ ದೇಶಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರ ಗೆದ್ದುಕೊಟ್ಟಿದ್ದಾರೆ(PC-PTI).

ಕ್ರೀಡಾಕೂಟದ 10ನೇ ದಿನದಂದು ಭಾರತೀಯ ಮಹಿಳಾ ಬಾಕ್ಸರ್‌ಗಳು ಚಿನ್ನದ ಪದಕಗಳ ಸುರಿಮಳೆಗೈದಿದ್ದಾರೆ. ಅರುಂಧತಿ ಚೌಧರಿ ಜೊತೆಗೆ, ಸಾಕ್ಷಿ ಚೌಧರಿ 51 ಕೆಜಿ ವಿಭಾಗದಲ್ಲಿ ಮತ್ತು ಪ್ರೀತಿ ಪವಾರ್ 54 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರು. ಹಾಗೆಯೇ ಜಾಸ್ಮಿನ್ ಲಂಬೋರಿಯಾ 57 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ಪ್ರಿಯಾ ಘಂಗಾಸ್ ಕೂಡ 60 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರು(PC-PTI).




