AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಣ್ಣು ಕೊಟ್ಟದ್ದಕ್ಕೆ ಫ್ರೂಟ್ಸ್ ಕಾರ್ಟ್ ಓನರ್‌ಗೆ ಥ್ಯಾಂಕ್ಸ್ ಹೇಳಿದ ಗಜರಾಜ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ರಸ್ತೆಬದಿಯಲ್ಲಿದ್ದ ಫ್ರೆಶ್ ಫ್ರೂಟ್ಸ್ ಕಾರ್ಟ್ ಮಾಲೀಕನಿಂದ ಹಣ್ಣು ಪಡೆದ ಆನೆಯು ಸೊಂಡಿಲೆತ್ತಿ ಕೃತಜ್ಞತೆ ಸಲ್ಲಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹಣ್ಣು ಕೊಟ್ಟದ್ದಕ್ಕೆ ಫ್ರೂಟ್ಸ್ ಕಾರ್ಟ್ ಓನರ್‌ಗೆ ಥ್ಯಾಂಕ್ಸ್ ಹೇಳಿದ ಗಜರಾಜ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 23, 2026 | 1:07 PM

Share

ಆನೆಗಳ ಆಟ ತುಂಟಾಟ ನೋಡುವುದೇ ಚಂದ. ಎಲ್ಲರಿಗೂ ತಿಳಿದಿರುವಂತೆ ಈ ಆನೆಗಳು (elephants) ಭಾವನಾತ್ಮಕ ಜೀವಿಗಳು. ಹೀಗಾಗಿ ಈ ಆನೆಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಇದೀಗ ಆನೆಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಫ್ರೆಶ್ ಫ್ರೂಟ್ಸ್ ಕಾರ್ಟ್ ಮಾಲೀಕನ ಜತೆಗೆ ಹಣ್ಣು ಕೊಡುವಂತೆ ಹಠ ಹಿಡಿದಿದೆ. ಕಲ್ಲಂಗಡಿ ಹಣ್ಣು ಕೊಟ್ಟ ತಕ್ಷಣ ಫ್ರೂಟ್ಸ್ ಶಾಪ್  ಓನರ್ ಗೆ ಮುದ್ದಾಗಿ ರಿಯಾಕ್ಷನ್ ಕೊಟ್ಟಿದೆ. ಈ ಆನೆಯ ಕ್ಯೂಟ್ ನೆಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಹಣ್ಣು ಕೊಟ್ಟದ್ದಕ್ಕೆ ಥ್ಯಾಂಕ್ಸ್ ಹೇಳಿದ ಗಜರಾಜ

ನೋಕೆಜನ್ (nokzen) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆನೆಯೊಂದು ರಸ್ತೆ ಬದಿಯಲ್ಲಿದ್ದ ನಿಂತಿದ್ದ ಫ್ರೆಶ್ ಫ್ರೂಟ್ಸ್ ಕಾರ್ಟ್ ನ್ನು ನೋಡಿದೆ. ಶಾಪ್ ಹತ್ರ ಬಂದ ಗಜರಾಜನು ಹಣ್ಣು ಕೊಡುವಂತೆ ಓನರ್ ಬಳಿ ಹಠ ಹಿಡಿದಿದೆ. ಮಾಲೀಕ ಫ್ರೂಟ್ಸ್ ಕೊಟ್ಟ ತಕ್ಷಣ ಆನೆ ತನ್ನ ಸೊಂಡಿಲನ್ನು ಮೇಲಕ್ಕೆತ್ತಿ ಅಂಗಡಿ ಮಾಲೀಕನಿಗೆ ಥ್ಯಾಂಕ್ಸ್ ಹೇಳುವಂತೆ ಸನ್ನೆ ಮಾಡಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

View this post on Instagram

A post shared by Nokz (@nokzen26)

ಇದನ್ನೂ ಓದಿ: ಮಹಿಳೆಯ ಮುಖಕ್ಕೆ ನೀರು ಎರಚಿ ತುಂಟಾಟ ಆಡಿದ ಮರಿಯಾನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಆಗಿದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಬುದ್ಧಿವಂತ ಈ ಆನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಗಜರಾಜ ತುಂಬಾ ಬುದ್ಧಿವಂತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More