AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ 2026: ಭಾರತಕ್ಕೆ ನಿರಾಸೆ, ಪ್ರಶಸ್ತಿ ರೇಸ್‌ನಿಂದ ಹೊರಕ್ಕೆ

ನ್ಯೂಯಾರ್ಕ್‌ನಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ. ಹಾಸ್ಯ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ವೀರ್ ದಾಸ್ ಹಾಗೂ ಅತ್ಯುತ್ತಮ ಡ್ರಾಮಾ ಸರಣಿ ವಿಭಾಗದಲ್ಲಿದ್ದ ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿವೆ. ಸಮಾರಂಭದಲ್ಲಿ ನಟ ವಿಜಯ್ ಸೇತುಪತಿ ಪ್ರೆಸೆಂಟರ್ ಆಗಿ ಮಿಂಚಿದರು.

ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ 2026: ಭಾರತಕ್ಕೆ ನಿರಾಸೆ, ಪ್ರಶಸ್ತಿ ರೇಸ್‌ನಿಂದ ಹೊರಕ್ಕೆ
ಆ್ಯಮಿ ಅವಾರ್ಡ್ಸ್
ರಾಜೇಶ್ ದುಗ್ಗುಮನೆ
|

Updated on: Nov 24, 2026 | 12:30 PM

Share

ಮುಖ್ಯಾಂಶಗಳು

  • ವೀರ್ ದಾಸ್ ಎರಡನೇ ಆ್ಯಮಿ ಕನಸಿಗೆ ತಣ್ಣೀರು
  • ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ 'ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್'
  • ಆ್ಯಮಿ ರೆಡ್ ಕಾರ್ಪೆಟ್‌ನಲ್ಲಿ ನಟ ವಿಜಯ್ ಸೇತುಪತಿ ಮಿಂಚು

ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ವೇದಿಕೆಯಲ್ಲಿ ಈ ಬಾರಿ ಭಾರತಕ್ಕೆ ನಿರಾಸೆ ಎದುರಾಗಿದೆ. ಪ್ರತಿಷ್ಠಿತ ಪ್ರಶಸ್ತಿಗಾಗಿ ದೇಶದಿಂದ ಎರಡು ಪ್ರಮುಖ ಕೃತಿಗಳು ನಾಮನಿರ್ದೇಶನಗೊಂಡಿದ್ದವು. ಆದರೆ ಯಾವುದಕ್ಕೂ ಪ್ರಶಸ್ತಿ ಒಲಿಯಲಿಲ್ಲ. ಹಾಸ್ಯ ವಿಭಾಗದಲ್ಲಿ ವೀರ್ ದಾಸ್ ಮುಗ್ಗರಿಸಿದರೆ, ಅತ್ಯುತ್ತಮ ಡ್ರಾಮಾ ಸರಣಿ ವಿಭಾಗದಲ್ಲಿ ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ಸೋಲು ಕಂಡಿದೆ. ಈ ಫಲಿತಾಂಶ ಭಾರತೀಯ ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.

ನ್ಯೂಯಾರ್ಕ್‌ನ ಹಿಲ್ಟನ್ ಮಿಡ್‌ಟೌನ್‌ನಲ್ಲಿ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ನಟ ಮೈಕೆಲ್ ಯೂರಿ ಈ ಕಾರ್ಯಕ್ರಮವನ್ನು ನಿರೂಪಿಸಿದರು. ನೆಟ್‌ಫ್ಲಿಕ್ಸ್‌ನ ‘ವೀರ್ ದಾಸ್: ಫೂಲ್ ವಾಲ್ಯೂಮ್’ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗೆ ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತು. ಆದರೆ ಅರ್ಜೆಂಟೀನಾದ ‘ಡಿವಿಷನ್ ಪಲೆರ್ಮೊ – ಸೀಸನ್ 2’ ಈ ಪ್ರಶಸ್ತಿಯನ್ನು ಬಾಚಿಕೊಂಡಿತು. 2023ರಲ್ಲಿ ‘ಲ್ಯಾಂಡಿಂಗ್’ ಶೋಗಾಗಿ ವೀರ್ ದಾಸ್ ಆ್ಯಮಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದರು.

ಸೋನಿ ಲಿವ್ ಒಟಿಟಿಯ ‘ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್’ ಸರಣಿಯು ಡ್ರಾಮಾ ವಿಭಾಗದಲ್ಲಿ ಸ್ಪರ್ಧಿಸಿತ್ತು. ಬ್ರಿಟನ್, ಫ್ರಾನ್ಸ್ ಹಾಗೂ ಅರ್ಜೆಂಟೀನಾದ ಸರಣಿಗಳ ಜೊತೆ ಇದು ಪೈಪೋಟಿ ನಡೆಸಿತ್ತು. ಅಂತಿಮವಾಗಿ ಫ್ರಾನ್ಸ್‌ನ ‘ಕ್ಯಾರೆಮ್’ ಸರಣಿ ಪ್ರಶಸ್ತಿ ಗೆದ್ದುಕೊಂಡಿತು. ಮಹೇಶ್ ಮಥಾಯ್ ಮತ್ತು ರಾಜೇಶ್ ಮಾಪುಸ್ಕರ್ ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಮಾನವ್ ಕೌಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮೊದಲ ವೃತ್ತಿಪರ ಫುಟ್ಬಾಲ್ ತಂಡ ಕಟ್ಟಿದ ನೈಜ ಕಥೆಯನ್ನು ಈ ಸರಣಿ ಹೊಂದಿದೆ. ಪತ್ರಕರ್ತ ಸೊಹೈಲ್ ಮತ್ತು ಉದ್ಯಮಿ ಶಿಶಿರ್ ಸೇರಿ ತಂಡ ಕಟ್ಟಲು ಪಡುವ ಕಷ್ಟಗಳನ್ನು ಇಲ್ಲಿ ತೋರಿಸಲಾಗಿದೆ. ಈ ಬಗ್ಗೆ ಮಾತನಾಡಿದ್ದ ನಟ ಮಾನವ್ ಕೌಲ್, ‘ನಾಮನಿರ್ದೇಶನವೇ ಭಾರತಕ್ಕೆ ದೊಡ್ಡ ಗೆಲುವು. ಈ ಸರಣಿಗೆ ಸಿಗಬೇಕಾದಷ್ಟು ಮನ್ನಣೆ ಸಿಕ್ಕಿರಲಿಲ್ಲ. ಆ್ಯಮಿ ನಾಮನಿರ್ದೇಶನದಿಂದ ಹೆಚ್ಚಿನ ಜನರಿಗೆ ಇದು ತಲುಪಲಿದೆ’ ಎಂದು ಅವರು ಆಶಿಸಿದ್ದರು.

ಇದನ್ನೂ ಓದಿ: ಇಂಟರ್ನ್ಯಾಷನಲ್ ಆ್ಯಮಿ ಪ್ರಶಸ್ತಿ ಪ್ರದಾನ ಮಾಡಲಿರುವ ವಿಜಯ್ ಸೇತುಪತಿ: ನ್ಯೂಯಾರ್ಕ್‌ನಲ್ಲಿ ಭಾರತದ ಹೊಸ ಇತಿಹಾಸ

ಟೆಲಿವಿಷನ್ ಕ್ಷೇತ್ರದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರತಿ ವರ್ಷ ಆ್ಯಮಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಸಮಾರಂಭದಲ್ಲಿ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ