ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಮದುವೆ? ಆಪ್ತರು ಹೇಳಿದ್ದಿಷ್ಟು
ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇವರಿಬ್ಬರೂ ಇದುವರೆಗೆ ಭೇಟಿಯೇ ಆಗಿಲ್ಲ ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಸಾರಾ ಸದ್ಯ ತಮ್ಮ ವೃತ್ತಿಜೀವನದ ಕಡೆ ಗಮನ ನೀಡಿದ್ದು, 2027ರ ಮದುವೆ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿದುಬಂದಿದೆ.

ಮುಖ್ಯಾಂಶಗಳು
- ವೈರಲ್ ಆಯಿತು ದುಬಾರಿ ಉಡುಗೊರೆ ಮತ್ತು 2027ರ ಮದುವೆ ಸುದ್ದಿ
- ಸಾರಾ ಮತ್ತು ರಾಜ್‌ವೀರ್ ಭೇಟಿಯೇ ಆಗಿಲ್ಲ ಎಂದ ಆಪ್ತ ಮೂಲಗಳು
- ಪೋಷಕರ ಸಂಬಂಧದ ಬಗ್ಗೆ ಸಾರಾ ನೀಡಿದ್ದ ಹೇಳಿಕೆ ನೆನಪು
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಹೀಗಿರುವಾಗಲೇ ಅವರ ಮದುವೆ ಸುದ್ದಿ ಹರಿದಾಡಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಡಿಯೋಲ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಇವರಿಬ್ಬರ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಬಗ್ಗೆ ಆಪ್ತ ಮೂಲಗಳು ಸ್ಪಷ್ಟನೆ ನೀಡಿವೆ.
ಸಾರಾ ಮತ್ತು ರಾಜ್‌ವೀರ್ 2027ರಲ್ಲಿ ಮದುವೆಯಾಗಲಿದ್ದಾರೆ ಎಂಬ ಪೋಸ್ಟ್‌ಗಳು ವೈರಲ್ ಆಗಿದ್ದವು. ಸಾರಾಗೆ ರಾಜ್‌ವೀರ್ ದುಬಾರಿ ಉಡುಗೊರೆ ಕಳುಹಿಸುತ್ತಿದ್ದಾರೆ ಎಂದೂ ಹಬ್ಬಿಸಲಾಗಿತ್ತು. ‘ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ. ಸಾರಾ ಸದ್ಯ ಸಿಂಗಲ್ ಆಗಿದ್ದಾರೆ. ತಮ್ಮ ಕೆಲಸದ ಕಡೆ ಗಮನ ಹರಿಸಿದ್ದಾರೆ. ಈ ಸುದ್ದಿ ಅನಗತ್ಯ ಮತ್ತು ಗೊಂದಲ ಮೂಡಿಸುವಂತಿದೆ’ ಎಂದು ಆಪ್ತ ಮೂಲಗಳು ಹೇಳಿವೆ. ಸಾರಾ ಮತ್ತು ರಾಜ್‌ವೀರ್ ಭೇಟಿಯೇ ಆಗಿಲ್ಲ ಎಂದ ಆಪ್ತ ಮೂಲಗಳು ಸ್ಪಷ್ಟಪಡಸಿವೆ.
ಎರಡೂ ಕುಟುಂಬಗಳು ಜನಪ್ರಿಯವಾಗಿರುವ ಕಾರಣ ಈ ಚರ್ಚೆ ಜೋರಾಗಿದೆ. ಸಾರಾ ಅವರು ಸಚಿನ್ ಮತ್ತು ಅಂಜಲಿ ಅವರ ಹಿರಿಯ ಮಗಳು. ರಾಜ್‌ವೀರ್ ಅವರು ಸನ್ನಿ ಡಿಯೋಲ್ ಪುತ್ರ. ಹಿರಿಯ ನಟ ಧರ್ಮೇಂದ್ರ ಅವರ ಮೊಮ್ಮಗ. ಮದುವೆ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಘೋಷಣೆ ಮಾಡಿಲ್ಲ.
ಸಾರಾ ವೈಯಕ್ತಿಕ ಬದುಕಿನ ಬಗ್ಗೆ ಇಂತಹ ವದಂತಿಗಳು ಹೊಸತಲ್ಲ. ಹಿಂದೆಯೂ ಹಲವು ಬಾರಿ ಇಂತಹ ಸುದ್ದಿಗಳು ಹರಿದಾಡಿದ್ದವು. ಅವರ ಹೆಸರು ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಸಾರಾ ಮಾತ್ರ ಇಂತಹ ಗಾಳಿಸುದ್ದಿಗಳಿಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ‘ಸಚಿನ್ ಮತ್ತು ಅಂಜಲಿ ಉತ್ತಮ ಸ್ನೇಹಿತರಂತೆ ಇರುತ್ತಾರೆ. ತಮ್ಮ ಭವಿಷ್ಯದ ಸಂಬಂಧದಲ್ಲೂ ಅಂತಹ ಸ್ನೇಹ ಇರಬೇಕು’ ಎಂದು ಸಾರಾ ಬಯಸಿದ್ದರು.
ಇದನ್ನೂ ಓದಿ: ಸಾರಾ ತೆಂಡೂಲ್ಕರ್ ಕೇಶ ಸೌಂದರ್ಯದ ರಹಸ್ಯ ಏನು ಗೊತ್ತಾ? ಈ ರಸದಲ್ಲಿದೆ ಅದ್ಭುತ ಶಕ್ತಿ
ಒಟ್ಟಿನಲ್ಲಿ ಸಾರಾ ಮತ್ತು ರಾಜ್‌ವೀರ್ ಮದುವೆ ಸುದ್ದಿ ಕೇವಲ ವದಂತಿ ಅಷ್ಟೇ. ಇಬ್ಬರ ನಡುವೆ ಯಾವುದೇ ಪ್ರೀತಿ ಅಥವಾ ಸಂಬಂಧ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 2027ರ ಮದುವೆ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾದಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




