ಸಾರಾ ತೆಂಡೂಲ್ಕರ್ ಕೇಶ ಸೌಂದರ್ಯದ ರಹಸ್ಯ ಏನು ಗೊತ್ತಾ? ಈ ರಸದಲ್ಲಿದೆ ಅದ್ಭುತ ಶಕ್ತಿ
ಈರುಳ್ಳಿ ರಸದ ಎಣ್ಣೆ ವಾಸನೆಯಾದರೂ, ನಮ್ಮ ಕೂದಲ ಬೆಳವಣಿಗೆ ಹಾಗೂ ನೆತ್ತಿಯ ಆರೋಗ್ಯಕ್ಕೆ ಒಳ್ಳೆಯದು. ಕ್ರಿಕೆಟರ್ ಸಚಿನ್ ಅವರ ಮಗಳು ಸಾರಾ ಕೂಡ ಈ ಎಣ್ಣೆಯನ್ನೇ ಬಳಸುತ್ತಾರೆ. ಇದು ಅವರ ಅಮ್ಮ ಹೇಳಿರುವ ಮದ್ದು, ಹಾಗಾಗಿ ದೊಡ್ಡ ಮಟ್ಟದಲ್ಲಿ ಖರ್ಚು ಮಾಡುವ ಬದಕಲು ಇಂತಹ ಎಣ್ಣೆಯನ್ನು ಮನೆಯಲ್ಲೇ ತಯಾರಿಸಬಹುದು. ಈ ಈರುಳ್ಳಿ ಎಣ್ಣೆಯಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರತಿಯೊಬ್ಬ ಮಹಿಳೆಯೂ ತನ್ನ ದೇಹದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮಾಡುತ್ತಾರೆ, ಅದರಲ್ಲೂ ಕೇಶರಾಶಿಯ (haircare) ಬಗ್ಗೆ ಹೆಚ್ಚು ಮಹತ್ವ ನೀಡುತ್ತಾರೆ. ಇನ್ನು ಸೆಬ್ರಿಟಿಗಳಂತೂ ಹೇಳುವುದೇ ಬೇಡ, ಫಿಟ್ನೆಸ್, ಕೂದಲ ಕಾಳಜಿ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರು ಮನೆಮದ್ದು ಅಥವಾ ಅಜ್ಜಿ ಹೇಳಿದ ಮದ್ದುಗಳನ್ನೇ ಉಪಯೋಗಿಸುತ್ತಾರೆ. ಹೌದು ಇದಕ್ಕೆ ಸಾಕ್ಷಿ ಸಾರಾ, ಕ್ರಿಕೆಟ್ ಲೋಕದ ದೇವರು ಎಂದು ಖ್ಯಾತಿ ಪಡೆದಿರುವ ಸಚಿನ್ ತೆಂಡ್ಕೂಲರ್ ಅವರ ಮಗಳು ಸಾರಾ ತೆಂಡ್ಕೂಲರ್ (Sara Tendulkar) ಕೂಡ ಮನೆಯಲ್ಲಿ ಅಮ್ಮ ಮಾಡಿದ ಎಣ್ಣೆಯನ್ನೇ ತಮ್ಮ ಕೂದಲಿಗೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅದರ ವಾಸನೆ ಆಗದಿದ್ದರು, ನಾನು ನನ್ನ ಕೂದಲಿನ ಬೆಳವಣಿಗೆ ಹಾಗೂ ರಕ್ಷಣೆಗಾಗಿ ಅದನ್ನು ಉಪಯೋಗಿಸುತ್ತೇನೆ ಎಂದು ಹೇಳಿದ್ದಾರೆ.
ಈರುಳ್ಳಿ ರಸವನ್ನು ಮತ್ತು ರೋಸ್ಮರಿ ಎಣ್ಣೆಯೊಂದಿಗೆ ಬೆರೆಸಿದ ತೆಂಗಿನ ಎಣ್ಣೆಯನ್ನು ಹಾಕುವಂತೆ ಒತ್ತಾಯಿಸುತ್ತಾರೆ.ನನಗೆ ಅದರ ವಾಸನೆ ಇಷ್ಟವಿಲ್ಲ ಎಂದು ಹೇಳಿದ್ದಾರೆ, ಅಷ್ಟಕ್ಕೂ ಈ ಈರುಳ್ಳಿ ಎಣ್ಣೆಯಲ್ಲಿ ಕೂದಲನ್ನು ಬೆಳಸುವ ಶಕ್ತಿ ಏನಿದೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಇನ್ನು ಈ ಬಗ್ಗೆ ಚರ್ಮರೋಗ ತಜ್ಞೆ ಮತ್ತು ಸೌಂದರ್ಯ ವೈದ್ಯೆ ಡಾ. ಪಲ್ಲವಿ ಸುಲೆ ಅವರು ಇಂಡಿಯಾನ್ ಎಕ್ಸ್ಪ್ರಸ್ಗೆ ಹೇಳಿರುವ ಪ್ರಕಾರ, ಈರುಳ್ಳಿ ರಸವು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಮತ್ತು ನೆತ್ತಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲು ಕಿರುಚೀಲಗಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸಬಹುದು, ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಕೂದಲು ಅಕಾಲಿಕವಾಗಿ ಬೂದುಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.
ಈರುಳ್ಳಿ ರಸದ ಬಗ್ಗೆ ಇನ್ನೊಬ್ಬ ಚರ್ಮರೋಗ ತಜ್ಞೆ ಡಾ. ಮಾನಸಿ ಶಿರೋಲಿಕರ್ ಪ್ರಕಾರ, ಈರುಳ್ಳಿ ರಸದಲ್ಲಿ ಗಂಧಕವೂ ಸಮೃದ್ಧವಾಗಿದೆ. ಕೂದಲು ಮತ್ತು ನೆತ್ತಿಗೆ ಹಾಕಿದಾಗ, ಈರುಳ್ಳಿ ರಸವು ಬಲವಾದ ಮತ್ತು ದಪ್ಪ ಕೂದಲನ್ನು ನೀಡುತ್ತದೆ. ಇದರಿಂದ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಮತ್ತೆ ಬೆಳೆಯಲು ಈರುಳ್ಳಿ ರಸವೇ ಉತ್ತಮ ಎನ್ನುವ ಬಗ್ಗೆ ಎಲ್ಲೂ ಪುರಾವೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಅದರಲ್ಲಿ ಔಷಧಿಯ ಗುಣಗಳು ಇದೆ. ಕೆಲವೊಂದು ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಬಾರಿ ನೆತ್ತಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಕೆಲವು ಜನರಲ್ಲಿ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್ ಮಾಡಿದ್ದೀರಾ? ಮಾಡುವುದು ತುಂಬಾ ಸುಲಭ
ಸುಮಾರು 74% ಜನ ಈ ಪ್ರಯೋಗವನ್ನು ಮಾಡಿ, 4 ವಾರಗಳ ನಂತರ ಸ್ವಲ್ಪ ಕೂದಲು ಮತ್ತೆ ಬೆಳೆದಿದೆ ಎಂದು ಹೇಳಿದ್ದಾರೆ. ಇನ್ನು ಸುಮಾರು 87% ಜನರು 6 ವಾರಗಳಲ್ಲಿ ಕೂದಲು ಮತ್ತೆ ಬೆಳೆದಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಕಂಡುಬರುವ ಕೂದಲು ಉದುರುವಿಕೆ ಟೆಲೋಜೆನ್ ಎಫ್ಲುವಿಯಂ ಅಥವಾ ಆಂಡ್ರೊಜೆನೆಟಿಕ್ ಅಲೋಪೆಸಿಯಾದಿಂದ. ಈ ರೀತಿಯ ಕೂದಲು ಉದುರುವಿಕೆಗೆ ಈರುಳ್ಳಿ ರಸವನ್ನು ಹಾಕಬೇಕು ಎಂದು ಎಲ್ಲಿಯೂ ಹೇಳಿಲ್ಲ. ಡಾ. ಮಾನಸಿ ಅವರು ಹೇಳುವ ಪ್ರಕಾರ, ಈರುಳ್ಳಿ ಸಾರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ನೆತ್ತಿಯ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ನೆತ್ತಿಯು ಬಲವಾದ ಕಿರುಚೀಲಗಳನ್ನು ಹೊಂದಿರುತ್ತದೆ ಮತ್ತು ಈರುಳ್ಳಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಮತ್ತು ನೆತ್ತಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲಿನ ಕಿರುಚೀಲಗಳಿಗೆ ರಕ್ತ ಪೂರೈಕೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








