ಪ್ಲೀಸ್ ನಾನು ನೀನು ಅಣ್ಣ ತಂಗಿಯಂತೆ ಇರೋಣ, ಮದುವೆ ಬೇಡ ಶಾಕ್ ಆದ ವರ
ಕ್ಷುಲ್ಲಕ ಕಾರಣಗಳಿಂದ ಮದುವೆಗಳು ಮುರಿದು ಬಿದ್ದಿರುವ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯೇನೋ ನಡೆದಿದೆ. ಆದರೆ, ಕಾರು ಹತ್ತಿದ ವಧುವು ತನ್ನ ವರಸೆ ಬದಲಾಯಿಸಿದ್ದಾಳೆ. ತನ್ನ ಪತಿಯ ಮುಂದೆ ನಾನು ನೀನು ಅಣ್ಣ ತಂಗಿಯಂತೆ ಇರೋಣ ಎಂದಿದ್ದು, ಈ ಮಾತು ಕೇಳುತ್ತಿದ್ದಂತೆ ವರನು ಶಾಕ್ ಆಗಿದ್ದಾನೆ. ಏನಿದು ಘಟನೆ? ವಧು ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶ, ಮೇ 18: ಮದುವೆ (marriage) ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ಮಾತಿದೆ. ಆದರೆ ಎಷ್ಟೋ ಮದುವೆಗಳು ಕೊನೆ ಕ್ಷಣದಲ್ಲಿ ಮುರಿದು ಬಿದ್ದದ್ದು ಇದೆ. ಅದರಲ್ಲೂ ಕೇವಲ ಊಟ ಉಪಚಾರದ ವಿಚಾರಕ್ಕೆ ಅಥವಾ ವಧು ಅಥವಾ ವರ ಮದುವೆ ಮಂಟಪದಿಂದ ಪರಾರಿಯಾಗಿ ಅದೆಷ್ಟೋ ಮದುವೆಗಳು ಮುರಿದು ಬಿದ್ದದ್ದು ಇದೆ. ಆದರೆ ಇದೀಗ ಮದುವೆಯೇನೋ ಸುಸೂತ್ರವಾಗಿ ನಡೆಸಿದ್ದು, ಗಂಡನ ಮನೆಗೆ ಹೋಗಲು ಕಾರು ಹತ್ತಿದ ವಧು ವರನಿಗೆ ದಾರಿ ಮಧ್ಯದಲ್ಲೇ ಶಾಕ್ ನೀಡಿದ್ದು, ನಮಗೆ ಮದುವೆಯಾಗಿದ್ರೂ, ನಾವಿಬ್ರು ಅಣ್ಣ ತಂಗಿಯಂತೆ ಇರೋಣ ಎಂದಿದ್ದಾಳೆ. ಇದನ್ನೂ ಕೇಳಿದ ವರನು ಆ ಕ್ಷಣವೇ ತನ್ನ ನಿರ್ಧಾರವನ್ನು ಬದಲಾಯಿಸಿದ್ದಾನೆ. ಈ ಘಟನೆಯೂ ಮಧ್ಯಪ್ರದೇಶದ ಸಾಗರ ಜಿಲ್ಲೆ (sagar district of madhyapradesh) ಯಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ ಮದುವಯಾದ ಕೆಲವೇ ಗಂಟೆಯಲ್ಲೇ ಈ ಮದುವೆ ಮುರಿದು ಬಿದ್ದಿದೆ.
ಹೌದು, ಬೋಪಾಲ್ ರಸ್ತೆಯಲ್ಲಿ ರೆಸಾರ್ಟ್ ವೊಂದರಲ್ಲಿ ಸಾಗರ ಜಿಲ್ಲೆಯ ಯುವಕ ಹಾಗೂ ಲಲಿತಾಪುರದ ಯುವತಿಯ ಮದುವೆಯೂ ಅದ್ದೂರಿಯಾಗಿ ನಡೆದಿದೆ. ಮದುವೆಯೂ ಸಡಗರದಿಂದ ನಡೆದು ವಧುವು ತನ್ನ ಗಂಡನ ಮನೆಗೆ ತೆರಳಲು ಕಾರು ಹತ್ತಿದ್ದಾಳೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ವಧುವು ಅಸಲಿ ವಿಚಾರ ತಿಳಿಸಿದ್ದು ಇದುವೇ ಈ ಮದುವೆ ಮುರಿಯಲು ಮುಖ್ಯ ಕಾರಣವಾಗಿದೆ. ನನಗೆ ಈ ಮದುವೆ ಇಷ್ಟವಿಲ್ಲ, ನಾನು ಒಬ್ಬನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನು ಮದುವೆಯಾಗಿದ್ದೇನೊ ನಿಜ, ಆದರೆ ಪತ್ನಿಯಾಗಿ ಸಂಸಾರ ಮಾಡಲು ಸಾಧ್ಯವಿಲ್ಲ.. ನಾವಿಬ್ಬರೂ ಅಣ್ಣ ತಂಗಿಯಂತೆ ಇದ್ದು ಬಿಡೋಣ ಎಂದಿದ್ದಾಳೆ.
ಇದನ್ನೂ ಓದಿ : 5 ಕೋಟಿ ರೂ, ಬಿಎಂಡಬ್ಲ್ಯೂ ಕಾರು ಬೇಕಂತೆ, ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
ಈ ಆಘಾತದಿಂದ ಸುಧಾರಿಸಿಕೊಳ್ಳಲು ಆಗದ ವರನು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾನೆ. ಮಧಮಗನು ಈ ವಿಚಾರವನ್ನು ತನ್ನ ಕುಟುಂಬಕ್ಕೆ ತಿಳಿಸಿ, ಆ ಕ್ಷಣವೇ ಈ ಮದುವೆಯನ್ನು ಮುರಿಯಲು ಮತ್ತೆ ಮದುವೆ ಮಂಟಪದ ಕಡೆಗೆ ಬಂದಿದ್ದಾನೆ. ಹೌದು, ಮದುವೆ ಮಂಟಪದಲ್ಲಿದ್ದ ವಧುವಿನ ಕಡೆಯವರಿಗೆ ಈ ವಿಷಯ ತಿಳಿಸಿ, ವಧುವನ್ನು ಅಲ್ಲೇ ಬಿಟ್ಟು ಮರುಮಾತಾನಾಡದೇ ಅಲ್ಲಿಂದ ವರನು ಹೊರಟು ಹೋಗಿದ್ದಾನೆ. ಆದರೆ ಈ ವಧುವು ಮದುವೆಯಾಗುವವರೆಗೂ ಈ ವಿಚಾರ ಮುಚ್ಚಿಟ್ಟಿದರಿಂದ ವರನ ಆಸೆ ಕನಸುಗಳೆಲ್ಲವೂ ನುಚ್ಚು ನೂರು ಆಗುವಂತಾಗಿದೆ ಎನ್ನುವುದು ನಿಜಕ್ಕೂ ವಿಪರ್ಯಾಸ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








