ಕೇರಳದಿಂದ ಲಡಾಖ್ ವರೆಗೆ : ಕ್ಯಾರವ್ಯಾನ್ ನಲ್ಲಿ ಫ್ಯಾಮಿಲಿ ಜತೆಗೆ ಕೇರಳ ಮಹಿಳೆಯ ಕನಸಿನ ಪಯಣ
ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಕೆಲವರಿಗೆ ತಮ್ಮ ಕುಟುಂಬದೊಂದಿಗೆ ದೇಶ ಸುತ್ತಬೇಕು, ದೇಶದ ಮೂಲೆ ಮೂಲೆಯಲ್ಲಿ ಸ್ಥಳಗಳಿಗೆ ಭೇಟಿ ಕೊಡಬೇಕು ಎನ್ನುವ ಆಸೆಯಿರುತ್ತದೆ. ಇದೀಗ ಕೇರಳದ ಕುಟುಂಬವೊಂದು ಕ್ಯಾರವ್ಯಾನ್ ನಲ್ಲಿ ಲಡಾಖ್ ಗೆ ಪ್ರಯಾಣ ಕೈ ಗೊಂಡಿದ್ದಾರೆ. ಸಾಹಸಮಯ ಪ್ರವೃತ್ತಿಯ ಮಹಿಳೆಯೂ ಕ್ಯಾರವ್ಯಾನ್ ಓಡಿಸುತ್ತಿದ್ದು ತಮ್ಮ ಕನಸಿನ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟ್ರಿಪ್ (trip) ಎಂದರೆ ಯಾರಿಗೇ ಇಷ್ಟ ಹೇಳಿ. ಮಕ್ಕಳಿಗೆ ರಜೆ ಸಿಕ್ಕರೆ ಸಾಕು, ಕುಟುಂಬದೊಂದಿಗೆ ಬೇರೆ ಬೇರೆ ಸ್ಥಳ ಗಳಿಗೆ ಟ್ರಿಪ್ ಗೆ ಹೋಗುವುದನ್ನು ನೋಡಿರಬಹುದು. ಕೆಲ ಸಾಹಸಮಯ ಪ್ರವೃತ್ತಿಯಿರುವವರು ಟ್ರಕ್ಕಿಂಗ್ ಗೆ ಹೋಗಲು ಇಷ್ಟ ಪಡುತ್ತಾರೆ. ಕೆಲವರು ತಮ್ಮ ರೋಚನಕಾರಿ ಟ್ರಿಪ್ ಅನುಭವಗಳನ್ನು ಹಂಚಿಕೊಳ್ಳುವುದನ್ನು ನೋಡುತ್ತೀರಿ. ಆದರೆ ಇದೀಗ ಕೇರಳದ ಮಹಿಳೆಯೊಬ್ಬರು ಕ್ಯಾರವ್ಯಾನ್ (caravan) ಓಡಿಸುತ್ತಾ ತನ್ನ ಕುಟುಂಬದೊಂದಿಗೆ ಕೇರಳ (kerala) ದಿಂದ ಲಡಾಖ್ (ladakh) ನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಧೈರ್ಯವಂತ ಮಹಿಳೆಯೂ ತಮ್ಮ ಕನಸಿನ ಪ್ರಯಾಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಳಕೆದಾರರು ಕುಟುಂಬದ ಈ ಪ್ರಯಾಣ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಥೆಟ್ಟು ಟ್ರಾವೆಲ್ ವ್ಲಾಗ್ ನಲ್ಲಿ ಕ್ಯಾರವ್ಯಾನ್ ಓಡಿಸುತ್ತಿರುವ ಕೇರಳದ ಮಹಿಳೆಯೂ ತನ್ನ ಕುಟುಂಬದ ಜೊತೆಗೆ ಕೇರಳದಿಂದ ಲಡಾಖ್ ವರೆಗಿನ ಪ್ರಯಾಣದ ಬಗ್ಗೆ ಹಂಚಿಕೊಂಡಿರುವುದನ್ನು ಕಾಣಬಹುದು. ನಾವು ಕೇರಳದಿಂದ ಲಡಾಖ್ ಗೆ ನಮ್ಮ ಕನಸಿನ ಪ್ರಯಾಣ ಆರಂಭಿಸಿದ್ದೇವೆ. ಮೂರು ವರ್ಷದ ಮಗು ಸೇರಿದಂತೆ ಏಳು ಜನರು ಈ ಕ್ಯಾರವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದೇವೆ. ಈ ಟ್ರಿಪ್ ನಲ್ಲಿ ಸರಿಸುಮಾರು 18 ರಾಜ್ಯಗಳು ಒಳಗೊಂಡಿದೆ ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದು. ಕಸ್ಟಮ್ ನಿರ್ಮಿತ ಈ ಕ್ಯಾರವ್ಯಾನ್ ನಲ್ಲಿ ಮಲಗಲುಬೇಕಾದ ಹಾಸಿಗೆಗಳು, ಅಡುಗೆಮನೆ, ಬಟ್ಟೆಗಳನ್ನು ನೀಟಾಗಿ ಜೋಡಿಸಲು ಕಪಾಟುಗಳು, ಫ್ರಿಡ್ಜ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ :ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಅದಲ್ಲದೇ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಆರೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೂ ಫ್ಯಾಮಿಲಿ ಜೊತೆಗಿನ ಕನಸಿನ ಪ್ರವಾಸಕ್ಕೆ ಒಳ್ಳೆಯದಾಗಲೀ ಎಂದು ಹೇಳಿದ್ದಾರೆ. ಬಳಕೆದಾರರೊಬ್ಬರು, ‘ಕುಟುಂಬದ ಜೊತೆಗಿನ ಕನಸಿನ ಪ್ರಯಾಣವೂ ಖುಷಿ ಹಾಗೂ ಆರಾಮದಾಯಕವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ಬಸ್ಸಿನ ನಿಜವಾದ ಬೆಲೆ ಎಷ್ಟು? ಕ್ಯಾರವಾನ್ ಆಗಿ ಬದಲಾಗಿಸಲು ಎಷ್ಟು ಖರ್ಚಾಯಿತು’ ಎಂದು ಪ್ರಶ್ನಿಸಿದ್ದಾರೆ. ಇನ್ನೊರ್ವ ಬಳಕೆದಾರರು, ‘ಈ ಟ್ರಿಪ್ ನಿಜಕ್ಕೂ ಅದ್ಬುತವಾಗಿದೆ. ಟ್ರಿಪ್ ಗಾಗಿ ಕ್ಯಾರವಾನ್ ನ್ನು ಹೇಗೆ ಡಿಸೈನ್ ಮಾಡಿದ್ದೀರಿ’ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








