ಈ ಸಲ ಕಪ್ ನಮ್ದೆ, ಈ ಹುಡುಗ ಗುಡ್ ಬ್ಯಾಟ್ಸ್ಮನ್ ಆಗುವ ಲಕ್ಷಣ ಕಾಣುತ್ತಿದೆ
ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಕ್ರಿಕೆಟ್ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲಿಯೂ ಈ ಪುಟಾಣಿ ಮಕ್ಕಳಿಗೆ ಬ್ಯಾಟ್ ಬಾಲ್ ಹಿಡಿದು ಆಡುವುದನ್ನು ನೋಡುವುದೇ ಚಂದ. ಮಕ್ಕಳು ಕ್ರಿಕೆಟ್ ಆಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎರಡೂವರೆ ವರ್ಷದ ಪುಟಾಣಿಯೊಂದು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಪುಟಾಣಿಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಕ್ರಿಕೆಟ್ (cricket) ಅಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಹುಡುಗರಂತೂ ಸಂಜೆ ಕೆಲಸ ಬಿಟ್ಟು ಬಂದು ಇಲ್ಲವಾದರೆ ಶಾಲೆ ಬಿಟ್ಟ ಬಳಿಕ ಗಲ್ಲಿ ಕ್ರಿಕೆಟ್ ಆಡುತ್ತಾ ಸಮಯ ಕಳೆಯುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯ ಕ್ರೀಡಾ ಸ್ಪರ್ಧೆ (local sport competition) ಯ ವೇಳೆ ಪುಟಾಣಿ (little boy) ಯೊಂದು ವೃತ್ತಿಪರ ಆಟಗಾರನಂತೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎರಡೂವರೆ ವರ್ಷದ ಈ ಮಗುವಿಗೆ ಕ್ರಿಕೆಟ್ ಮೇಲಿರುವ ಆಸಕ್ತಿ ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
raya31122022 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಸ್ಥಳೀಯ ಕ್ರೀಡಾ ಸ್ಪರ್ಧೆ ನಡೆಯುತ್ತಿರುವುದು ನೋಡಬಹುದು. ಈ ವೇಳೆಯಲ್ಲಿ ಎರಡೂವರೆ ವರ್ಷದ ಪುಟಾಣಿಯೊಂದು ಬ್ಯಾಟ್ ಕ್ರಿಕೆಟ್ ಆಡಲು ಮುಂದಾಗಿದೆ. ಬಾಲ್ ಬರುತ್ತಿದ್ದಂತೆ ಬ್ಯಾಟ್ ಹಿಡಿದು ಬಾಲ್ ಗೆ ಹೊಡೆದಿದೆ. ಈ ಪುಟಾಣಿ ಬ್ಯಾಟ್ ನಿಂದ ಬಾಲ್ ಗೆ ಬೀಸಿ ಹೊಡೆದದ್ದನ್ನು ನೋಡಿ ಅಲ್ಲೇ ಇದ್ದವರು ಶಾಕ್ ಆಗಿದ್ದು ಖುಷಿಯಿಂದ ಜೋರಾಗಿ ಕಿರುಚುವುದನ್ನು ಕಾಣಬಹುದು.
ಇದನ್ನೂ ಓದಿ : ಕೇಕ್ ಕತ್ತರಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಹಿರಿಜೀವ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಇಪ್ಪತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಪುಟಾಣಿಯೂ ಕ್ರಿಕೆಟ್ ಆಡುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ಈ ಪುಟಾಣಿಯೂ ಮುಂದಿನ ವೈಭವ್ ಸೂರ್ಯವಂಶಿ ಆಗುವಂತಿದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಒಬ್ಬ ಶ್ರೀಮಂತ ಕ್ರಿಕೆಟರನ್ನು ನಾನು ನೋಡಿದೆ. ಅಲ್ಲಿರುವ ಇಬ್ಬರೂ ರನ್ ಗಳಿಸಲು ಸಹಾಯ ಮಾಡುತ್ತಿದ್ದಾರೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ನಾನು ಕ್ರಿಕೆಟ್ ಫ್ಯಾನ್ ಅಲ್ಲ, ಆದರೆ ಈ ವಿಡಿಯೋ ನೋಡಿದೆ. ಕ್ಯೂಟ್ ಬ್ಯಾಟ್ಸಮ್ಯಾನ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








