ಸಂಗೀತ ಕಾರ್ಯಕ್ರಮದಲ್ಲಿ ಅವಾಂತರ ಸೃಷ್ಟಿಸಿದ ಗೂಳಿ, ಎದ್ನೋ ಬಿದ್ನೋ ಎಂದು ಓಡಿದ ಜನ
ಗೂಳಿಗಳು ದಾಳಿ ಮಾಡುವ ವಿಡಿಯೋಗಳನ್ನು ನೋಡಿದಾಗ ಒಂದು ಕ್ಷಣ ಮೈ ಜುಮ್ಮ್ ಎನ್ನುತ್ತದೆ. ಈ ಗೂಳಿ ಏಕಾಏಕಿ ಸಿಟ್ಟುಗೊಂಡರೆ ಇದನ್ನು ನಿಯಂತ್ರಿಸುವುದು ಅಸಾಧ್ಯ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೂಳಿಯೊಂದು ಇದ್ದಕ್ಕಿದ್ದಂತೆ ನುಗಿ ಅಲ್ಲಿ ನೆರೆದಿದ್ದ ಜನರ ಮೇಲೆ ದಾಳಿ ಮಾಡಿದೆ. ಈ ಭಯಾನಕ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಸೋಷಿಯಲ್ ಮೀಡಿಯಾ (social media) ದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಕುತೂಹಲಕಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಈ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋ ದೃಶ್ಯಾವಳಿಗಳು ಗಮನ ಸೆಳೆದರೆ ಕೆಲ ಪ್ರಾಣಿ (animal) ಗಳು ಜನರ ಮೇಲೆ ದಾಳಿ ನಡೆಸುವ ವಿಡಿಯೋಗಳು ಒಂದು ಕ್ಷಣ ಎಲ್ಲರನ್ನು ಬೆಚ್ಚಿ ಬೀಳಿಸುತ್ತವೆ. ಇದೀಗ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೂಳಿ (bull) ಯೊಂದು ಏಕಾಏಕಿ ದಾಳಿ ಮಾಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದನ್ನು ಕಾಣಬಹುದು. ಇಲ್ಲಿ ಸೇರಿರುವ ಜನರು ಸಂಗೀತ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವೇದಿಕೆಯ ಮೇಲೆ ಕಲಾವಿದರು ಹಾಡು ಹಾಡುತ್ತಿದ್ದು, ಅಲ್ಲೇ ಇರುವ ಜನರು ಡಾನ್ಸ್ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಗೂಳಿಯೊಂದು ಅಲ್ಲಿಗೆ ಬಂದಿದ್ದು, ಏಕಾಏಕಿ ಜನರ ಮೇಲೆ ದಾಳಿ ನಡೆಸಿದೆ. ಈ ವೇಳೆ ಗೂಳಿಯ ಅಟ್ಟಹಾಸಕ್ಕೆ ಜನರು ಚಲ್ಲಾಪಿಲ್ಲಿಯಾಗಿ ಓಡುವುದನ್ನು ನೀವಿಲ್ಲಿ ಕಾಣಬಹುದು.
ಇದನ್ನೂ ಓದಿ :ಕಾರಿನ ಮೇಲೆ ನವಜೋಡಿಗಳ ಅಪಾಯಕಾರಿ ಸ್ಟಂಟ್, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
Panic at the disco after a Bull attack: pic.twitter.com/KHhySUOgSC
— Ghar Ke Kalesh (@gharkekalesh) May 13, 2025
ಈ ವಿಡಿಯೋವೊಂದು ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಬಳಕೆದಾರರು ‘ಗೂಳಿ ದಾಳಿಯ ದೃಶ್ಯ ಕಂಡಾಗ ಒಂದು ಕ್ಷಣ ಜೀವ ಬಾಯಿ ಬಂದೇ ಬಿಡ್ತು’ ಎಂದಿದ್ದಾರೆ. ಇನ್ನೊಬ್ಬರು, ಈ ಘಟನೆ ಎಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇದೆಯೇ ಎಂದು ಕೇಳಿದ್ದಾರೆ. ಮತ್ತೊಬ್ಬರು, ‘ಈ ಗೂಳಿ ನನ್ನ ಬಿಟ್ಟು ಹೇಗೆ ಪ್ರೋಗ್ರಾಮ್ ಎಂಜಾಯ್ ಮಾಡುತ್ತೀರಿ ಎಂದು ಹೀಗೆ ಮಾಡಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








