ಚಾಟ್ ಜಿಪಿಟಿನಿಂದಲೇ ಗಂಡ ಕುಡಿದ ಕಾಫಿ ಕಪ್ ವಿಶ್ಲೇಷಣೆ ಮಾಡಿದ ಮಹಿಳೆ, ಮುರಿದೇ ಬಿತ್ತು ದಾಂಪತ್ಯ ಜೀವನ
ತಂತ್ರಜ್ಞಾನವು ಎಷ್ಟು ಒಳ್ಳೆಯದೋ ಅಷ್ಟೇ ಮಾರಕವಾಗಿದೆ. ಕೆಲವರಂತೂ ತಂತ್ರಜ್ಞಾನದಲ್ಲಿ ಒಂದಾದ ಚಾಟ್ ಜಿಪಿಟಿ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಆದರೆ ಇದೀಗ ಇಲ್ಲೊಬ್ಬಳು ಮಹಿಳೆಯೂ ಗಂಡ ಕುಡಿದ ಕಾಫಿ ಕಪ್ ಕೆಳಭಾಗದಲ್ಲಿ ಏನಿದೆ ಎಂದು ಚಾಟ್ ಜಿಪಿಟಿ ಮೂಲಕ ವಿಶ್ಲೇಷಣೆ ಮಾಡಿದ್ದು, ಇದುವೇ ಇವರ ದಾಂಪತ್ಯ ಜೀವನ ಮುರಿಯಲು ಪ್ರಮುಖ ಕಾರಣವಾಗಿದೆ. ಅಷ್ಟಕ್ಕೂ ಚಾಟ್ ಜಿಪಿಟಿಯಲ್ಲಿ ಈ ಮಹಿಳೆ ಕಂಡುಕೊಂಡದ್ದು ಏನು? ಏನಿದು ಘಟನೆ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರೀಸ್, ಮೇ 13 : ನಾವಿಂದು ತಂತ್ರಜ್ಞಾನ (technology) ದೊಂದಿಗೆ ಬೆಸೆದು ಕೊಂಡಿದ್ದೇವೆ. ಈ ಎಐ ಚಾಟ್ ಜಿಪಿಟಿ ಬಂದ ಮೇಲಂತೂ ತಂತ್ರಜ್ಞಾನ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಈ ಚಾಟ್ ಜಿಪಿಟಿ (chat gpt) ಮಾನವ ಭಾಷೆಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರಣ ಹೆಚ್ಚಿನವರು ಇದರ ಮೂಲಕ ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತಾರೆ. ಆದರೆ ಚಾಟ್ ಜಿಪಿಟಿಯಿಂದಲೇ ಹನ್ನೆರಡು ವರ್ಷದ ದಾಂಪತ್ಯ ಜೀವನವು ಮುರಿದು ಬಿದ್ದಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಪತಿ ಕುಡಿದ ಕಾಫಿ ಕಪ್ ಕೆಳಭಾಗದಲ್ಲಿ ಏನು ಉಳಿದಿದೆ ಎನ್ನುವುದನ್ನು ಚಾಟ್ ಜಿಪಿಟಿ ಬಳಸಿ ವಿಶ್ಲೇಷಿಸಿದ್ದಾಳೆ. ಈ ವೇಳೆಯಲ್ಲಿ ಚಾಟ್ ಜಿಪಿಟಿಯಿಂದ ಬಂದ ಪ್ರತಿಕ್ರಿಯೆಯಿಂದ ಆಕೆಯು ತನ್ನ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ಘಟನೆಯೂ ಗ್ರೀಸ್ (greece) ನಲ್ಲಿ ನಡೆದಿದೆ ಎನ್ನಲಾಗಿದೆ.
ಏನಿದು ಈ ಘಟನೆ?
ಗ್ರೀಸ್ ಮಹಿಳೆಯೊಬ್ಬಳು ತನ್ನ ಪತಿಗೆ ಕಾಫಿ ಕುಡಿಯಲು ಕೊಟ್ಟಿದ್ದಾಳೆ. ಪತಿ ಕಾಫಿ ಕುಡಿದು ಮುಗಿಸಿದ ಬಳಿಕ ಕೆಳಭಾಗದಲ್ಲಿ ಏನು ಉಳಿದಿದೆ ಎಂದು ವಿಶ್ಲೇಷಿಸುವ ಸಲುವಾಗಿ ಆಧುನಿಕ ಚಾಟ್ ಜಿಪಿಟಿ ಬಳಸಿದ್ದಾಳೆ. ಕಾಫಿ ಕಪ್ ಕೆಳಭಾಗದ ಕೆಲವು ಫೋಟೋಗಳನ್ನು ಚಾಟ್ ಜಿಪಿಟಿಗೆ ಆಪ್ ಲೋಡ್ ಮಾಡಿದ್ದು, ಈ ವೇಳೆಯಲ್ಲಿ ಬಂದ ಪ್ರತಿಕ್ರಿಯೆಗೆ ಶಾಕ್ ಆಗಿದ್ದಾಳೆ.
ಇದನ್ನೂ ಓದಿ : ಬೈಕ್ ಓಡಿಸುತ್ತಿರುವಾಗಲೇ ಹೃದಯಾಘಾತ, ಆಘಾತಕಾರಿ ವಿಡಿಯೋ ವೈರಲ್
ಹೌದು, ಈ ಮಹಿಳೆಯೂ ಚಾಟ್ ಜಿಪಿಟಿಯಲ್ಲಿ ಟ್ಯಾಸಿಯೋಗ್ರಫಿ ವಿಧಾನ ಬಳಸಿ ಕಾಫಿ ಕಪ್ ವಿಶ್ಲೇಷಣೆ ಮಾಡಲಾಗಿದೆ. ಈ ವೇಳೆಯಲ್ಲಿ ಚಾಟ್ ಜಿಪಿಟಿಯೂ ಮಹಿಳೆಗೆ ಪತಿಯು ಬೇರೆ ಮಹಿಳೆಯ ಬಗ್ಗೆ ಕನಸು ಕಾಣುತ್ತಿದ್ದಾನೆ. ಆ ಮಹಿಳೆಯ ಹೆಸರಿನ ಮೊದಲ ಅಕ್ಷರ ಇ. ಇದಾದ ಬಳಿಕ ಮಹಿಳೆಯೂ ಹಿಂದೆ ಮುಂದೆ ನೋಡದೆ ಪತಿಯ ಬಳಿ ವಿಚ್ಛೇದನ ಕೇಳಿದ್ದಾಳೆ. ಏಕಾಏಕಿ ವಿಚ್ಛೇದನ ಬೇಕೆಂದು ಕೇಳಿದ ಪತ್ನಿಯ ಮಾತು ಕೇಳಿ ತಮಾಷೆಯೆಂದು ಭಾವಿಸಿದ್ದಾನೆ. ಆದರೆ ಆ ಬಳಿಕ ಆತನಿಗೆ ಈ ಬಗ್ಗೆ ಗಂಭೀರವಾಗಿ ಯೋಚಿಸಿದ್ದಾಳೆ ಎನ್ನುವುದು ತಿಳಿದಿದೆ. ಮಹಿಳೆಯ ಪತಿ ನಾನು ಈ ವಿಚಾರದ ಬಗ್ಗೆ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸಿದ್ದೇನೆ ಎಂದಿದ್ದು, ಒಟ್ಟಿನಲ್ಲಿ ಚಾಟ್ ಜಿಪಿಟಿ ಹನ್ನೆರಡು ವರ್ಷದ ದಾಂಪತ್ಯ ಜೀವನವನ್ನು ಕುತ್ತು ತಂದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




